ದ.ಕ ಜಿಲ್ಲಾ ಟೂರಿಸ್ಟ್ ಕಾರು ಮತ್ತು ವ್ಯಾನು ಚಾಲಕರ ಸಂಘದ ಅಧ್ಯಕ್ಷರಾಗಿ ವಿನ್ಸೆಂಟ್ ರೊಡ್ರಿಗಸ್ ಪರ್ಲ
ಬಂಟ್ವಾಳ,ಆ.27: ದ.ಕ ಜಿಲ್ಲಾ ಟೂರಿಸ್ಟ್ ಕಾರು ಮತ್ತು ವ್ಯಾನು ಚಾಲಕರ ಸಂಘ(ರಿ) ಬಿ.ಸಿ.ರೋಡು, ಬಂಟ್ವಾಳ ಇದರ 2014-15ರ ಸಾಲಿನ ಅಧ್ಯಕ್ಷರಾಗಿ ವಿನ್ಸೆಂಟ್ ರೊಡ್ರಿಗಸ್ ಪರ್ಲ ಆಯ್ಕೆಯಾಗಿದ್ದಾರೆ.

ಬಿ.ಸಿ.ರೋಡ್ ಶ್ರೀರಕ್ತೇಶ್ವರಿ ದೇವಿ ಸನ್ನಿಧಿಯ ಸಭಾಂಗಣದಲ್ಲಿ ವ್ಯಾನ್ ಚಾಲಕರ ಸಂಘದ ಅಧ್ಯಕ್ಷ ಶೇಕ್ ಅಬ್ದುಲ್ ರಝಾಕ್ ಸಾಹೇಬ್ ಅಧ್ಯಕ್ಷತೆಯಲ್ಲಿ ನಡೆದ 31ನೇ ವಾರ್ಷಿ ಕ ಮಹಾಸಭೆಯಲ್ಲಿ ನೂತನ ಸಮಿತಿ ಪದಾಕಾರಿಗಳನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ನಾಗೇಶ್ ರೈ ಅಜೆಕಲ, ಅಬ್ದುಲ್ ಲತೀಫ್ ಪರ್ಲಿಯ, ಪಿ. ಶೇಖರ ಮಾಣಿ ಮಜಲು , ಪ್ರಧಾನ ಕಾರ್ಯದರ್ಶಿ ರಘ ಮೆಲ್ಕಾರ್, ಕಾರ್ಯದರ್ಶಿ ಗಳಾಗಿ ವಿಠಲ ರೈ ಮದ್ವಗುತ್ತು. ಎಂ.ಎಸ್ ಅಬ್ದುಲ್ ಲತೀಫ್, ಮದಕ.
ಸಂಘಟನಾ ಕಾರ್ಯದರ್ಶಿಯಾಗಿ ಯಶು ಭಂಡಾರಿಬೆಟ್ಟು, ಕೋಶಾಕಾರಿಯಾಗಿ ರಾಮಕುಲಾಲ್ ಗಾಂದೋಡಿ ಸರ್ವಾನುಮತದಿಂದ ಆಯ್ಕೆಗೊಂಡರು.