Raitha sangha DC A.P.M,C news 7-6-2018 (5)

ಕೋಲಾರ: ಕೃಷಿ ಉತ್ಪನ್ನ ಮಾರುಕಟ್ಟೆಯ ಜಾಗದ ಸಮಸ್ಯೆಯನ್ನು ಕೂಡಲೇ ಬಗೆಹರಿಸಿ, ರೈತರಿಗೆ ಹಾಗೂ ದಲ್ಲಾಳರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು ಮತ್ತು ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ರೈತ ಸಂಘದ  ಒತ್ತಾಯದ ಮೇರೆಗೆ ಜಿಲ್ಲಾಧಿಕಾರಿ ಮತ್ತು ಪೋಲಿಸ್ ವರಿಷ್ಠಾಧಿಕಾರಿಗಳು ಮಾರುಕಟ್ಟೆಗೆ ಭೇಟಿ ನೀಡಿ, ಮಾರುಕಟ್ಟೆಯ ಅವ್ಯವಸ್ಥೆಯ ಬಗ್ಗೆ ಪರೀಶೀಲನೆ ನಡೆಸಿ,ತರಕಾರಿ ಮಾರುಕಟ್ಟೆಗೆ ಜಾಗ ವ್ಯವಸ್ಥೆ ಮಾಡುವ ಭರವಸೆ ನೀಡಿ ಮಾರುಕಟ್ಟೆಯಲ್ಲಿನ ಅವ್ಯವಸ್ಥೆ ವಿರುದ್ಧ ಕಾರ್ಯದರ್ಶಿಯ ಮೇಲೆ ಅಸಮಧಾನಗೊಂಡ ಘಟನೆ ಮಂಗಳವಾರ ನಡೆದಿದೆ.

ಈ ವೇಳೆ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಮಾತನಾಡಿ, ಏಷ್ಯಾದಲ್ಲೇ ಹೆಸರು ಪಡೆದಿರುವ ಕೋಲಾರ ಜಿಲ್ಲೆಯ ಮಾರುಕಟ್ಟೆಯಲ್ಲಿನ ಸ್ಥಳದ ಸಮಸ್ಯೆ ಬಗೆಹರಿಸುವಂತೆ ಮೂರು ವರ್ಷಗಳಿಂದ ಜಿಲ್ಲಾಡಳಿತಕ್ಕೆ ಮತ್ತು ಸಂಬಂಧಪಟ್ಟ ಕೃಷಿ ಉತ್ಪನ್ನ ಅಧಿಕಾರಿಗಳಿಗೂ ಮನವಿ ನೀಡಿದ್ದರೂ ಸ್ಪಂದಿಸದೇ, ರೈತರ ಜೀವನದ ಜತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ದೂರಿದರು.

ಪ್ರತೀ ವರ್ಷ ಟೋಮ್ಯಾಟೋ ಸೀಸನ್ ಬಂದಾಗ ಮಾರುಕಟ್ಟೆಯಲ್ಲಿ ಸೂಕ್ತವಾದ ಜಾಗಗಳಿಲ್ಲದೇ, ಹಾಗೂ ಟ್ರಾಫಿಕ್ ಸಮಸ್ಯೆಯಿಂದ ರೈತರು ಬೆಳೆದ ಬೆಳೆಗೆ ಉತ್ತಮವಾದ ಬೆಲೆ ಸಿಗುತ್ತಿಲ್ಲ. ಪ್ರಥಮವಾಗಿ ಲೋಡ್ ಮಾಡಲು ಅವಕಾಶ ಇರುವ ದಲ್ಲಾಳರ ಅಂಗಡಿಯ ಬೆಲೆ ಕಡೆಯ ಅಂಗಡಿಯಲ್ಲಿ ಸಿಗದೇ ರೈತ ಒದ್ದಾಡುತ್ತಿದ್ದಾನೆ. ಮತ್ತೊಂದೆಡೆ ಹೆಚ್ಚಿನ ಆವಕ ಮಾರುಕಟ್ಟೆಗೆ ಬರುತ್ತಿರುವುದರಿಂದ ಮಾರುಕಟ್ಟೆಯಲ್ಲಿನ ಮಧ್ಯಭಾಗದಲ್ಲಿರುವ ತರಕಾರಿ ಮಾರುಕಟ್ಟೆಗೆ ಬರುವ ತರಕಾರಿಯನ್ನು ತಲುಪಿಸಲು ಟೆಂಪೋ ಮಾಲಕರು ಹರಸಾಹಸ ಪಡುತ್ತಾರೆ. ಆದರೂ, ಸಮಯಕ್ಕೆ ಸರಿಯಾಗಿ, ತರಕಾರಿ ತಲುಪಿಸದೇ, ರೈತರು ತಂದ ಬೆಳೆಗೆ ಸೂಕ್ತವಾದ ಬೆಲೆ ಸಿಗದೇ, ಕಂಗಾಲಾಗುತ್ತಿದ್ದಾನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಸುತ್ತಮುತ್ತಲು ನೂರಾರು ಎಕರೆ ಸರ್ಕಾರಿ ಜಮೀನಿದ್ದರೂ, ಮಾರುಕಟ್ಟೆಗೆ ನಲವತ್ತು ಎಕರೆ ಜಾಗ ಗುರುತಿಸುವಲ್ಲಿ ವಿಫಲವಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಹಾಗೂ ಬಲಾಡ್ಯ ರಾಜಕಾರಣಿಗಳಿಗೆ ಮಂಜೂರು ಮಾಡಲು ಜಮೀನು ಇರುತ್ತದೆ. ಸ್ಥಳವನ್ನೂ ಸಹ ಕೆಲವೇ ಕೆಲವು ಅಧಿಕಾರಿಗಳು ನೋಡಿರುತ್ತಾರೆ. ಇಡೀ ದೇಶಕ್ಕೆ ಹಾಕುವ ಅನ್ನದಾತನು ಬೆಳೆಯುವ ಬೆಳೆಗಳನ್ನು ಮಾರಾಟ ಮಾಡಲು ಸೂಕ್ತವಾದ ಮಾರುಕಟ್ಟೆ ವ್ಯವಸ್ಥೆ ಮಾಡಲು ಜಾಗದ ಸಮಸ್ಯೆ ಹೇಳಿ ಈಗಾಗಲೇ ನೊಂದಿರುವ ರೈತ ಕುಟುಂಬಗಳನ್ನು ಜೀವಂತವಾಗಿ ಕೊಲೆ ಮಾಡುತ್ತಿದ್ದಾವೆ ಎಂದು ಜಿಲ್ಲಾಡಳಿತ ಕೂಡಲೇ ಮಾರುಕಟ್ಟೆಗೆ ಸ್ಥಳವನ್ನು ಗುರುತಿಸಬೇಕು. ಮಾರುಕಟ್ಟೆಯ ಪಕ್ಕದಲ್ಲೇ ಇರುವ ಇಫ್ಕೋ ಟೋಕಿಯೋ ವ್ಯಾಪ್ತಿಗೆ ಬರುವ ನಾಲ್ಕು ಎಕರೆ ಜಾಗದಲ್ಲಿ ತಾತ್ಕಾಲಿಕವಾಗಿ ತರಕಾರಿ ವ್ಯಾಪಾರ ಮಾಡಲು ಅನುವು ಮಾಡಿಕೊಡಲು ಎಲ್ಲಾ ವ್ಯವಸ್ಥೆಯಿದ್ದರೂ, ಮಾನ್ಯ ಹಾಲಿ ಶಾಸಕರು ಮನಸ್ಸು ಮಾಡದೇ ಮೌನವಾಗಿರುವುದು ಯಾವ ಕಾರಣಕ್ಕಾಗಿ ಎಂಬುದು ತಿಳಿಯುತ್ತಿಲ್ಲ. ಕೋಟ್ಯಾಂತರ ರೂ. ವ್ಯಾಪಾರ ನಡೆಯುವ ಮಾರುಕಟ್ಟೆಯಲ್ಲಿ ಜಾಗದ ಸಮಸ್ಯೆ ಜೊತೆಗೆ ಅವ್ಯವಸ್ಥೆಗಳ ಕೂಪವೇ ಆಗಿದೆ. ಸಾವಿರಾರು ಜನ ಕೆಲಸ ಮಾಡುವ ಮಾರುಕಟ್ಟೆಯಲ್ಲಿ ರೈತರ್ಯಾರು, ವ್ಯಾಪಾರಸ್ಥರು ಯಾರು, ಹಮಾಲಿಗಳು ಯಾರು? ಕೂಲಿ ಕಾರ್ಮಿಕರು ಯಾರು ಎಂಬುದೇ ತಿಳಿಯದಾಗಿದೆ. ಸರ್ಕಾರದಿಂದ ಬರುವ ಮಾರುಕಟ್ಟೆ ಅಭಿವೃದ್ಧಿ ಹಣ ಅಧಿಕಾರಿಗಳ ಜೇಬು ಸೇರುತ್ತದೆಯೇ ಹೊರತು ಅಭಿವೃದ್ಧಿಯಾಗುತ್ತಿಲ್ಲವೆಂದು ಆಡಳಿತ ಮಂಡಳಿ ವಿರುದ್ದ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರು.

ಮಾರುಕಟ್ಟೆಗೆ ಬೇಟಿ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಜಿ.ಸತ್ಯವತಿ, ಮಾರುಕಟ್ಟೆಯಲ್ಲಿ ಅವ್ಯವಸ್ಥೆಯ ಕೂಪವಾಗಿದೆ. ಇರುವ ಜಾಗವನ್ನು ಸದುಪಯೋಗಪಡಿಸಿಕೊಳ್ಳದೆ ಬೇಕಾಬಿಟ್ಟಿ ಮಳಿಗೆಗಳಿಗೆ ಪರವಾನಗಿ ನೀಡಿ ಈಗ ಜಾಗದ ಸಮಸ್ಯೆ ಎಂದು ಜಿಲ್ಲಾದಿಕಾರಿಗಳ ಬಳಿ ಬರುತ್ತೀರಾ? ಕೃಷಿ ಮಾರುಕಟ್ಟೆಯ ಜಮೀನನ್ನು ಯಾರನ್ನು ಕೇಳಿ 4 ಎಕರೆ ಪೆಡರೇಷನ್‍ರವರಿಗೆ ನೀಡಿದ್ದೀರಾ? ಮಾರುಕಟ್ಟೆಗೆ ಸಂಬಂದಪಟ್ಟ ಎಲ್ಲಾ ದಾಖಲೆಗಳೊಂದಿಗೆ ಸಂಜೆ 5.30ಕ್ಕೆ ಕಚೇರಿಗೆ ಬನ್ನಿ, ನಿಮ್ಮ ಆಡಳಿತ ಮಂಡಳಿ ಯಾವುದೇ ಕ್ರಮ ಮೌನವಾಗಿರುವುದಕ್ಕೆ ಕಾರಣವೇನು ಇಷ್ಟೇಲ್ಲಾ ಅವ್ಯವಸ್ಥೆ ಮಾರುಕಟ್ಟೆಯಲ್ಲಿ ಇರಲು ಕಾರಣವೇನು? ಎಂದು ಕಾರ್ಯದರ್ಶಿ ರವಿಕುಮಾರ್‍ರವರಿಗೆ  ಪ್ರಶ್ನೇ ಕೇಳಿದಾಗ ಉತ್ತರ ನೀಡದೇ ಮೌನವಾಗಿದ್ದರು.

ಪೋಲಿಸ್ ವರಿಷ್ಠಾದಿಕಾರಿಗಳಾದ ರೋಹಿಣಿ ಕಟೋಚ್ ಸಪೇಟ್‍ರವರು ಮಾತನಾಡಿ, ಮಾರುಕಟ್ಟೆಯಲ್ಲಿ ಹೆಚ್ಚಿನ ಟೋಮೋಟೋ ಹಾಗೂ ಬರುತ್ತಿರುವುದರಿಂದ ಟ್ರಾಪಿಕ್ ಸಮಸ್ಯೆ ಹೆಚ್ಚಾಗಿದ್ದು,  ಈ ಕಾರಣದಿಂದ ಮಾಲೂರು ಮುಖ್ಯರಸ್ತೆ ಹಾಗೂ ಬೆಂಗಳೂರು  ಪಾದಚಾರಿ ರಸ್ತೆ ಒನ್ ವೇ ಮಾಡುವ ಭರವಸೆ ನೀಡುವ ಜೊತೆಗೆ ಹೆಚ್ಚಿನ ಪೋಲಿಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗುವುದೆಂದು ಹೇಳಿದರು.

ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್‍ಪೆಕ್ಟರ್ ಲೋಕೆಶ್, ಸಹಾಯಕ ಕಾರ್ಯದರ್ಶಿ ರವಿ, ಮುನಿರಾಜು, ವಿಶ್ವನಾಥ್, ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್, ಮಹಿಳಾ ಜಿಲ್ಲಾಧ್ಯಕ್ಷೆ ಎ. ನಳಿನಿ,  ಎ.ಪಿ.ಎಂ.ಸಿ ಪುಟ್ಟರಾಜು, ಕೆ.ವಿ.ಎಂ ಮಂಜುನಾಥ್, ಜಿ.ಬಿ.ಆರ್ ಸತೀಶ್, ಕೆಂಬೋಡಿ ಕೃಷ್ಣೇಗೌಡ, ಪುರುಷೋತ್ತಮ್, ಮೂರಂಡಹಳ್ಳಿ ಶಿವಾರೆಡ್ಡಿ, ಆಂಬ್ಲಿಕಲ್ ಮಂಜುನಾಥ್, ಟೋಮೋಟೋ ಮಂಡಿ ಮಾಲೀಕರು ತರಕಾರಿ ಮಂಡಿ ಮಾಲೀಕರು ಮತ್ತಿತರರು ಭಾಗವಹಿಸಿದ್ದರು.

Raitha sangha DC A.P.M,C news 7-6-2018

Raitha sangha DC A.P.M,C news 7-6-2018 (2)

By suddi9

Leave a Reply

Your email address will not be published. Required fields are marked *