ಬಂಟ್ವಾಳ : ತಹಶೀಲ್ದಾರ್ ಮತ್ತು ಕಾರ್ಯನಿರ್ವಾಹಕ ದಂಡಾಧಿಕಾರಿಯಾಗಿ ಪುರಂದರ ಹೆಗಡೆಯವರು ಮತ್ತೊಮ್ಮೆ ನಿಯುಕ್ತಿಗೊಂಡಿದ್ದು ಸೋಮವಾರ ಪ್ರಭಾರ ಅಧಿಕಾರಿ ಜಿ.ಸಂತೋಷ್ ರವರಿಂದ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಮತ್ತೊಮ್ಮೆ ಬಂಟ್ವಾಳ ತಾಲೂಕಿನಲ್ಲಿ ಜನರ ಸೇವೆ ಸಲ್ಲಿಸಲು ದೇವರು ಅವಕಾಶ ಕಲ್ಪಿಸಿದ್ದು ಸಂತಸ ತಂದಿದೆ ಎಂದು ನುಡಿದರು. ಮೇಲಾಧಿಕಾರಿಗಳು ತಮ್ಮ ಅಧಿಕಾರವನ್ನು ಕಾನೂನಿನ ಚೌಕಟ್ಟಿನಲ್ಲಿ ಸ್ವಚ್ಛ ಆಡಳಿತ ನಡೆಸಬೇಕು . ಈ ನಿಟ್ಟಿನಲ್ಲಿ ಪುರಂದರ ಹೆಗಡೆ ಯವರ ಜನಸ್ನೇಹಿಯಾದ ಸೇವಾ ವೈಖರಿ ಸಿಬ್ಬಂದಿ ವರ್ಗಕ್ಕೆ ಅನುಕರಣೀಯ ಎಂದು ಐಎಎಸ್ ಅಧಿಕಾರಿ ಸಂತೋಷ್ ಜಿ ಯವರು ಅಭಿನಂದಿಸಿದರು.
ಉಪತಹಶೀಲ್ದಾರ್ ಗಳಾದ ವಾಸು ಶೆಟ್ಟಿ, ರಾಜೇಶ್ ನಾಯಕ್, ಗ್ರೆಟ್ಟಾ ಮಸ್ಕರೇನಸ್, ಸೀತಾರಾಮ, ತಾಲೂಕು ಕಛೇರಿ ಸಿಬ್ಬಂದಿ ವರ್ಗ, ಭೂಮಾಪನಾ ಅಧಿಕಾರಿಗಳು , ಸಿಬ್ಬಂದಿ ವರ್ಗ, ಗ್ರಾಮ ಸಹಾಯಕರು ತಹಶೀಲ್ದಾರ್ ರಿಗೆ ಶುಭ ಹಾರೈಸಿದರು. ನವೀನ್ ಬೆಂಜನಪದವು ಸ್ವಾಗತಿಸಿದರು. ರಾಮ ಕಾಟಿಪಳ್ಳ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

