ಮೂಡುಬಿದಿರೆ: ಇಲ್ಲಿನ ಸ್ವರಾಜ್ಯ ಮೈದಾನದ ಬಳಿಯಿರುವ ಶ್ರೀಆದಿಶಕ್ತಿ ಮಹಾಕಾಳಿ ದೇವಸ್ಥಾನದ(ಮಾರಿಗುಡಿ) ಪಶ್ಚಿಮ ಭಾಗದಲ್ಲಿರುವ ಆವರಣಗೋಡೆ ಮಳೆಗೆ ಮಂಗಳವಾರ ಕುಸಿದಿದೆ.

ಆದಿಶಕ್ತಿ ದೇವಸ್ಥಾನದ ಹಿಂಬದಿಯ ಸುಮಾರು 18 ಫೀಟ್ ಗೋಡೆ ಕುಸಿದಿದ್ದು, ಪಶ್ಚಿಮ ಭಾಗದಲ್ಲಿರುವ ರಮೇಶ್ ಶಾಂತಿ ಎಂಬವರ ಮನೆಯಂಗಳಕ್ಕೆ ಬಿದ್ದಿದ್ದು, ಮನೆಯ ನೀರಿ ಟ್ಯಾಪ್ ಹಾನಿಯಾಗಿದೆ. ಸುಮಾರು 18 ವರ್ಷದ ಹಿಂದೆ ನಿರ್ಮಾಣಗೊಂಡಿರುವ ಗೋಡೆಯು ಕುಸಿಯುವ ಬಗ್ಗೆ ಮನೆಯ ಸುದರ್ಶನ್ ಎಂ. ಅವರ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರು. ಹಿಂದೆ ಅದನ್ನು ಪರಿಶೀಲಿಸಿದ ಇಂಜಿನಿಯರ್ ಓರ್ವರು ಅಪಾಯದಲ್ಲಿಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಮಂಗಳವಾರ ಗೋಡೆ ಕುಸಿದೆ.
ವಾರ್ಡ್ ಸದಸ್ಯ ಮನೋಜ್ ಶೆಟ್ಟಿ, ಪುರಸಭಾ ಮುಖ್ಯಾಧಿಕಾರಿ ಶೀನ ನಾಯ್ಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
