ಮೂಡುಬಿದಿರೆ: ನಮ್ಮ ದೇಶ ಅಪಾರ ಸಂಪತ್ತು, ಸಂಸ್ಕøತಿ, ಮೌಲ್ಯಗಳನ್ನು ಹೊಂದಿರುವ ದೇಶ. ಸ್ತ್ರೀ ಶಕ್ತಿ, ಯುವಶಕ್ತಿಯಿಂದ ಶ್ರೇಷ್ಠ ಭಾರತ ನಿರ್ಮಾಣಗೊಳ್ಳಲು ಸಾಧ್ಯ. ಮೌಲ್ಯಯುತವಾದ ಜೀವನದಿಂದ ಸಮಾಜದಲ್ಲಿ ಗೌರವ ಸಿಗುತ್ತದೆ. ಜೀವನ ಮೌಲ್ಯದ ಮೂಲಕ ಯುವಕರು ಹೊಸ ಮನ್ವಂತರವನ್ನು ಸೃಷ್ಟಿಸುವ ಸಾಧ್ಯತೆಗಳತ್ತ ಗಮನವಹಿಸಬೇಕು ಎಂದು ದೂರದರ್ಶನ ಕೇಂದ್ರದ ನಿವೃತ್ತ ಹೆಚ್ಚುವರಿ ಮಹಾ ನಿರ್ದೇಶಕ ನಾಡೋಜ ಡಾ. ಮಹೇಶ್ ಜೋಶಿ ಹೇಳಿದರು.
ಶಿರ್ತಾಡಿ ಶ್ರೀ ಬ್ರಹ್ಮ ರೆಸಿಡೆನ್ಸಿ ಸಭಾಂಗಣದಲ್ಲಿ ಭಾನುವಾರ ನಡೆದ ಮುಂಡ್ಕೂರು ಭಾರ್ಗವ ಜೆಸಿಐ ಸಂಯೋಜನೆಯಲ್ಲಿ ಜೂನಿಯರ್ ಜೇಸಿ ಮತ್ತು ಜೇಸಿರೆಟ್ ವಲಯದ ಮನ್ವಂತರ ಸಮ್ಮೇಳನದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ಸಮ್ಮೇಳನವನ್ನು ಜೆಸಿಐ ಪೂರ್ವಾಧ್ಯಕ್ಷ ರಾಕೇಶ್ ಕುಂಜೂರು ಉದ್ಘಾಟಿಸಿದರು. ಮಾಜಿ ಸಚಿವ ಅಭಯಚಂದ್ರ ಜೈನ್, ಮಹಿಳಾ ಜೇಸಿ ಮತ್ತು ಜೇಸಿರೇಟ್ ವಿಭಾಗದ ರಾಷ್ಟ್ರೀಯ ನಿರ್ದೇಶಕಿ ಕವಿತಾ ಸೋನಿ, ವಲಯದ ಪ್ರಥಮ ಮಹಿಳೆ ಸೌಮ್ಯ ರಾಕೇಶ್, ಮುಡ್ಕೂರ್ ಜೇಸಿರೇಟ್ ಅಧ್ಯಕ್ಷೆ ಸೌಮ್ಯ ವೆಂಕಟೇಶ್, ಜ್ಯೂನಿಯರ್ ಜೇಸಿ. ಅಧ್ಯಕ್ಷ ಅಮೂಲ್ಯ ರಾವ್, ವಲಯ ಉಪಾಧ್ಯಕ್ಷ ರಘುನಾಥ್ ನಾಯಕ್, ಹಾಗೂ ಎಲ್ಲಾ ವಲಯಾಧಿಕಾರಿ, ಪೂರ್ವ ವಲಯಾಧಿಕಾರಿ, ಸ್ಥಾಪಕ ಸದಸ್ಯರು ಉಪಸ್ಥಿತರಿದ್ದರು.
ಮುಂಡ್ಕೂರು ಭಾರ್ಗವ ಜೆಸಿಐನ ಮನ್ವಂತರ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಅಂತರಾಷ್ಟ್ರೀಯ ಮಟ್ಟದ ತ್ರೋಬಾಲ್ ಆಟಗಾರ್ತಿ ಜ್ಯೋತಿ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಮೂಂಡ್ಕೂರು ಜೆಸಿಐನ ಅಧ್ಯಕ್ಷೆ ಅರುಣಾ ಕುಲಾಲ್ ಸ್ವಾಗತಿಸಿದರು. ಜೇಸಿರೇಟ್ ನಿರ್ದೇಶಕಿ ರಮ್ಯ ಅರುಣ್ ರಾವ್ ಕಾರ್ಯಕ್ರಮ ನಿರೂಪಿಸಿದರು. ಜೆಸಿಐ ಕಾರ್ಯದರ್ಶಿ ಪ್ರಕಾಶ್ ನಾಯ್ಕ್ ವಂದಿಸಿದರು.