ಮೂಡುಬಿದಿರೆ: ಭಾರತೀಯ ಜೈನ್ ಮಿಲನ್ ಮೂಡುಬಿದಿರೆ ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಮೂಡುಬಿದಿರೆ ಮಹಾವೀರ ಭವನದಲ್ಲಿ ನಡೆಯಿತು.
ಸಂಘಟನೆಗಳು ಸಮಾಜಮುಖಿ ಕೆಲಸಗಳನ್ನು ಮಾಡುವುದರ ಜತೆಗೆ ಪರಿಸರದ ಬಗ್ಗೆಯು ಕಾಳಜಿ ವಹಿಸಬೇಕು. ಸಂಘಟನಾತ್ಮಕವಾಗಿ ಕೆಲಸ ಮಾಡಿದಾಗ ಯಶಸ್ಸು ಲಭಿಸುತ್ತದೆ. ಸಾಧನೆ ಮಾಡಿದ ವ್ಯಕ್ತಿ ಯಾರೆ ಆದರೂ ಅಂತವರನ್ನು ಗುರುತಿಸಿ ಗೌರವಿಸುವುದರಿಂದ ಅವರಿಗೆ ಇನ್ನಷ್ಟು ಪ್ರೋತ್ಸಾಹ ಕೊಟ್ಟಂತಾಗುತ್ತದೆ ಎಂದು ಭಾರತೀಯ ಜೈನ್ ಮಿಲನ್ ವಲಯ 8ರ ಮಹಿಳಾ ವಿಭಾಗದ ಅಧ್ಯಕ್ಷೆ ಧರ್ಮಸ್ಥಳದ ಅನಿತಾ ಕುಮಾರ ಸ್ವಾಮಿ ಹೇಳಿದರು.
ಮುಖ್ಯ ಅತಿಥಿ ವಕೀಲರಾದ ಎಂ.ಕೆ ವಿಜಯ್ ಕುಮಾರ್ ಮಾತನಾಡಿ ಮಹಿಳೆಯರ ಕೈಗೆ ಅಧಿಕಾರ ಸಿಕ್ಕರೆ ಅದನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಬಲ್ಲರು ಎಂದರು.
ಎಸ್‍ಎಸ್‍ಎಲ್‍ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಪ್ರಾಂಸುಲ ಪ್ರಶಾಂತ್, ಕ್ರೀಡಾ ಸಾಧಕರಾದ ಪಾಶ್ರ್ವನಾಥ್ ಜೈನ್ ಮತ್ತು ಸುಪಾಶ್ರ್ವ ಕೊಂಬ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.

ನಿರ್ಗಮನ ಅಧ್ಯಕ್ಷರಾದ ಧನಕೀರ್ತಿ ಬಲಿಪ ಸಾಂದರ್ಭಿಕವಾಗಿ ಮಾತನಾಡಿದರು. ಅಳಿಯೂರಿನ ಸುಧೀರ್ ಜೈನ್ ಅವರ ವೈದ್ಯಕೀಯ ಚಿಕಿತ್ಸೆಗೆ ರೂ 42 ಸಾವಿರ ನಗದನ್ನು ನೀಡಲಾಯಿತು.
ಜೈನ್‍ಮಿಲನ್‍ನ ನೂತನ ಅಧ್ಯಕ್ಷೆಯಾಗಿ ಆಯ್ಕೆಗೊಂಡ ವಕೀಲೆ ಶ್ವೇತಾ ಜೈನ್ ತಮ್ಮ ಮುಂದಿನ ಯೋಜನೆಗಳ ಬಗ್ಗೆ ತಿಳಿಸಿ ಎಲ್ಲರ ಸಹಕಾರ ಕೋರಿದರು.
ಮಾಜಿ ಸಚಿವ ಅಭಯಚಂದ್ರ ಜೈನ್, ಜೈನ್ ಮಿಲನ್ ವಲಯ 8ರ ಉಪಾಧ್ಯಕ್ಷ ಪುಷ್ಪರಾಜ್ ಜೈನ್, ನಿರ್ದೇಶಕ ಜಯರಾಜ್ ಕಂಬ್ಳಿ, ನೂತನ ಕಾರ್ಯದರ್ಶಿ ರಶ್ಮಿತಾ ಜೈನ್, ಖಜಾಂಜಿ ದಿವ್ಯಾ ವಿರೇಂದ್ರ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. . ನವೀನ್ ಅಂಬೂರಿ ನಿರೂಪಿಸಿದರು. ಉದಯ ಕುಮಾರ್ ಸ್ವಾಗತಿಸಿದರು.
