ಮೂಡಬಿದಿರೆ: ಆಳ್ವಾಸ್ ಕಾಲೇಜಿನ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಸೆಲ್ ವತಿಯಿಂದ ಆಯೋಜಿಸಲಾಗಿದ್ದ ಬೌದ್ಧಿಕ ಆಸ್ತಿ ಹಕ್ಕು ಕಾಯ್ದೆಯ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ವೈಕುಂಠ ಭಾಳಿಗ ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೋ.ಪ್ರಕಾಶ್ ಕಣಿವೆ ಮಾತನಾಡಿ, ಮೂಲ ಸಂಶೋಧಕನ ಹಿತಾಸಕ್ತಿ ಕಾಪಾಡುವಲ್ಲಿ ಬೌದ್ಧಿಕ ಆಸ್ತಿ ಹಕ್ಕಿನ ಕಾಯ್ದೆ ಅಗತ್ಯವಾಗಿದೆ. ಯಾವುದೇ ಹೊಸ ಸಂಶೋಧನೆಯ ಬಳಿಕ ಬೌದ್ಧಿಕ ಆಸ್ತಿ ಹಕ್ಕನ್ನು ಪ್ರತಿಪಾದಿಸಿ ಅದರ ಹಕ್ಕನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಬೌದ್ಧಿಕ ಆಸ್ತಿಗಳನ್ನು ಅಧಿಕಾರ ಕ್ಷೇತ್ರ ಹೊರತುಪಡಿಸಿ ಶೈಕ್ಷಣಿಕ ಮತ್ತು ಸಂಶೋಧನ ಕ್ಷೇತ್ರಗಳಲ್ಲಿ ಮುಕ್ತವಾಗಿ ಬಳಸಿಕೊಳ್ಳಲು ಅವಕಾಶವಿದೆ. ಪ್ರತಿಯೊಬ್ಬ ಸಂಶೋಧಕನಿಗೆ ಯಾವ ವಿಷಂiÀiಗಳು ಪೇಟೆಂಟ್, ಕೃತಿ ಸ್ವಾಮ್ಯ ಹಾಗೂ ಬೌದ್ಧಿಕ ಆಸ್ತಿಯ ಹಕ್ಕಿನ ವ್ಯಾಪ್ತಿಯೊಳಗೆ ಬರುತ್ತದೆ ಎಂಬ ಅರಿವು ಅಗತ್ಯವಾಗಿರುತ್ತದೆ ಎಂದು ಹೇಳಿದ ಅವರು ಈ ಹಕ್ಕುಗಳ ಕುರಿತು ಇರುವ ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು.
ಪೇಟೆಂಟ್ ಪಡೆಯುವ ಹಕ್ಕು ಕೇವಲ ಸಂಶೋಧಕನಿಗೆ ಮಾತ್ರ ಇರುತ್ತದೆ. ಕಾನೂನಿನ ಅನ್ವಯ ಬೇರಾರು ಇದನ್ನು ದುರುಪಯೋಗ ಪಡಿಸಿಕೊಳ್ಳುವಂತಿಲ್ಲ. ನಿಯೋಜಿತ ರೀತಿಯಲ್ಲಿ ಹಕ್ಕು ಸ್ವಾಮ್ಯ ಪ್ರಕ್ರಿಯೆ ಜರುಗುತ್ತದೆ. ಈ ಹಕ್ಕುಗಳ ದುರುಪಯೋಗ ನಡೆದಲ್ಲಿ ಕ್ರಿಮಿನಲ್ ಮತ್ತು ಸಿವಿಲ್ ಮೊಕದ್ದಮೆಗಳನ್ನು ದಾಖಲಿಸುವ ಹಕ್ಕು ಸಂಬಂಧಪಟ್ಟ ವ್ಯಕ್ತಿಗೆ ಇರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಐಕ್ಯೂಎಸ್ಸಿ ಸಂಯೋಜಕರಾದ ರಾಮ್ಭಟ್, ಕಾರ್ಯಕ್ರಮ ಸಂಯೋಜಕ ಡಾ ರಾಘವೇಂದ್ರ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅನ್ವಹಿಕ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ರಶ್ಮಿ ಕೆ ನಿರೂಪಿಸಿದರು.