ಮೂಡುಬಿದಿರೆ: ಎಸ್.ಕೆ.ಎಸ್.ಎಸ್.ಎಫ್. ಮೂಡುಬಿದಿರೆ ವಲಯ ಸಮಿತಿಯ “ಫ್ರೀಡಂ ಸ್ವ್ಕಾರ್” ಸೌಹಾರ್ಧ ಕಾರ್ಯಕ್ರಮವು ಹಂಡೇಲು ಮಸೀದಿ ವಠಾರದಲ್ಲಿ ಬುಧವಾರ ನಡೆಯಿತು.
ಹಂಡೇಲು ಜುಮ್ಮಾ ಮಸೀದಿ ಖತೀಬರಾದ ಬಹು.ಮೊಹಮ್ಮದ್ ಹನೀಫ್ ಫೈಝಿ ದುಆದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

16 mood SKSSF 2
ಎಸ್.ಕೆ.ಎಸ್.ಎಸ್.ಎಫ್. ಮೂಡುಬಿದಿರೆ ವಲಯಾಧ್ಯಕ್ಷ ಮಾಲಿಕ್ ಅಬ್ದುಲ್ ಅಝೀಝ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಪ್ರತಿಜ್ಞಾ ವಿಧಿ ಬೋಧಿಸಿದರು.

16 mood SKSSF
ಮೂಡುಬಿದಿರೆ ಟೌನ್ ಜುಮ್ಮಾ ಮಸೀದಿಯ ಖತೀಬರಾದ ಬಹು.ಮುಸ್ತಫಾ ಯಮಾನಿ ಕಾರ್ಯಕ್ರಮ ಉದ್ಘಾಟಿಸಿದರು.
ಬಲ್ಯೊಟ್ಟು ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಮಡಂತ್ಯಾರು ಚರ್ಚ್ ಧರ್ಮಗುರು ರೆ.ಫಾ. ಬೇಸಿಲ್ ವಾಸ್ ಹಾಗೂ ಎಸ್.ಕೆ.ಎಸ್.ಎಸ್.ಎಫ್. ಕೇಂದ್ರ ಸಮಿತಿಯ ಸದಸ್ಯ ಬಹು.ಇಸ್ಹಾಕ್ ಫೈಝಿ ಕುಕ್ಕಿಲ ಮುಖ್ಯ ಪ್ರಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.

16 mood SKSSF 3
ಹಂಡೇಲು ಮೊಹಿದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷ ಹೆಚ್.ಎಂ.ಅಬ್ದುಲ್ ಖಾದರ್, ಎಸ್.ಕೆ.ಎಸ್.ಎಸ್.ಎಫ್. ಮೂಡುಬಿದಿರೆ ವಲಯ ಕೋಶಾಧಿಕಾರಿ ಯು.ಕೆ.ಮೊಹಮ್ಮದ್, ಉದ್ಯಮಿ ಅಬುಲ್ ಅಲಾ ಪುತ್ತಿಗೆ, ಎಸ್.ಕೆ.ಎಸ್.ಎಸ್.ಎಫ್. ಕೇಂದ್ರ ಸಮಿತಿಯ ಸದಸ್ಯ ಹಕೀಂ ಪರ್ತಿಪ್ಪಾಡಿ ಉಪಸ್ಥಿತರಿದ್ದರು.
ಮೂಡುಬಿದರೆ ವಲಯದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಫಾರೂಕ್ ಸ್ವಾಗತಿಸಿ, ಶಾಫಿ ಪಡ್ಡಂದಡ್ಕ ಕಾರ್ಯಕ್ರಮ ನಿರೂಪಿಸಿ, ಶಬ್ಬೀರ್ ಅಹ್ಮದ್ ಹಂಡೇಲು ವಂದಿಸಿದರು.

By suddi9

Leave a Reply

Your email address will not be published. Required fields are marked *