ಮೂಡುಬಿದಿರೆ: ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸಿ ಅವರ ಮನೆಗೆ ತೆರಳಿ ಅವರನ್ನು ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮವನ್ನು ಮೂಡುಬಿದಿರೆ ಜೈನ್ ಮಿಲನ್ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಮೂಡುಬಿದಿರೆ ಜೈನ್‍ಮಿಲನ್ ಅಧ್ಯಕ್ಷೆ ನ್ಯಾಯವಾದಿ ಶ್ವೇತಾ ಜೈನ್ ಅವರ ಅಧ್ಯಕ್ಷತೆಯಲ್ಲಿ ಭಾರತೀಯ ಜೈನ್ ಮಿಲನ್ ಸದಸ್ಯರು, ಸರ್ವಮಂಗಳ ಮಹಿಳಾ ಬಳಗದ ಸದಸ್ಯೆಯರು ಮತ್ತು ಯುವ ಜೈನ್ ಮಿಲನ್ ಪದಾಧಿಕಾರಿಗಳು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಪಡಂಗಡಿ ಭೋಜರಾಜ ಹೆಗ್ಡೆ ಮತ್ತು ಭಾರತೀಯ ವಾಯುದಳದ ನಿವೃತ್ತ ಅಧಿಕಾರಿ ಎಂ. ಆರ್. ಜೈನ್ ಅವರಿಗೆ ಹಾರ ಹಾಕಿ, ಶಾಲು ಹೊದಿಸಿ, ಫಲ ಪುಷ್ಪ, ಸ್ಮರಣಿಕೆ ನೀಡಿ ಗೌರವಿಸಿದರು.
ಸಧ್ಯ ಚಿಕಿತ್ಸೆಯ ನಿಮಿತ್ತ ಉಜಿರೆಯ ಎಸ್.ಡಿ.ಯಂ. ಆಸ್ಪತ್ರೆಗೆ ದಾಖಲಾಗಿರುವ ಪಡಂಗಡಿ ಭೋಜರಾಜ ಹೆಗ್ಡೆಯವರನ್ನು ಆಸ್ಪತ್ರೆಯ ಚಿಕಿತ್ಸಾ ಕೊಠಡಿಯಲ್ಲೇ ಸನ್ಮಾನಿಸಲಾಯಿತು. ಯುವ ಜೈನ್ ಮಿಲನ್ ಅಧ್ಯಕ್ಷ ಉಳಿಯಬೀಡು ನಿತೇಶ್ ಬಲ್ಲಾಳ್ ಪ್ರಾಸ್ತಾವಿಕವಾಗಿ ಮಾತನಾಡಿ ಪಡಂಗಡಿ ಭೋಜರಾಜ ಹೆಗ್ಡೆಯವರನ್ನು ಜೈನ್ ಮಿಲನ್ ಸದಸ್ಯರಿಗೆ ಪರಿಚಯಿಸಿದರು. ಮೂಡುಬಿದಿರೆ ಜೈನ್‍ಮಿಲನ್ ನೀಡಿದ ಗೌರವವನ್ನು ಸ್ವೀಕರಿಸಿ ಆನಂದ ತುಂದಿಲರಾದ ವಯೋವೃದ್ಧ ಪಡಂಗಡಿ ಭೋಜರಾಜ ಹೆಗ್ಡೆಯವರು “ಆರೋಗ್ಯವೇ ಭಾಗ್ಯ. ಶಾಂತಿಯೇ ಸೌಭಾಗ್ಯ. ಆರೋಗ್ಯ ಮತ್ತು ಶಾಂತಿಯನ್ನು ಕಾಪಿಟ್ಟುಕೊಂಡು ಬದುಕಿದರೆ ಜೀವನದಲ್ಲಿ ನೆಮ್ಮದಿ ಕಾಣಲು ಸಾಧ್ಯ ಎಂದು ಹಿತವಚನ ನುಡಿದರು.
ಆ ಬಳಿಕ ಜೈನ್‍ಮಿಲನ್ ಸದಸ್ಯರು ಗುರುವಾಯನಕೆರೆಯ ಜೈನ್ ಪೇಟೆಯಲ್ಲಿರುವ ನಿವೃತ್ತ ವಾಯುಸೇನಾ ಅಧಿಕಾರಿ ಎಂ. ಆರ್. ಜೈನ್ ಅವರ ನಿವಾಸಕ್ಕೆ ಭೇಟಿ ನೀಡಿ ಅವರನ್ನು ಸನ್ಮಾನಿಸಿ ಗೌರವಿಸಿದರು. ಜೈನ್‍ಮಿಲನ್ ಅಧ್ಯಕ್ಷೆ ಶ್ವೇತಾ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿ ಎಂ. ಆರ್. ಜೈನ್ ಅವರ ಸಾಧನೆಯ ಕಿರು ಪರಿಚಯವನ್ನು ಮಾಡಿದರಲ್ಲದೆ ಜೈನ್ ಮಿಲನ್ ಹಮ್ಮಿಕೊಂಡಿರುವ ಈ ಕಾರ್ಯಕ್ರಮದ ವಿವರ ನೀಡಿದರು.
ನಿವೃತ್ತ ವಾಯು ಸೇನಾಧಿಕಾರಿ ಎಂ. ಆರ್. ಜೈನ್ ಹಾಗೂ ಅವರ ಪತ್ನಿ ಮಮತಾ ಆರ್. ಜೈನ್. ಅವರನ್ನು ಜೈನ್‍ಮಿಲನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸರ್ವಮಂಗಳ ಮಹಿಳಾ ಬಳಗದ ಅಧ್ಯಕ್ಷೆ ಸುಧಾ ಪ್ರಥ್ವಿರಾಜ್, ಜೈನ್‍ಮಿಲನ್ ವಲಯ ನಿರ್ದೇಶಕ ಜಯರಾಜ ಕಂಬಳಿ, ನಿಕಟಪೂರ್ವ ಅಧ್ಯಕ್ಷ ಎಚ್. ಧನಕೀರ್ತಿ ಬಲಿಪ, ಕಾರ್ಯದರ್ಶಿ ರಶ್ಮಿತಾ ಯುವರಾಜ ಜೈನ್, ಖಜಾಂಚಿ ದಿವ್ಯಾ ವೀರೇಂದ್ರ, ಸದಸ್ಯರುಗಳಾದ ಗುಣಪಾಲ ಮುದ್ಯ, ಮಂಜುಳಾ ಅಭಯಚಂದ್ರ, ವೀಣಾ ರಘುಚಂದ್ರ, ರಸಿಕಾ ಜಯರಾಜ ಕಂಬಳಿ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *