ಮೂಡುಬಿದಿರೆ : ಸ.ಹಿ.ಪ್ರಾ.ಶಾಲೆ ಮಾಸ್ತಿಕಟ್ಟೆ ಇಲ್ಲಿ ಸತೀಶ್ ಕೆ.ಭಂಡಾರಿ ಧ್ವಜವನ್ನರಳಿಸುವ ಮೂಲಕ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸೆಲ್ವ ಕುಮಾರ್ ಅಧ್ಯಕ್ಷತೆಯನ್ನು ವಹಿಸಿದ್ದರು. ಸಮೃದ್ಧಿ ಯೂತ್ ಕ್ಲಬ್ನ ಅಧ್ಯಕ್ಷ ಸಂತೋಷ್ ಕುಮಾರ್, ಹಿರಿಯ ವ್ಯಕ್ತಿ ಕಾಂತಣ್ಣ ಶೆಟ್ಟಿ, ಅಶೋಕ್ ಹೊಸಬೆಟ್ಟು ಮತ್ತು ಅಶೋಕ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜಗೋಪಾಲ್ ಉಪಸ್ಥಿತರಿದ್ದರು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಮೋಹಿನಿ ಸ್ವಾಗತಿಸಿದರು. ಶಿಕ್ಷಕಿ ಅನ್ನಪೂರ್ಣ ವಂದಿಸಿದರು.