ಕಿನ್ನಿಗೋಳಿ; ಅಧುನಿಕ ಯುಗದಲ್ಲಿ ಶಿಕ್ಷಣವು ವ್ಯಾಪಾರೀಕರಣವಾಗುತ್ತಿದ್ದು ಉಳ್ಳವರು ದುಬಾರಿ ಶುಲ್ಕವನ್ನು ತೆತ್ತು ಅಂಗ್ಲಮಾದ್ಯಮದತ್ತ ಮುಖ ಮಾಡುತ್ತಿದ್ದಾರೆ, ಆದರೆ ಸರಕಾರಿ ಶಾಲೆಗಳು ಇಂದಿನ ದಿನಗಳಲ್ಲಿ ಮುಚುವ ಪರಿಸ್ಥಿತಿಯಲ್ಲಿದೆ ಎಂದು ತುಳು ಸಾಹಿತ್ಯ ಆಕಾಡಮಿ ಮಾಜಿ ಅದ್ಯೆಕ್ಷ ಉಮಾನಾಥ್ ಕೊಟ್ಯಾನ್ ಹೇಳಿದರು.
ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಂಜಿನಡ್ಕ ದಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣಾ ಸಮಾರಂಭದಲ್ಲಿ ಬಾಗವಹಿಸಿದರು., ಸರಕಾರಿ ಶಾಲೆಗಳು ಕೇವಲ ಕೆಲ ಬಡ ವರ್ಗದ ಜನಿರಿಗೆ ಮೀಸಲಿರಿಸಿದಂತೆ ಇದೆ. ಬಡತನವೆಂಬುದು ಶಾಪವಲ್ಲ ಒಳ್ಳೆಯ ಶ್ರದ್ದೆ ಮತ್ತು ಮನಸು ಇದ್ದರೆ ಸಮಾಜದಲ್ಲಿ ಗುರುತಿಸುವ ವ್ಯಕ್ತಿಯಾಗಿ ಬಾಳಬಹುದು, ನಾನೂ ಕೂಡ ಬಡತನದಿಂದ ಬಂದವನು ನನ್ನ ತಂದೆ ತಾಯಿಗಳು ತುಂಬಾ ಕಷ್ಟದಿಂದ ಸಾಕಿ ಸಲುಹಿದರು ಎಂದು ತಮ್ಮ ಬಾಲ್ಯದ ದಿನಗಳನ್ನು ನೆನೆದು ಬಾವುಕರಾದವರು, ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ದಾನಿಗಳ ನೆರವಿನಿಂದ ಸಮವಸ್ತ್ರವನ್ನು ವಿತರಿಸಲಾಯಿತು ಈ ಸಂದರ್ಭದಲ್ಲಿ ವಿಜಯ ರೈತ ಸೇವಾ ಸಹಕಾರಿ ಸಂಘದ ರಂಗನಾಥ್ ಶೆಟ್ಟಿ, ಪಡು ಪಣಬೂರು ಪಂಚಾಯತ್ ಮಾಜಿ ಅದ್ಯೆಕ್ಷ ವಿನೋದ್ ಸಾಲಿಯಾನ್, ದೇರಣ್ನ ಶೆಟ್ಟಿ, ಗಿರಿದರ್ ಕಾಮತ್, ಗಂಗಾದರ್ ಶೆಟ್ಟಿ ಬರ್ಕೆ ತೋಟ್, ಪದ್ಮಾವತಿ ಕಾಮತ್, ಅಚುತ್ ಆಚಾರ್ಯ ಮುಂತಾದವರು ಉಪಸ್ತಿತರಿದ್ದರು.
