ಸುದ್ದಿ9ಬಂಟ್ವಾಳ ತಾಲ್ಲೂಕಿನ ಕರಿಮಲೆ-ಅಣ್ಣಳಿಕೆ ರಸ್ತೆಯಲ್ಲಿ ಸಾಲು ಸಾಲು ಹೊಂಡಗಳನ್ನು ಸ್ಥಳೀಯರು ಗುರುವಾರ ಶ್ರಮದಾನ ಮೂಲಕ ದುರಸ್ತಿಗೊಳಿಸಿ ವಿನೂತನ ಪ್ರತಿಭಟನೆ ಮೂಲಕ ಗಮನ ಸೆಳೆದರು. ಗ್ರಾ.ಪಂ.ಅಧ್ಯಕ್ಷ ಸಂಜೀವ ಪೂಜಾರಿ ಮತ್ತು ಉದ್ಯಮಿ ಪ್ರಕಾಶ ಅಂಚನ್ ನೇತೃತ್ವದಲ್ಲಿ ನಡೆದ ಶ್ರಮದಾನದಲ್ಲಿ ಪ್ರಮುಖರಾದ ಲಕ್ಷ್ಮಿನಾರಾಯಣ ಗೌಡ, ಹರೀಶ್ ತಾಕೊಡೆ, ಚಿತ್ರಾ ಪ್ರವೀಣ, ಹರಿಣಾಕ್ಷಿ, ಕೃಷ್ಣರಾಜ್ ಜೈನ್, ಕೆ.ಎನ್.ಶೇಖರ್, ಗಣೇಶ್ ಸಫಲ್ಯ, ಗಣೇಶ್ ಪ್ರಭು, ಆನಂದ ಬುರಾಲ್ ಮತ್ತಿತರರು ಪಾಲ್ಗೊಂಡರು.
