ಚಂದಳಿಕೆ: ದ.ಕ.ಜಿ.ಪಂ.ಹಿ.ಪ್ರಾ ಚಂದಳಿಕೆ ಶಾಲೆಯಲ್ಲಿ ಬಿಕ್ಷಾಟಣೆ ನಿರ್ಮೂಲನೆ ಸಂಕಲ್ಪದೊಂದಿಗೆ ಗಾಂಧಿಜಯಂತಿ ಹಾಗೂ ಸ್ವಚ್ಛತಾ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಭವಾನಿ ರೈ ಕೊಲ್ಯ ಮಾತನಾಡಿ, ಬಿಕ್ಷಾಟಣೆಗೆ ಬಂದಾಗ ಬಿಕ್ಷೆ ನೀಡುವುದರಿಂದ ಅದನ್ನು ಪ್ರೊತ್ಸಾಹಿಸಿದಂತೆ ಆಗುತ್ತದೆ. ನಮ್ಮಲ್ಲಿ ಬಿಕ್ಷಾಟಣೆಗೆ ಬಂದಾಗ ಅವರಿಗೆ ಬಿಕ್ಷೆ ನೀಡದೆ ಅವರಿಗೆ ಶಾಶ್ವತ ವ್ಯವಸ್ಥೆ ಮಾಡಿ ಕೊಡಲು ಸಹಕರಿಸುವುದಾಗಿ ಹೇಳಿದರು.

chandallike school
ಶಾಲಾಭಿವೃದ್ಧಿ ಸಮಿತಿ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬಿಕ್ಷಟಣೆಗೆ ಪ್ರೋತ್ಸಾಹಿಸದಂತೆ ಸಲಹೆ ನೀಡಿದರು. ಶಾಲಾಭಿವೃದ್ಥಿ ಸಮಿತಿ ಅದ್ಯಕ್ಷರಾದ ನಾರಾಯಣ ಪೂಜಾರಿ, ಮುಖ್ಯೋಪಾದ್ಯಯರಾದ ವಿಶ್ವನಾಥ ಗೌಡ ಕುಳಾಲ್ ಮೇಲುಸ್ತುವಾರಿ ಸಮಿತಿಯ ಸದಸ್ಯರು, ಪೋಷಕರು ಶಿಕ್ಷಕ ವೃಂದ ಅಂಗನವಾಡಿ ಕಾರ್ಯಕರ್ತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *