ಬಂಟ್ವಾಳ: ಇಲ್ಲಿನ ರಾಯಿ-ಕೊಯಿಲ-ಅರಳ ಗ್ರಾಮಗಳಿಗೆ ಸಂಬಂಧಿಸಿದಂತೆ ಹಿಂದೂ ಧರ್ಮೋತ್ಥಾನ ವೇದಿಕೆ ಮತ್ತು ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ ಇದೇ 17ರಿಂದ 18ರತನಕ ಇಲ್ಲಿನ ಕೊಯಿಲ ಶಾರದಾ ನಗರದಲ್ಲಿ 16ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಕಾರ್ಯಕ್ರಮ ನಡೆಯಲಿದೆ.
ಶಾಸಕ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಮತ್ತು ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಗೌರವಾಧ್ಯಕ್ಷತೆ ಹಾಗೂ ಸ್ಥಳೀಯ ಉದ್ಯಮಿ ರಂಜನ್ ಕುಮಾರ್ ಶೆಟ್ಟಿ ಅರಳ ಇವರ ಅಧ್ಯಕ್ಷತೆಯಲ್ಲಿ ಕಾರ್ಐಕ್ರಮದ ವಿವಿಧ ಉಪ ಸಮಿತಿ ರಚಿಸಲಾಗಿದೆ.
ಇದೇ 17ರಂದು ಬೆಳಿಗ್ಗೆ ಗಂಟೆ 8.30ರಿಂದ ದೇವತಾ ಪ್ರಾರ್ಥನೆ, ಗಣಹೋಮ, 10 ಗಂಟೆಗೆ ಧ್ವಜಾರೋಹಣ, 10.46 ಗಂಟೆಗೆ ಶಾರಾದಾ ವಿಗ್ರಹ ಪ್ರತಿಷ್ಠೆ, ಗಂಟೆ 11.30ರಿಂದ ಭಜನಾ ಸೇವೆ, ಮಧ್ಯಾಹ್ನ 12.30 ಗಂಟೆಗೆ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ಅಪರಾಹ್ನ ಗಂಟೆ 3ರಿಂದ ಮಂಗಳೂರು ಆರ್ಟ್ ಆಫ್ ಲಿಂಗ್ ಕೇಂದ್ರದಿಂದ ‘ಸತ್ಸಂಗ ಕಾರ್ಯಕ್ರಮ’, ಸಂಜೆ ಗಂಟೆ 6ರಿಂದ ಸಾಂಸ್ಕøತಿಕ ಕಾರ್ಯಕ್ರಮ ಮತ್ತು ಸಂಗೀತ ರಸಮಂಜರಿ, ರಾತ್ರಿ ಗಂಟೆ 9ರಿಂದ ಸ್ಥಳೀಯ ಕಲಾವಿದರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.
ಇದೇ 18ರಂದು ಬೆಳಿಗ್ಗೆ ಗಂಟೆ 8ಕ್ಕೆ ಪ್ರಾತಃಕಾಲ ಪೂಜೆ ಬಳಿಕ ಭಜನಾ ಸೇವೆ, ಗಂಟೆ 9.30ರಿಂದ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈಭವ ಕಾರ್ಯಕ್ರಮ. ಬೆಳಿಗ್ಗೆ 11 ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಒಡಿಯೂರು ಕ್ಷೇತ್ರದ ಸಾದ್ವಿ ಮಾತಾನಂದಮಯಿ ಆಶೀರ್ವಚನ ನೀಡಲಿದ್ದು, ಸಂವೇದನಾ ಫೌಂಡೇಶನ್ ಸಂಸ್ಥಾಪಕ ಪ್ರಕಾಶ್ ಮಲ್ಪೆ ಇವರಿಂದ ದಿಕ್ಸೂಚಿ ಭಾಷಣ. ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ಉಳಿಪಾಡಿಗುತ್ತು ರಾಜೇಶ ನಾಯ್ಕ್, ಕೆ.ಹರೀಶ್ ಪೂಂಜ, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ ಮತ್ತಿತರ ಗಣ್ಯರು ಭಾಗವಹಿಸಲಿರುವರು.
ಅದೇ ದಿನ ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ, ಗಂಟೆ 2ರಿಂದ ಜಿಲ್ಲೆಯ ಪ್ರಸಿದ್ಧ ಆಯ್ದ ಕಲಾವಿದರಿಂದ ‘ಯಕ್ಷಗಾನ ವೈಭವ’ ಕಾರ್ಯಕ್ರಮ ನಡೆಯಲಿದೆ.
ಅಂದು ಸಂಜೆ ಗಂಟೆ 5ರಿಂದ ಭಜನೆ ಸೇವೆ ನಡೆದು ಬಳಿಕ ಗಂಟೆ 6.30ರಿಂದ ಧ್ವಜಾವರೋಹಣ ನಡೆಯಲಿದೆ. 7ಗಂಟೆಗೆ ಶಾರದಾ ಮಾತೆಯ ಆಕರ್ಷಕ ಶೋಭಾಯಾತ್ರೆ ನಡೆಯಲಿದೆ ಎಂದು ಟ್ರಸ್ಟಿನ ಅಧ್ಯಕ್ಷ ಎಂ.ದುರ್ಗಾದಾಸ್ ಶೆಟ್ಟಿ ಮಾವಂತೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *