ಮೂಡುಬಿದಿರೆ: ಬೆಳುವಾಯಿ ಗ್ರಾಮದ ಮೂಡಾಯಿಕಾಡು ಎಂಬಲ್ಲಿನ ನಿವಾಸಿ ಜಗನ್ನಾಥ್(48) ಎಂಬವರು ಅ.9ರಂದು ಜಾನ್ ಡಿ’ಸೋಜ ಅವರಿಗೆ ಸೇರಿದ ತೆಂಗಿನ ಮರದಲ್ಲಿ ಗರಿ ಕಡಿಯುತ್ತಿದ್ದ ವೇಳೆ ಕಾಲು ಜಾರಿ ಬಿದ್ದು, ತೀವ್ರ ಗಾಯಗೊಂಡಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ.