ಕಣ್ಣೂರು: ಕೆಲವು ದಿನಗಳ ಹಿಂದೆ ಕಣ್ಣೂರು ವಲಯ ಆರೆಸ್ಸೆಸ್ ಶಾರೀರಿಕ್ ಪ್ರಮುಖ್ ಎಲ್ಲಂತೊಟ್ಟಿಲ್ ಮನೋಜ್(42) ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಕೇರಳದ ಕಾಂಗ್ರೆಸ್-ಎಲ್ಇಡಿ ಎಲ್ ಡಿಎಫ್ ಸರಕಾರ ಹೇಳಿದೆ.
ಕೇರಳದ ಗೃಹಮಂತ್ರಿ ರಮೇಶ್ ಚೆನ್ನಿತ್ತಾಲ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತಾಡಿ ಈ ವಿಷಯ ತಿಳಿಸಿದ್ದಾರೆ.
ಮನೋಜ್ ಹತ್ಯಾ ಪ್ರಕರಣವನ್ನು ಸಿಬಿಐ ಗೆ ವಹಿಸುವ ಬಗ್ಗೆ ನಿರ್ಧರಿಸಲಾಗಿದ್ದು, ಈ ಬಗ್ಗೆ ಕೆಲವೇ ದಿನಗಳಲ್ಲಿ ತಿಳಿಸಲಾಗುವುದು. ಈಗಾಗಲೇ ಕೇರಳದ ಡಿಜಿಪಿ ನೇತೃತ್ವದಲ್ಲಿ ತನಿಖೆ ಕೈಗೆತ್ತಿಕೊಳ್ಳಲಾಗಿದ್ದು, ಅವರೇ ಈ ನಿರ್ಧಾರಕ್ಕೆ ಬರೋಣ ಎಂದು ಅವರು ಸೂಚಿಸಿದ್ದಾರೆ. ಈ ಕಲೆ ಕೃತ್ಯದ ಬಗ್ಗೆ ಈಗಾಗಲೇ ಕೇಂದ್ರ ಗೃಹಸಚಿವ ರಾಜ್ನಾಥ್ ಸಿಂಗ್ ಅವರ ಿಗೆ ಪತ್ರದ ಮೂಲಕ ತಿಳಿಸಲಾಗಿದ್ದು, ಆರೋಪಿಗಳನ್ನು ಪತ್ತೆಹಚ್ಚಲಾಗುವುದು ಎಂದು ಪತ್ರದಲ್ಲಿ ತಿಳಿಸಲಾಗಿದೆ. ರಾಜ್ನಾಥ್ ಸಿಂಗ್ ಈ ಬಗ್ಗೆ ನನ್ನಲ್ಲಿ ದೂರವಾಣಿ ಕರೆಯ ಮೂಲಕ ಮಾತಾಡಿದ್ದು ಕಣ್ಣೂರಿನಲ್ಲಿ ಈಗಾಗಲೇ ಹಲವಾರು ಆರ್ ಎಸ್ ಎಸ್ ನಾಯಕರ ಕೊಲೆ ನಡೆದ ಬಗ್ಗೆ ದಿಗಿಲು ವ್ಯಕ್ತಪಡಿಸಿದ್ದಾರೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆರೆಸ್ಸೆಸ್ ನಾಯಕ ಎಲ್ಲಂತೊಟ್ಟಿಲ್ ಮನೋಜ್ ಹತ್ಯೆಯನ್ನು ಹಳೆಯ ದ್ವೇಷದ ಹಿನ್ನೆಲೆಯಲ್ಲಿ ನಡೆಸಿರುವುದನ್ನು ಪೊಲೀಸರು ದೃಢಪಡಿಸಿದ್ದಾರೆ. ಸಿಪಿಐಎಂನ ಎಂಟು ಮಂದಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಶೊಧ ಕಾರ್ಯ ಮುಂದುವರಿಸಿದ್ದಾರೆ.

