ಮೂಡುಬಿದಿರೆ: ಬೆಳುವಾಯಿ ಶ್ರೀ ಯಕ್ಷದೇವ ಮಿತ್ರಕಲಾ ಮಂಡಳಿ ಆಯೋಜಿತ ಯಕ್ಷಗಾನ ನಾಟ್ಯ, ಚೆಂಡೆ-ಮದ್ದಳೆ ತರಬೇತಿಯನ್ನು ಹಿರಿಯ ವಿದ್ವಾಂಸ, ಅರ್ಥದಾರಿಗಳಾದ ಡಾ. ಎಂ.ಪ್ರಭಾಕರ ಜೋಶಿ ಉದ್ಘಾಟಿಸಿದರು.

chande maddale
ಚಿಕ್ಕ ವಯಸ್ಸಿನಲ್ಲೇ ಯಕ್ಷಗಾನ ಕಲೆಯ ಆಸಕ್ತಿಯನ್ನು ಮಕ್ಕಳು ಬೆಳೆಸಿಕೊಳ್ಳುವುದು ಉತ್ತಮ. ಇದರಿಂದ ಮುಂದೆ ಕಲಾವಿದನಾಗದಿದ್ದರೂ ಉತ್ತಮ ಪ್ರೇಕ್ಷಕನೊ ಕಲಾಪೋಷಕನೋ ಆಗಬಹುದು. ಮತ್ತು ಸಂಸ್ಕಾರವಂತ ಸಹೃದಯಿಯಾಗಿ ಸಮಾಜದಲ್ಲಿ ರೂಪುಗೊಳ್ಳಬಹುದಾದ ವ್ಯಕ್ತಿ ಯಾಗುವುದಕ್ಕೆ ಸಂಶಯವಿಲ್ಲ. ಒಬ್ಬ ವ್ಯಕ್ತಿ ಕಲಾವಿದನಾಗುವುದಕ್ಕೆ ಉತ್ತಮ ಪಠ್ಯ, ಪೂರ್ಣ ಪ್ರಮಾಣದ ಅಭ್ಯಾಸ ಹೆಚ್ಚುಗಾರಿಕೆ, ಬಣ್ಣಗಾರಿಕೆ, ಕಂಠಪಾಠವನ್ನು ಹೊರತುಪಡಿಸಿ ಸ್ವಂತಿಕೆಯಿಂದ ಹಿತಮಿತವಾಗಿ ಪದ್ಯಗಳಿಗೆ ಅರ್ಥಮಾತಾಡುವ ಕೌಶಲ್ಯ ಹೊಂದಬೇಕು. ಸಂಮೃದ್ಧ ಕಲೆ ಯಕ್ಷಗಾನವನ್ನು ಒಂದಷ್ಟು ಕಲಿತು ತಕ್ಷಣ ಪ್ರಸಿದ್ಧಿಪಡುವ ಹಂಬಲವನ್ನು ಬೆಳೆಸಿಕೊಳ್ಳುವುದು ಸಲ್ಲದು. ಒಬ್ಬ ಪೂರ್ಣ ಪ್ರಮಾಣದ ಕಲಾವಿದನಾಗಿ ರೂಪುಗೊಳ್ಳುವುದು ಬಹು ಮುಖ್ಯ ಇದಕ್ಕೆ ಸತತವಾದ ಪರಿಶ್ರಮದ ಅಗತ್ಯವಿದೆ ಎಂಬ ಸಂದೇಶ ನೀಡಿದರು.
ಬಿಲ್ಲವ ಸಂಘದ ಅಧ್ಯಕ್ಷ ರಾಜೇಶ ಸುವರ್ಣ ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷ ಭಾಸ್ಕರ ಆಚಾರ್ಯ ಹಿತನುಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಉದ್ಯಮಿ ಕಲಾಪೋಷಕ ಭಾಸ್ಕರ ಎಸ್ ಕೋಟ್ಯಾನ್ ಮಾತನಾಡಿ, ಬೆಳುವಾಯಿಯ ಪುಟ್ಟ ಹಳ್ಳಿಯಲ್ಲಿ ಯಕ್ಷಗಾನದಂತಹ ಕಲೆಯ ಕಂಪನ್ನು ಶೃತಪಡಿಸುವ ಈ ಕಾರ್ಯ ಉತ್ತಮವಾದದ್ದು ಎಂದರು.
ಈ ಸಂದರ್ಭದಲ್ಲಿ ಕಲಾವಿದ ಮಹಾವೀರ ಪಾಂಡಿ ಕಾಂತವರ ಕಾರ್ಯದರ್ಶಿ ರವಿಪ್ರಸಾದ್ ಕೆ. ಶೆಟ್ಟಿ ಉಪಸ್ಥಿತರಿದ್ದರು. ಸಂಸ್ಥೆಯ ಸ್ಥಾಪಕಾಧ್ಯಕ್ಷ ಎಮ್. ದೇವಾನಂದ ಭಟ್ ವಿಧ್ಯಾರ್ಥಿಗಳಿಗೆ ತರಬೇತಿ ನೀಡಿದರು.
ಮುಂದೆ ಪ್ರತೀ ಶನಿವಾರ ಸಂಜೆ ತರಬೇತಿ ನಿಗದಿಪಡಿಸಲಾಗಿದ್ದು ಆಸಕ್ತರು ಸೇರಬಹುದಾಗಿ ಆಯೋಜಕರಾದ ರಂಜಿತ್ ಆಚಾರ್ಯ ಬೆಳುವಾಯಿ ತಿಳಿಸಿದರು.

By suddi9

Leave a Reply

Your email address will not be published. Required fields are marked *