ಮೂಡುಬಿದಿರೆ: ಎರಡು ಕುಟುಂಬಗಳ ನಡುವೆ ರಾಜಕೀಯ ಸಂಘರ್ಷದ ವಿಚಾರಗಳು ಮತ್ತು ರಾಜಕೀಯ ಏಳುಬೀಳಿನ ಕತೆಯೇ ಮಹಾಭಾರತದ ರೂಪುತಳೆದು ಇಡೀ ಭಾರತವರ್ಷದಲ್ಲಿ ಅದು ಹರಡಿ ಪ್ರಸಿದ್ಧವಾಗಿದೆ ಎಂಬುದಾಗಿ ನಿವೃತ್ತ ಜಿಲ್ಲಾಧಿಕಾರಿಗಳು ಹಾಗೂ ಪ್ರಸ್ತುತ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಪ್ರವಾಸೋದ್ಯಮ ಸಚಿವರ ವಿಶೇಷಾಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸುತ್ತಿರುವ ಡಾ. ಎ.ವಿ.ಪ್ರಸನ್ನ ಹೇಳಿದರು.
ಕಾಂತಾವರ ಕನ್ನಡ ಸಂಘ ಮತ್ತು ಕರ್ನಾಟಕ ಗಮಕಕಲಾ ಪರಿಷತ್ತು ಉಡುಪಿ ಜಿಲ್ಲೆ ಇವರ ಜಂಟಿ ಆಶ್ರಯದಲ್ಲಿ ನಡೆದ ತಿಂಗಳ ನುಡಿನಮನ ಕಾರ್ಯಕ್ರಮದಲ್ಲಿ ‘ಕುಮಾರವ್ಯಾಸನಲ್ಲಿ ರಾಜಕೀಯ ಪ್ರಜ್ಞೆ’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.

kanthavara photo news (2)
ಇನ್ನೊಬ್ಬರನ್ನು ತುಳಿದಾದರೂ ಅಧಿಕಾರವನ್ನು ಸಂಪಾದಿಸಲು ಹೆಣೆಯುವ ಕುತಂತ್ರಗಳು, ಕುಟುಂಬ ರಾಜಕಾರಣದ ಕೆಡುಕುಗಳು, ದುಷ್ಟ ಮಕ್ಕಳು ತಂದೆತಾಯಿಯನ್ನು ತಮ್ಮ ಹದ್ದುಬಸ್ತಿನಲ್ಲಿಡಲು ನಡೆಸುವ ಹುನ್ನಾರಗಳು, ಪಕ್ಷಾಂತರ ಪರ್ವ, ಶಲ್ಯ ತಂತ್ರ, ಸಿರಿ ಸಂಪತ್ತಿನ ಪ್ರಭಾವ, ಕೃಷ್ಣನ ರಾಜಕೀಯ ತಂತ್ರ, ಮುತ್ಸದ್ಧಿತನಗಳೆಲ್ಲವೂ ರಾಜನೀತಿ ಹೇಗಿರಬೇಕು ಮತ್ತು ಹೇಗೆ ಇರಬಾರದೆಂಬುದನ್ನು ತಿಳಿಸುವುದಲ್ಲದೇ ಬಲಾಢ್ಯರ ಬೆಂಬಲವಿದ್ದರೂ ರಾಜಧರ್ಮವನ್ನು ಮೀರಬಾರದೆಂಬ ಸಂದೇಶವನ್ನು ಕುಮಾರವ್ಯಾಸ ಭಾರತವು ನೀಡುತ್ತದೆ.
ಮುಂದಿನ ದಿನಗಳಲ್ಲಿ ರಾಜಕೀಯ ಪೂರ್ತಿ ಹಾಳಾಗುತ್ತದೆ ಹೊರತು ಉತ್ತಮಗೊಳ್ಳುವ ಸ್ಥಿತಿ ನಿರ್ಮಾಣವಾಗುವುದಿಲ್ಲ ಎಂದು ವ್ಯಾಸರು, ಕುಮಾರವ್ಯಾಸರು ತಮ್ಮ ಕಾವ್ಯದಲ್ಲಿ ತಿಳಿಸಿರುವ ಮಾತು ಇಂದಿಗೂ ಪ್ರಸ್ತುತವಾಗಿದೆ ಎಂದರು.

kanthavara photo news (1)
ಕಾರ್ಯಕ್ರಮಕ್ಕೆ ಮುನ್ನ ಡಾ. ಎ.ವಿ.ಪ್ರಸನ್ನ ಅವರ ಪತ್ನಿ ಖ್ಯಾತ ಗಮಕ ಕಲಾವಿದೆ ನಿರ್ಮಲಾ ಪ್ರಸನ್ನ ಅವರಿಂದ ಕುಮಾರವ್ಯಾಸ ಭಾರತದ ಆಯ್ದ ಗಮಕ ವಾಚನ ಕಾರ್ಯಕ್ರಮ ನಡೆಯಿತು.
ದಂಪತಿಯನ್ನು ಇದೇ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಬಾಬು ಶೆಟ್ಟಿ ನಾರಾವಿ ಕಾರ್ಯಕ್ರಮ ನಿರ್ವಹಿಸಿದರು. ಡಾ.ನಾ.ಮೊಗಸಾಲೆ ಅವರು ಸ್ವಾಗತಿಸಿ ಸದಾನಂದ ನಾರಾವಿ ವಂದಿಸಿದರು.

By suddi9

Leave a Reply

Your email address will not be published. Required fields are marked *