ಬಂಟ್ವಾಳ: ಬದಲಾವಣೆ ಜಗದ ನಿಯಮ ಬದುಕಿನ ಎಲ್ಲಾ ಕ್ಷೇತ್ರಗಳಲ್ಲಿ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಈ ರೀತಿಯ ಪರಿವರ್ತನೆ ಜೀವಂತಿಕೆಯ ಲಕ್ಷಣ. ಬದಲಾದ ಜಗತ್ತಿಗಣುಗುಣವಾಗಿ ನಮ್ಮ ಬದುಕು ರೂಪುಗೊಳ್ಳೂತ್ತಿರಬೇಕು. ಇದಕ್ಕೆ ಶಿಕ್ಷಣಕ್ಷೇತ್ರವೂ ಹೊರತಾಗಿಲ್ಲ. ವಿದ್ಯಾರ್ಥಿಗಳಾದವರು ಇದನ್ನು ಅರಿತಿರಬೇಕು ಎಂದು ಸರಕಾರಿ ಪ್ರೌಢ ಶಾಲೆ ಮಂಚಿ ಕುಕ್ಕಾಜೆ ಇದರ ಮುಖ್ಯೋಪಾದ್ಯಾಯರಾದ ವೈಲೆಟ್ ಲೆನ್ನಿ ಡಯಾಸ್ ಹೇಳಿದರು.
ಅವರು ಇಂದು ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾವಿೂ ಕಾಲೇಜಿನ ಎಕ್ಸಟೆನ್ಸನ್ ಮತ್ತು ಔಟ್ ರೀಚ್ ಸೆಲ್ನ ಆಶ್ರಯದಲ್ಲಿ ಸರಕಾರಿ ಪ್ರೌಢ ಶಾಲೆ ಕುಕ್ಕಾಜೆ ಮಂಚಿ ಇಲ್ಲಿ ನಡೆದ “ಕಂಪ್ಯೂಟರ್ ಫಂಡ್ಮೆಂಟಲ್ಸ್” ಎಂಬ ವಿಷಯದ ಕುರಿತು ಮಾಹಿತಿ ಮತ್ತು ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಇಂದು ತಂತ್ರಜ್ಞಾನ ಮುಂದುವರಿದಿದೆ. ವಿದ್ಯಾರ್ಥಿಗಳು ಇದನ್ನು ಅರಿತು ಅಳವಡಿಸಿಕೊಂಡಾಗ ಶಿಕ್ಷಣದ ಗುಣಮಟ್ಟ ಹೆಚ್ಚಾಗಲು ಸಾದ್ಯ. ಪ್ರತಿ ವಿದ್ಯಾರ್ಥಿ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಕರೆಯಿತ್ತರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಶ್ರೀ ವೆಂಕಟರಮಣ ಸ್ವಾವಿೂ ಕಾಲೇಜಿನ ಗಣಕವಿಜ್ಞಾನ ವಿಭಾಗದ ಉಪನ್ಯಾಸಕಿ ಕುಮಾರಿ ಹರ್ಷಿತಾರವರು ಮಾತನಾಡಿ ಕಂಪ್ಯೂಟರ್ ಕ್ಷೇತ್ರದ ಮಾಹಿತಿ, ಎಲ್ಲಾ ಆಗುಹೋಗುಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಎಕ್ಸಟೆನ್ಸನ್ ಮತ್ತು ಔಟ್ ರೀಚ್ ಸೆಲ್ನ ಸಂಯೋಜಕರಾದ ಶಿವಣ್ಣ ಪ್ರಭು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸರಕಾರಿ ಪ್ರೌಢ ಶಾಲೆ ಕುಕ್ಕಾಜೆ ಮಂಚಿ ಇಲ್ಲಿನ ಶಿಕ್ಷಕ ದಿನೇಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.