ಬಂಟ್ವಾಳ : ವಕೀಲರ ಸಂಘ ರಿ. ಇದರ ವತಿಯಿಂದ ವಾರ್ಷಿಕ ಕ್ರೀಡಾಕೂಟ ಅಡ್ವೋಕೇಟ್ಸ್ ಪ್ರೀಮಿಯರ್ ಲೀಗ್-2018 ಸೀಸನ್-3 ಶಾರದಾ ಪ್ರೌಢಶಾಲಾ ಕ್ರೀಡಾಂಗಣ ಪಾಣೆಮಂಗಳೂರಿನಲ್ಲಿ ಜರಗಿತು. ಹಿರಿಯ ನ್ಯಾಯಾಧೀ ಶರಾದ ಮಹಮ್ಮದ್ ಇಮ್ತಿಯಾಝ್ ಅಹ್ಮದ್ ಕ್ರೀಡಾಕೂಟದ ಉದ್ಘಾಟನೆಯನ್ನು ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಹೆಚ್ಚುವರಿ ಸಿವಿಲ್ ನ್ಯಾಯಾಧೀ ಶರಾದ ಪ್ರತಿಭಾ ಡಿ.ಎಸ್, ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್, ಕ್ರೀಡಾ ಕಾರ್ಯದರ್ಶಿ ರಾಜೇಶ್ ಬೊಳ್ಳುಕಲ್ , ಮಾಜಿ ಅಧ್ಯಕ್ಷರುಗಳಾದ ಅಶ್ವನಿ ಕುಮಾರ್ ರೈ, ಶ್ರೀಧರ ಪೈ, ಉಮೇಶ್ ಕುಮಾರ್ ವೈ, ಜತೆ ಕಾರ್ಯದರ್ಶಿ ವಿನೋದ , ರಿಚಾರ್ಡ್ ಡಿಕೋಸ್ತ ಉಪಸ್ಥಿತರಿದ್ದರು. ಸಮಾರೋಪ ಸಮಾರಂಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಭಾಗವಹಿಸಿದ್ದರು. ನ್ಯಾಯವಾದಿ ನರೇಂದ್ರನಾಥ ಭಂಡಾರಿ ಸ್ವಾಗತಿಸಿದರು. ಸುರೇಶ್ ಕುಮಾರ್ ನಾವೂರು ವಂದಿಸಿ, ವೀರೇಂದ್ರ ಎಂ.ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
