ಬಂಟ್ವಾಳ:ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ ಸ್ವಂತ ನಿವೇಶನ ಮತ್ತು ಕಚ್ಚಾ ಮನೆ ಹೊಂದಿರುವ ಅರ್ಹ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿ ಹೊಸ ಮನೆ ನಿರ್ಮಿಸಲು ರೂ 1.5 ಲಕ್ಷ ಮೊತ್ತದ ಸಹಾಯಧನ ಸೌಲಭ್ಯ ದೊರೆಯುತ್ತದೆ.
ವಾರ್ಷಿಕ ರೂ. 3 ಲಕ್ಷ ಮೊತ್ತದ ಆದಾಯ ಹೊಂದಿರುವ ಅರ್ಹ ಫಲಾನುಭವಿಗಳು ನಿವೇಶನ ಇರುವ ಬಗ್ಗೆ ಹಕ್ಕುಪತ್ರ ಮತ್ತಿತರ ಸೂಕ್ತ ದಾಖಲೆಯೊಂದಿಗೆ ಇದೇ 31ರೊಳಗೆ ಅರ್ಜಿಸಲ್ಲಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

By suddi9

Leave a Reply

Your email address will not be published. Required fields are marked *