ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ವಿವೇಕ ಜಯಂತಿ ಕಾರ್ಯಕ್ರಮ ಜ 12 ರಂದು ನಡೆಯಿತು.
“ಭಾರತದ ಸಾಂಸ್ಕøತಿಕ ರಾಯಭಾರಿಯಾಗಿರುವಂತಹ ಸ್ವಾಮಿ ವಿವೇಕಾನಂದರು ದೇಶದ ಧೀಮಂತ ವ್ಯಕ್ತಿಯೇ ಸರಿ. ನಮ್ಮ ದೇಶವಲ್ಲದೆ ಅಮೇರಿಕಾದ ಚಿಕಾಗೋದಲ್ಲಿ ವಿವೇಕಾನಂದರ ಮಾಡಿದ ಭಾಷಣದ ಸಾರವನ್ನು ಮಕ್ಕಳಿಗೆ ತಿಳಿಸಿದರು. ಎಲ್ಲಾ ದಿನಾಚರಣೆಯಲ್ಲಿ ವಿವೇಕ ಜಯಂತಿ ವಿಶೇಷ. ವಿವೇಕಾನಂದರ ಜನ್ಮ ದಿನವನ್ನು ರಾಷ್ಟ್ರೀಯ ಯುವದಿನವನ್ನಾಗಿ ಆಚರಿಸಿ ಚದುರಿ ಹೋದ ಯುವಕರನ್ನು ಮತ್ತೆ ಒಗ್ಗೂಡಿಸಿ ರಾಷ್ಟ್ರ ಕಾರ್ಯದಲ್ಲಿ ತಮ್ಮನ್ನ ತಾವು ತೊಡಗಿಸಿಕೊಳ್ಳುವಂತೆ ಮಾಡಿದರೆಂದು” ಪದವಿ ವಿಭಾಗದ ಇತಿಹಾಸ ಉಪನ್ಯಾಸಕರಾದ ಶ್ರೀಮತಿ ಸುಕನ್ಯ ಸವಿವರವಾಗಿ ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ಅಥಿತಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. 5 ನೇ ತರಗತಿಯ ವಿದ್ಯಾರ್ಥಿಯು ಪ್ರೇರಣಾ ಗೀತೆ ಹಾಡಿದನು.
ವಿವೇಕ ಜಯಂತಿ ಕಾರ್ಯಕ್ರಮದ ಅಂಗವಾಗಿ ವಿವೇಕಾನಂದರ ವಿಷಯದಲ್ಲಿ ನಡೆದ ಭಾಷಣ, ಚಿತ್ರಕಲೆ, ಪ್ರಬಂಧ ಹಾಗೂ ಛದ್ಮವೇಷ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಶ್ರೀಮತಿ ಜಯಶ್ರೀ ಮಾತಾಜಿಯವರು ಬಹುಮಾನ ವಿತರಣೆಯನ್ನು ವಾಚಿಸಿದರು.

ವೇದಿಕೆಯಲ್ಲಿ ಸಂಸ್ಕøತ ಉಪನ್ಯಾಸಕರಾದ ಅನ್ನಪೂರ್ಣ ಮಾತಾಜಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಾಲಾ ಶಿಕ್ಷಕರಾದ ಶ್ರೀಮತಿ ಗೀತಾ ನಿರೂಪಿಸಿ, ಶ್ರೀಮತಿ ಸಹನಾ ಸ್ವಾಗತಿಸಿ, ಕು.ಹರ್ಷಿತಾ ವಂದಿಸಿದರು