ಮೂಡುಬಿದಿರೆ: ಕಂದಾಯ ಇಲಾಖೆ ವತಿಯಿಂದ 94ಸಿ ಯಡಿಅರ್ಜಿ ಸಲ್ಲಿಸಿದ 14 ಮಂದಿಗೆ ತಹಸೀಲ್ದಾರ್ ಕಚೇರಿಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಹಕ್ಕುಪತ್ರ ವಿತರಿಸಿದರು.
ಪ್ರಕೃತಿ ವಿಕೋಪದಡಿ ಲಾಲಾಜಿ ರಾಥೋಡ್ ಅವರಿಗೆ 2ಲಕ್ಷ ರೂ ಹಾಗೂ ಹೊನ್ನಮ್ಮ ಅವರಿಗೆ 52 ಸಾವಿರ ರೂ ಚೆಕ್ ಹಸ್ತಾಂತರಿಸಿದರು.

Savalathu vitarane
ಬಳಿಕ ಮಾತಾನಾಡಿದ ಅವರು, ಸ್ವಂತ ಜಾಗ ಹಾಗೂ ಸೂರು ಹೊಂದುವುದು ಪ್ರತಿಯೊಬ್ಬರ ಕನಸಾಗಿದೆ.ಅರ್ಹರನ್ನು ಗುರುತಿಸಿ ಅವರಿಗೆ ಹಕ್ಕುಪತ್ರ ನೀಡುತ್ತಿದ್ದು ತ್ವರಿತಗತಿಯಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು. ಡೀಮ್ಡ್ ಫಾರಸ್ಟ್ ಸಮಸ್ಯೆಯಿಂದ ಹೆಚ್ಚಿನ ಅರ್ಜಿಗಳು ಬಾಕಿಯುಳಿದಿದ್ದು ಇದನ್ನು ತೆರವುಗೊಳಿಸುವ ಕುರಿತು ಅಧಿವೇಶನದಲ್ಲಿ ಪ್ರಶ್ನಿಸುತ್ತೇನೆ ಎಂದರು.
ತಹಸೀಲ್ದಾರ್ ಸುದರ್ಶನ್ ಮಾತನಾಡಿ 94ಸಿಯಡಿ ಕ್ರಮಬದ್ಧವಾಗಿರುವ 20ಅರ್ಜಿಗಳು ಬಾಕಿಯುಳಿದಿದ್ದು ಶೀಘ್ರದಲ್ಲಿ ಇತ್ಯರ್ಥಪಡಿಸುವುದಾಗಿ ಹೇಳಿದರು. ಪುರಸಭಾ ಉಪಾಧ್ಯಕ್ಷ ವಿನೋದ್ ಸೆರಾವೋ, ಸದಸ್ಯರಾದ ರಾಜೇಶ್ ಕೋಟೆಗಾರ್, ಬಶೀರ್, ದಿನೇಶ್ ಪೂಜಾರಿ ಮತ್ತಿತ್ತರರು ಉಪಸ್ಥಿತರಿದ್ದರು. ಡೆಪ್ಯುಟಿ ತಹಶೀಲ್ದಾರ್ ನಿತ್ಯಾನಂದ ದಾಸ್ ಫಲಾನುಭವಿಗಳ ಮಾಹಿತಿ ನೀಡಿದರು. ಕಂದಾಯ ನಿರೀಕ್ಷಕ ಹಾರಿಸ್ ಸ್ವಾಗತಿಸಿದರು.

By suddi9

Leave a Reply

Your email address will not be published. Required fields are marked *