ಸುದ್ದಿ9 ವಾಮದಪದವು :ಬಂಟ್ವಾಳ ತಾಲ್ಲೂಕಿನ ವಾಮದಪದವು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ವಿದ್ಯಾರ್ಥಿ ಸಂಘವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು. ಪ್ರಾಂಶುಪಾಲ ಜಗಜ್ಜೀವನ್ದಾಸ್ ಭಂಡಾರಿ, ಗ್ರಾ.ಪಂ.ಅಧ್ಯಕ್ಷೆ ಮೋಹಿನಿ ಹರೀಶ್ ಮತ್ತಿತರರು ಇದ್ದಾರೆ.

ವಿದ್ಯಾರ್ಥಿನಿ ನಿಲಯ: ಸಚಿವ ರೈ ಭರವಸೆ
ಬಂಟ್ವಾಳ ತಾಲ್ಲೂಕಿನ ಗ್ರಾಮೀಣ ಪ್ರದೇಶವಾಗಿರುವ ವಾಮದಪದವಿನಲ್ಲಿ ಈಗಾಗಲೇ ಮೆಟ್ರಿಕ್ ಪೂರ್ವ ಮತ್ತು ನಂತರದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ನಿಲಯ ಹೊಂದಿದ್ದರೂ, ಹೆಚ್ಚುವರಿಯಾಗಿ ಮತ್ತೆ 100 ಸೀಟಿನ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯ ಮಂಜೂರುಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ತಾಲ್ಲೂಕಿನ ವಾಮದಪದವು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ವಿದ್ಯಾರ್ಥಿ ಸಂಘ ಉದ್ಘಾಟನೆ ಮತ್ತು ವಿವಿಧ ಶಿಕ್ಷಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಸ್ಥಳೀಯ ಗ್ರಾ.ಪಂ.ಅಧ್ಯಕ್ಷೆ ಮೋಹಿನಿ ಹರೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ವಿದ್ಯಾರ್ಥಿ ಸಂಘ, ಎನ್ಎಸ್ಎಸ್, ಇಕೋ ಕ್ಲಬ್ ಮತ್ತಿತರ ಸಂಘಗಳನ್ನು ಸಚಿವರು ಉದ್ಘಾಟಿಸಿ, ವರ್ಗಾವ ಣೆಗೊಳ್ಳುತ್ತಿರುವ ಶಿಕ್ಷಕರಾದ ಉದಯ ಕುಮಾರ್, ವೀರಭದ್ರಪ್ಪ, ಮಹೇಶ, ಜಯಲಕ್ಷ್ಮಿ ಇವರನ್ನು ಸನ್ಮಾನಿಸಿದರು.
ಗ್ರಾ.ಪಂ.ಮಾಜಿ ಅಧ್ಯಕ್ಷ ನವೀನಚಂದ್ರ ಶೆಟ್ಟಿ, ಉಪಾಧ್ಯಕ್ಷ ಆನಂದ ಆಚಾರ್ಯ, ಸದಸ್ಯರಾದ ಸಿ.ಶ್ರೀಧರ ಪೈ, ಸಿ.ಅನಂತ ಪೈ, ಎಪಿಎಂಸಿ ಮಾಜಿ ಸದಸ್ಯ ಅಮ್ಮು ರೈ ಹರ್ಕಾಡಿ ಮತ್ತಿತರರು ಇದ್ದರು.
ಕಾಲೇಜಿನ ಪ್ರಾಂಶುಪಾಲ ಜಗಜ್ಜೀವನದಾಸ್ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯಶಿಕ್ಷಕ ರಾಘವೇಂದ್ರ ಬಲ್ಲಾಳ್ ಸ್ವಾಗತಿಸಿ, ಉಪನ್ಯಾಸಕ ಶ್ರೀಧರ್ ವಂದಿಸಿದರು. ಶಿಕ್ಷಕಿ ಮಮತಾ ಕಾರ್ಯಕ್ರಮ ನಿರೂಪಿಸಿದರು.