ಬಂಟ್ವಾಳ :  ಕಾಶ್ಮೀರದಲ್ಲಿ ಉಗ್ರರ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಹಾಗೂ  ಘಟನೆಯನ್ನು  ಖಂಡಿಸಿ ಬಂಟ್ವಾಳ ಕೇತ್ರ ಬಿಜೆಪಿ  ವತಿಯಿಂದ ಪ್ರತಿಭಟನಾ ಸಭೆ ಶುಕ್ರವಾರ ಸಂಜೆ ಬಿ.ಸಿ.ರೋಡಿನಲ್ಲಿ ನಡೆಯಿತು.   ಬಿಜೆಪಿ  ಜಿಲ್ಲಾ ವಕ್ತಾರ ಹರಿಕೃಷ್ಣ  ಬಂಟ್ವಾಳ ಅವರು ಉಗ್ರರ ಕೃತ್ಯವನ್ನು ಕಟು ಶಬ್ದಗಳಿಂದ ಖಂಡಿಸಿದರು. ಕೇತ್ರ ಬಿಜೆಪಿ ಅಧ್ಯಕ್ಷ  ದೇವದಾಸ್ ಶೆಟ್ಟಿ , ಜಿಲ್ಲಾ ಉಪಾಧ್ಯಕ್ಷ  ಜಿ.ಆನಂದ , ಪ್ರಧಾನ ಕಾರ್ಯದರ್ಶಿ ಗಳಾದ ರಾಮದಾಸ್  ಬಂಟ್ವಾಳ ,ಮೋನಪ್ಪ ದೇವಸ್ಯ,ರೊನಾಲ್ಡ್ ಡಿ’ಸೋಜ,ಪ್ರಕಾಶ್ ಅಂಚನ್, ರಮಾನಾಥ ರಾಯಿ, ಗೋಪಾಲ ಸುವರ್ಣ , ಪ್ರಮೋದ್ ಕುಮಾರ್,ಮಹಾಬಲ ಶೆಟ್ಟಿ , ವಿದ್ಯಾವತಿ,ದಿನೇಶ್ ಅಮ್ಟೂರ್, ಯಶೋಧರ ಕರ್ಬೆಟ್ಟು, ದಿವಾಕರ  ಶಂಭೂರು, ಕಿಶೋರ್ ,ಗಂಗಾಧರ  ಕೋಟ್ಯಾನ್, ಆನಂದ ಶಂಭೂರು,ಚಿದಾನಂದ  ರೈ, ಸುರೇಶ್  ಕೋಟ್ಯಾನ್,  ಗುರುದತ್ , ಮಹೇಶ್, ವಿಠಲ ಅಲ್ಲಿಪಾದೆ , ಪ್ರಣಾಮ್,ವಜ್ರನಾಥ ಕಲ್ಲಡ್ಕ ಮೊದಲಾದವರು ಭಾಗವಹಿಸಿದ್ದರು.

IMG-20190215-WA0069

By suddi9

Leave a Reply

Your email address will not be published. Required fields are marked *