ಬಂಟ್ವಾಳ: ಅಂಗವೈಕಲ್ಯ, ರಕ್ತಸಂಬಂಧದ ಮದುವೆಯ ಸಮಸ್ಯೆಗಳನ್ನು ಬಿಂಬಿಸುವ ” ತುಮುಲ” ಕಿರುಚಿತ್ರ ಬಿಡುಗಡೆ ಕಾರ್ಯಕ್ರಮ ಬಂಟ್ವಾಳದ ಸ್ವರ್ಣಸೌಧದಲ್ಲಿ ನಡೆಯಿತು. ಸ್ವರ್ಣೋದ್ಯಮಿ ಬಿ.ನಾಗೇಂದ್ರ ಬಾಳಿಗಾ ಕಾರ್ಯಕ್ರಮ ಉದ್ಘಾಟಿಸಿ ತಂಡದ ಸದಸ್ಯರಿಗೆ ಶುಭ ಹಾರೈಸಿದರು.

IMG-20190216-WA0081 ಮುಖ್ಯ ಅಭ್ಯಾಗತರಾಗಿ ಆಗಮಿಸಿದ ಭಾಮಿ ಸುಧಾಕರ ಶೆಣೈ ಮಾತನಾಡಿ, ಸಮಾಜಕ್ಕೆ ಒಂದು ಉತ್ತಮ ಸಂದೇಶ ಈ ಕಿರುಚಿತ್ರದಿಂದ ಸಿಗಲಿ ಎಂದು ಹಾರೈಸಿದರು.  ಗೌರಿ ಭಟ್ ಚಿತ್ರದ ಡಿವಿಡಿ ಬಿಡುಗಡೆ ಗೊಳಿಸಿದರು. ನಿರ್ದೇಶಕ ಶಕ್ತಿಪ್ರಸಾದ್ ಅಭ್ಯಂಕರ್, ಸಂಗೀತ ನಿರ್ದೇಶಕ ಭಾಸ್ಕರ ರಾವ್ ಬಿ.ಸಿ.ರೋಡ್, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ ಮಾಂಬಾಡಿ, ಚಿತ್ರತಂಡದ ಸದಸ್ಯರಾದ ಸುಬ್ರಹ್ಮಣ್ಯ ಪೈ, ಕೃತಿ ಕಾರಂತ, ವೀಣಾ ಪಂಡಿತ್, ಶ್ರುತಿ ಸುವರ್ಣ, ಬಾಲಸುಬ್ರಹ್ಮಣ್ಯ ನೂಜಿ, ಶಿವಶಂಕರ ಮಯ್ಯ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು. ಬಳಿಕ ಚಿತ್ರಪ್ರದರ್ಶನ ನಡೆಯಿತು.

By suddi9

Leave a Reply

Your email address will not be published. Required fields are marked *