ಬಿ.ಸಿ.ರೋಡು : ಮಂಗಳೂರು ವಿಧಾನ ಸಭಾ ಕ್ಷೇತ್ರ ಸಮಿತಿಯ ೫ ಮಹಾ ಶಕ್ತಿ ಕೇಂದ್ರಗಳಲ್ಲಿ ಒಂದಾದ ಬಿಜೆಪಿ ಪುದು ಮಹಾಶಕ್ತಿ ಕೇಂದ್ರದ ಚುನಾವಣಾ ಕಾರ್ಯಾಲಯವು ಮಾರ್ಚ್ 3 ರಂದು ಫರಂಗಿಪೇಟೆ ಬಳಿಯ ಪುಂಚಮೆ ಗಾರ್ಡನ್ ಬಳಿಯಲ್ಲಿ ಉದ್ಘಾಟನೆಗೊಳ್ಳಿದೆ. ಈ ಸಂದರ್ಭದಲ್ಲಿ 20 ಹಿರಿಯ ಕಾರ್ಯಕರ್ತರಿಗೆ ಅಭಿನಂದನೆ, ವಾಹನ ಜಾಥಾ ಸಾರ್ವಜನಿಕ ಸಮಾವೇಶ ನಡೆಯಲಿದೆ ಎಂದು ಮಂಗಳೂರು ವಿಧಾನ ಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ತಿಳಿಸಿದರು.WhatsApp Image 2019-03-01 at 6.56.04 PM
ಅವರು ಶುಕ್ರವಾರ ಫರಂಗಿಪೇಟೆಯ ಪುಂಚಮೆ ಗಾರ್ಡನ್‌ನ ಬಳಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಪುದು ಮಹಾ ಶಕ್ತಿ ಕೇಂದ್ರ ವ್ಯಾಪ್ತಿಯಲ್ಲಿ 2 ಪಂಚಾಯತ್ ಬಿಜೆಪಿ ಆಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಬಿಜೆಪಿ ಸದಸ್ಯರು ಆಯ್ಕೆಯಾಗಿದ್ದು  ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಪುದು ಪಂಚಾಯತ್ 2ನೇ ಸ್ಥಾನದಲ್ಲಿದೆ ಎಂದು ತಿಳಿಸಿ ಆದಿತ್ಯವಾರ ನಡೆಯುವ ಮೋದಿಗಾಗಿ ವಿಜಯ ಸಂಕಲ್ಪ ಯಾತ್ರೆಯನ್ನು ಹಮ್ಮಿಕೊಂಡು ಇದರಲ್ಲಿ 1ಸಾವಿರಕ್ಕಿಂತಲೂ ಮೇಲ್ಪಟ್ಟು ಬಿಜೆಪಿ ಕಾರ್ಯಕರ್ತರು ಭಾಗವಹಿಸಲಿದ್ದು ವಾಹನ ಇಲ್ಲವೇ ಕಾಲ್ನಡಿಗೆಯಲ್ಲಿ ಫರಂಗಿಪೇಟೆ ಶ್ರೀ ವರದೇಶ್ವರ ದೇವಸ್ಥಾನದಿಂದ ಕುಂಪಣಪಮಜಲು, ಮೇರಮಜಲು, ಕುಟ್ಟಿಕಲ, ಕೊಡ್ಮಾಣ್, ನೆತ್ತರಕೆರೆ, ಕುಮ್ಡೇಲ್, ತುಂಬೆ, ರಾಮಲ್‌ಕಟ್ಟೆಯಾಗಿ ಫರಂಗಿಪೇಟೆ ತಲುಪಲಿದೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ ಮಾತನಾಡಿ ಸಂಸದ ನಳಿನ್ ಕುಮಾರ್, ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರುಗಳಾದ ಸಂಜೀವ ಮಠಂದೂರು, ಉಮಾನಾಥ ಕೋಟ್ಯಾನ್, ಸುನಿಲ್ ಕುಮಾರ್, ಚುನಾವಣಾ ಸಂಚಾಲಕರುಗಳಾಧ ಗೋಪಾಲಕೃಷ್ಣ ಹೇರಳೆ, ರಾಧಾಕೃಷ್ಣ ಬುಡಿಯೂರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಸುವರ್ಣ, ಬಿಜೆಪಿ ಮಂಗಳೂರು ವಿದಾನ ಸಭಾ ಕ್ಷೇತ್ರದ ಪ್ರ. ಕಾರ್ಯದರ್ಶಿ ಮನೋಜ್ ಆಚಾರ್ಯ ನಾಣ್ಯ , ಎಪಿಎಂಸಿ ಸದಸ್ಯ ವಿಠಲ ಸಾಲ್ಯಾನ್, ಪುದು ಮಹಾಶಕ್ತಿ ಕೇಂದ್ರ ಅಧ್ಯಕ್ಷ ಮನೋಹರ ಕೊಟ್ಟಾರಿ  ಪ್ರಧಾನಕಾರ್ಯದರ್ಶಿ ದಿನೇಶ್ ಶೆಟ್ಟಿ ಕೊಟ್ಟಿಂಜ, , ಪುದು ಗ್ರಾಮ ಸಮಿತ್ಷಿ ಅಧ್ಯಕ್ಷ ಧೀರಜ್ ಮಾರಿಪಳ್ಳ,  ಸುಬ್ರಹ್ಮಣ್ಯ ರಾವ್, ವಿಠ್ಠಲ್ ಶೆಟ್ಟಿ  ನೀರೊಲ್ಬೆ, ಪದ್ಮನಾಭ ಶೆಟ್ಟಿ ಪುಂಚಮೆ ,ಎ ಕೆ  ಗಿರೀಶ್ ಶೆಟ್ಟಿ ಕುಂಪನಮಜಲು , ಚಂದ್ರ ಶೇಕರ ನಾಯ್ಕ ಉಪಸ್ಥಿತರಿದ್ದರು.  ಉಪಾಧ್ಯಕ್ಷರು ಗ್ರಾಮ ಪಂಚಾಯತ್  ತುಂಬೆ  ಪ್ರವೀಣ್ ಬಿ ತುಂಬೆ ಇದ್ದರು.

By suddi9

Leave a Reply

Your email address will not be published. Required fields are marked *