ಬೀಳಗಿ: ತಾಲೂಕಿನ ಚಿಕ್ಕಾಲಗುಂಡಿ ಗ್ರಾಮದ ರೈತರೊಬ್ಬರು ಸಾಲಬಾಧೆ ತಾಳದೆ ಕಬ್ಬಿನ ಹೊಲದಲ್ಲಿ ರವದಿ ಮಧ್ಯೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಣಮಂತ ರಂಗಪ್ಪ ಜಾನಮಟ್ಟಿ (62)ಮೃತ ರೈತ. ಈತ ಗ್ರಾಮದ ಭಾರತೀಯ ಸ್ಟೇಟ್‌ ಬ್ಯಾಂಕ್‌, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸೇರಿದಂತೆ ನಾನಾ ಬ್ಯಾಂಕ್‌ಗಳಿಂದ ಒಟ್ಟು 5.50 ಲಕ್ಷ ರೂ. ಗಳಿಗಿಂತಲೂ ಅಕ ಸಾಲ ಪಡೆದಿದ್ದ. ಈ ಕುರಿತು ಬೀಳಗಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಮೃತ ರೈತನಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ.ಸುದ್ದಿ ತಿಳಿಯುತ್ತಿದ್ದಂತೆ ತಹಸೀಲ್ದಾರ್‌ ಅಮರೇಶ ಬಿರಾದಾರ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಸಿಪಿಐ ರವಿಚಂದ್ರ ಡಿ.ಬಿ.ಅವರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
IMG-20190401-WA0002

 

By suddi9

Leave a Reply

Your email address will not be published. Required fields are marked *