ಬಜ್ಪೆ : ನಂದಳಿಕೆ ಚಾವಡಿ ಅರಮನೆಯಲ್ಲಿ ಎ. ಒಂದರಂದು ಗುತ್ತು, ಬೀಡು, ಬಾವ, ಬಾರಿಕೆ, ಪರಡಿ ಮತ್ತು ಮಾಗಂದಡಿಗಳಿಗೆ ಸಂಬಂಧಿಸಿದ `ಪ್ರಾಚೀನ ಭಾರತದ ಧರ್ಮಾಡಳಿತ ಪುನರುತ್ಥಾನ ಕೂಟ’ದ ಮಾಸಿಕ ಸಭೆ ನಡೆಯಿತು.ನಂದಳಿಕೆ ಚಾವಡಿಯ ಸುಹಾಸ್ ಹೆಗಡೆ ಸ್ವಾಗತಿಸಿದರು. ಕೂಟದಲ್ಲಿ ಸದಾಶಿವ ಶೆಟ್ಟಿ ಏತಮೊಗರುಗುತ್ತು, ಗುರುರಾಜ ಮಾಡ ಬೊಳ್ಳೊಳ್ಳಿಮಾರುಗುತ್ತು, ರಘುರಾಮ ಮಧ್ಯ ವಾಲ್ವಾಡಿಗುತ್ತು, ತಿಂಗಳೆ ವಿಕ್ರಮಾರ್ಜುನ ಹೆಗಡೆ(ತಿಂಗಳೆ ಮನೆತನ), ಚಂದ್ರಹಾಸ ಅಜಿಲ ಬೆಳ್ಳೂರುಗುತ್ತು, ವರ್ಧಮಾನ ದುರ್ಗಾಪ್ರಸಾದ್ ಶೆಟ್ಟಿ ಗೋಳಿದಡಿಗುತ್ತು, ಪ್ರೇಮದಾಸ ಸುವರ್ಣ ಸಸಿಹಿತ್ಲು, ಸದಾಶಿವ ಹೆಗ್ಡೆ ಶಿರ್ತಾಡಿ, ಮಹೇಶ್ ಶೆಟ್ಟಿ ತಿಮರೋಡಿ ಬೀಡು, ರೋಹಿತ್ ಕುಮಾರ್ ಕಟೀಲ್ ಮಜಲಬೆಟ್ಟುಬೀಡು ಪಿಲಾರ್, ದಿವಾಕರ ಸಾಮಾನಿ ಚೇಳ್ಯಾರುಗುತ್ತು ಅವರು `ಧರ್ಮಾಡಳಿತ ಪುನರುತ್ಥಾನ’ಕ್ಕೆ ಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹಿರಿಯರೂ, ಪ್ರಾಜ್ಞರೂ ಆಗಿರುವ ಏರ್ಯ ಲಕ್ಷ್ಮೀನಾರಾಯಣ ಆಳ್ವರನ್ನು ಕೂಟದ ಗೌರವ ಸಂಚಾಲಕರನ್ನಾಗಿ ಕೂಟದ ಇತರ ಗಡಿಕಾರರೊಂದಿಗೆ ಸೇರಿಸಲಾಯಿತು.ಇದೇ ವೇಳೆ ಕೂಟದ ಕಾರ್ಯಕಾರಿ ಸಮಿತಿ ರಚಿಸಲಾಯಿತು.ಸಮಿತಿಯ ಅಧ್ಯಕ್ಷರಾಗಿ ವರ್ಧಮಾನ ದುರ್ಗಾಪ್ರಸಾದ್ ಶೆಟ್ಟಿ, ಉಪಾಧ್ಯಕ್ಷರಾಗಿ ಸುಹಾಸ್ ಹೆಗಡೆ, ದಿವಾಕರ ಸಾಮಾನಿ, ಕೆ ಪಿ ಜಗದೀಶ ಅಧಿಕಾರಿ, ರೋಹಿತ್ ಕುಮಾರ್ ಕಟೀಲ್, ಪ್ರಧಾನ ಕಾರ್ಯದರ್ಶಿಗಳಾಗಿ ಪರಮಾನಂದ ಸಾಲ್ಯಾನ್, ಶಿವಪ್ರಸಾದ್ ಹೆಗ್ಡೆ, ಸಂಘಟನಾ ಕಾರ್ಯದರ್ಶಿಗಳಾಗಿ ನವೀನ್ ಶೆಟ್ಟಿ, ಪ್ರದೀಪ್ ಕುಮಾರ್ ಹಾಗೂ ಮಾಧ್ಯಮ ಪ್ರಮುಖರಾಗಿ ನವೀನ್ ಶೆಟ್ಟಿ, ಕಿರಣ್ ಆಳ್ವ, ದೇವಿಪ್ರಸಾದ ಅಜಿಲ ಆಯ್ಕೆಯಾದರು. ಸಮಿತಿ ಅವಧಿ ಒಂದು ವರ್ಷವಾಗಿರುತ್ತದೆ.ಕೂಟದ ಮುಂದಿನ ಸಭೆ 2019 ಮೇ 28ರಂದು ಬ್ರಹ್ಮಾವರದ `ಮೊದಲ್ತಾವ್’ ಮನೆಯಲ್ಲಿ ನಡೆಯಲಿದೆ. ಪರಮಾನಂದ ಸಾಲ್ಯಾನ್ ಸಭೆ ನಿರ್ವಹಿಸಿದರು. ನವೀನ್ ಶೆಟ್ಟಿ ಎಡ್ಮೆಮಾರ್ ವಂದಿಸಿದರು.

