ವಾಮಂಜೂರು:ಇಲ್ಲಿನ ಸಂತ ಜೋಸೆಫ್ ಚರ್ಚ್ನಲ್ಲಿ ಕ್ರೈಸ್ತರು ಪವಿತ್ರ ಗುರುವಾರವನ್ನು ಶ್ರದ್ಧೆ ಭಕ್ತಿಯಿಂದ ಆಚರಿಸಿ ಕ್ರಿಸ್ತರ ಕೊನೆಯ ಭೋಜನದ ದಿನವನ್ನುಸ್ಮರಿಸಿದರು. ವಂ.ರೇ.ಫಾ.ಅಂತೋನಿ ಅವರು ಬಲಿ ಪೂಜೆಯ ನೇತೃತ್ವ ವಹಿಸಿದರು.
ಯೇಸು ಕ್ರಿಸ್ತರು ತಮ್ಮ ಕೊನೆಯ ಭೋಜನದ ಸಂಧರ್ಭದಲ್ಲಿ 12 ಶಿಷ್ಯರ ಪಾದ ತೊಳೆದು ಸೇವೆಯ ಸಂಸ್ಕಾರವನ್ನು ಪ್ರತಿಪಾದಿಸಿದ್ದು, ಇದನ್ನು ಚರ್ಚ್ ಧರ್ಮಗುರು ವಂ.ರೇ.ಫಾ.ಸಿಪ್ರಿಯನ್ ಪಿಂಟೋ ನೆರವೇರಿಸಿದರು. ಶುಕ್ರವಾರವನ್ನು ಕ್ರಿಸ್ತರು ಶುಭಶುಕ್ರವಾರವಾಗಿ ಆಚರಿಸಿ ಧ್ಯಾನ,ಉಪವಾಸದಿಂದ ಯೇಸುವಿನ ಶಿಲುಬೆಯ ಹಾದಿಯನ್ನು ನೆರವೇರಿಸುವ ಮೂಲಕ ಆಚರಿಸುತ್ತಾರೆ.



