ಮೂಡುಬಿದಿರೆ: ನಮ್ಮ ಮನಸ್ಥಿತಿಗೆ ಅನುಗುಣವಾಗಿ ನಮ್ಮ ಜೀವನದಲ್ಲಿ ಸರಿಯಾದ ಆಯ್ಕೆ ಮಾಡಬೇಕು. ಆಯ್ಕೆ ಸರಿಯಾಗಿದಲ್ಲಿ ಬದುಕು ಸುಂದರವಾಗುತ್ತದೆ. ಸುಂದರವಾದ ಬದುಕನ್ನು ನಮ್ಮದೇ ಕ್ಷೇತ್ರದಲ್ಲಿ, ಜೀವನದಲ್ಲಿ ಅನುಭವಿಸಬೇಕು. ಬದುಕಿನಲ್ಲಿ ಕನಸು ಕಾಣುವುದು ತುಂಬಾ ಮುಖ್ಯ. ಕನಸು, ಸರಿಯಾದ ಆಯ್ಕೆಯಿಂದ ಸುಂದರ ಬದುಕು ಸಾಧ್ಯ ಎಂದು ಪತ್ರಕರ್ತ ಹರೀಶ್ ಕೆ.ಅದೂರು ಹೇಳಿದರು.

Aradirali Baduku (1)

Aradirali Baduku (2)
ಮೂಡುಬಿದಿರೆ ಆರದಿರಲಿ ಬದುಕು ಆರಾಧನಾ ಸೇವಾ ತಂಡದ ಆಶ್ರಯದಲ್ಲಿ ಹೊಸನಾಡು ಕೊಡ್ಯಡ್ಕ ಶ್ರೀದೇವಿ ಅನ್ನಪೂರ್ಣೇಶ್ವರಿ ದೇವಸ್ಥಾನಲ್ಲಿ ಮಂಗಳವಾರ ನಡೆದ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಉದ್ಯಮಿ ಕೆ.ಶ್ರೀಪತಿ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಕಲೆಯ ಮೂಲಕ ಗಳಿಸಿದ್ದನ್ನು ಸಮಾಜಸೇವೆಗೆ ಮುಡಿಪಾಗಿಡುವುದು ಅಪರೂಪ. ಅಂತಹ ಕೆಲಸವನ್ನು ಕಲಾವಿದೆ ಆರಾಧನ ಅವರ ಸಾರಥ್ಯದ ಆರದಿರಲಿ ಬದುಕು ತಂಡ ಮಾಡುತ್ತಿದೆ. ಪ್ರತಿಭೆಗಳಿಗೆ ವೇದಿಕೆಯಾಗಿ, ಸಮಾಜಸೇವೆಯನ್ನು ಸಕಾರಗೊಳಿಸುತ್ತಿರುವುದು ಶ್ಲಾಘನೀಯ ಎಂದರು.
ಯುವ ವಾಗ್ಮಿ ಭಕ್ತಿಶ್ರೀ ಆಚಾರ್ಯ ಪ್ರಧಾನ ಭಾಷಣ ಮಾಡಿದರು.
ಪತ್ರಕರ್ತರಾದ ಪ್ರಸನ್ನ ಹೆಗ್ಡೆ, ಡಾ.ಶೇಖರ ಅಜೆಕಾರು, ಯಶೋಧರ ವಿ.ಬಂಗೇರ, ಜವನೆರ್ ಬೆದ್ರದ ಸ್ಥಾಪಕ ಅಮರ್ ಕೋಟೆ ಮುಖ್ಯ ಅತಿಥಿಯಾಗಿದ್ದರು. ಚಲನಚಿತ್ರ ನಟಿ ಆರಾಧನಾ ಭಟ್ ಉಪಸ್ಥಿತರಿದ್ದರು.
ಕೊಡಗು ನೆರೆ ಸಂತ್ರಸ್ತೆ ವನಜಾಕ್ಷಿ ಅವರಿಗೆ ಧನ ಸಹಾಯ ವಿತರಿಸಲಾಯಿತು. ತಂಡದ ಸದಸ್ಯರನ್ನು ಸಮಾರಂಭದಲ್ಲಿ ಗೌರವಿಸಲಾಯಿತು.
ಕಾರ್ಯಕ್ರಮದ ಸಂಯೋಜಕಿ ಪದ್ಮಶ್ರೀ ಭಟ್ ನಿಡ್ಡೋಡಿ ಸ್ವಾಗತಿಸಿದರು. ತಂಡದ ಸದಸ್ಯ ನಾಗಾರಾಜ ಅಂಬೂರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಬಾಳೆಗದ್ದೆ ಕಾರ್ಯಕ್ರಮ ನಿರೂಪಿಸಿದರು. ಪ್ರಸಾದ್ ಕೊಡ್ಯಡ್ಕ ವಂದಿಸಿದರು.

By suddi9

Leave a Reply

Your email address will not be published. Required fields are marked *