ಅಥಣಿ: ವಿದ್ಯಾರ್ಥಿ ಜೀವನವು ಬದುಕಿನ ಮಹತ್ವದ ಕಾಲಘಟ್ಟ ಈ ಸಮಯವನ್ನು ವಿದ್ಯಾರ್ಥಿಗಳು ವ್ಯರ್ಥವಾಗಿ ಕಳೆಯದೇ ಶ್ರಮಪಟ್ಟ ಅಭ್ಯಾಸ ಮಾಡುವ ಮೂಲಕ ವಿಶೇಷ ಸಾಧನೆ ಮಾಡಬೇಕು. ನಿಮ್ಮ ಸಾಧನೆಯ ಹಾದಿ ಇತರೇ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು ಎಂದು ಬೆಳಗಾವಿಯ ತೂಕ ಮತ್ತು ಅಳತೆ ವಿಭಾಗದ ಮಾಪನಾಧಿಕಾರಿ ಎಸ್ ಆರ್ ಮಾಳಿ ಅವರು ಹೇಳಿದರು.

ಅವರು ಸ್ಥಳೀಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಮಾಳಿವಾಣಿ ಮಾಸಪತ್ರಿಕೆ ಹಾಗೂ ಅಥಣಿ ತಾಲೂಕಾ ಸಮಸ್ತ ಮಾಳಿ ಸಮಾಜದ ವತಿಯಿಂದ ಮಾಳಿ(ಮಾಲಗಾರ) ಸಮಾಜದ ಪ್ರತಿಭಾ ಪುರಸ್ಕಾರ-2019 ರ ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರಿಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸತ್ಕರಿಸಿ ಮಾತನಾಡುತ್ತಾ ವಿದ್ಯಾರ್ಥಿಗಳ ಜೀವನವನ್ನು ಬಂಗಾರದ ಜೀವನ ಎನ್ನುತ್ತಾರೆ, ನಮ್ಮ ಬದುಕು ಬಂಗಾರವಾಗಬೇಕಾದರೆ ವಿದ್ಯಾರ್ಥಿ ಜೀವನದಲ್ಲಿ ಶ್ರೇಷ್ಠವಾದ ಕನಸು ಹೊಂದಬೇಕು. ಆ ಕನಸು ನನಸಾಗಿಸಲು ಕಠಿಣ ಶ್ರಮ ಮಾಡಬೇಕು. ಗುರಿಯಿಲ್ಲದ ಬದುಕು ಗರಿಯಿಲ್ಲ ಹಕ್ಕಿಯಂತೆ. ನಮ್ಮ ಜೀವನಕ್ಕೆ ಒಂದು ಗರಿಯಿರಬೇಕು. ಅದರ ಸಾಧನೆಗೆ ಪರಿಶ್ರಮ ಪಡಬೇಕು.
ಸಾಧನೆಗೆ ಶ್ರೀಮಂತಿಕೆ, ಬಡತನ ಅಡಿಯಲ್ಲ ನಮ್ಮಲ್ಲಿ ಛಲವಿದ್ದರೆ ಸಾಧನೆ ಮಾಡಲು ಸಾಧ್ಯವಿದೆ. ಅದಕ್ಕೆ ಇಲ್ಲಿನ ಬಂದಿರುವ ಅನೇಕ ಸಾಧಕ ಮಕ್ಕಳೆ ಸಾಕ್ಷಿಯಾಗಿದ್ದಾರೆ. ಈ ಮಕ್ಕಳ ಸಾಧನೆ ಇನ್ನೂಳಿದ ಎಷ್ಟೋ ಮಕ್ಕಳಿಗೆ ಪ್ರೇರಣೆಯಾಗುವ ಇಂತಹ ಪ್ರತಿಭಾ ಪುರಸ್ಕಾರಗಳು ನಡೆಯಬೇಕು. ಮಾಳಿವಾಣಿಯ ಹಾಗೂ ಅಥಣಿಯ ಮಾಳಿ ಸಮಾಜದ ಯುವಕರು ಮಾಡಿದ ಈ ಸಮಾರಂಭದಲ್ಲಿ ಸತ್ಕಾರವನ್ನು ಮತ್ತು ಸಮಾಜದ ಋಣವನ್ನು ವಿಧ್ಯಾರ್ಥಿಗಳು ಮರೆಯಲು ಅಸಾಧ್ಯ ಎಂದು ಹೇಳಿದರು.
ಮತ್ತೋರ್ವ ಮುಖ್ಯ ಅತಿಥಿಗಳಾಗಿದ್ದ ಅಥಣಿ ವಲಯ ಅರಣ್ಯ ಇಲಾಖೆ ಅಧಿಕಾರಿ ಪ್ರಶಾಂತ ಗೌರಾಣಿ ಮಾತನಾಡುತ್ತಾ ಆಳವಾದ ಅಧ್ಯಯನದಿಂದ ಇಂತಹ ಸಾಧನೆ ಮಾಡಲು ಸಾಧ್ಯವಿದೆ. ಶೈಕ್ಷಣಿಕ ವರ್ಷದ ಆರಂಭದಿಂದಲೇ ಸತತ ಅಧ್ಯಯನ ರೂಢಿಸಿಕೊಂಡು ದೈರ್ಯದಿಂದ ಪರಿಕ್ಷೇ ಎದುರಿಸಬೇಕು. ಕಡಿಮೆ ಅಂಕ ಬಂದಾಗ ಮಾನಸಿಕವಾಗಿ ಕೊರಗದೇ ಸೋಲೆ ಗೆಲುವಿನ ಸೋಪಾನ ಎಂಬಂತೆ ಮುಂದಿನ ಕಠಿಣ ಅಧ್ಯಯನ ಮಾಡಿ ಸಾಧನೆ ಮಾಡಬೇಕು. ಕೇಲವ ಕನಸು ಕಂಡರೆ ಸಾಲದು, ಅದನ್ನು ಸಾಕಾರಗೊಳಿಸುತ್ತ ದೃಢ ಹೆಜ್ಜೆ ಇಡಬೇಕು. ತಮ್ಮ ಸಾಧನೆಗೆ ಪ್ರೋತ್ಸಾಹ ನೀಡಿದ ತಂದೆ, ತಾಯಿ, ಗುರುಗಳ ಮತ್ತು ಸಮಾಜದ ಋಣವನ್ನು ಜೀವನದಲ್ಲಿ ಎಂದಿಗೂ ಮರೆಯಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಅನಂತರ ಸಮಾರಂಬದ ದಿವ್ಯಸಾನಿಧ್ಯ ವಹಿಸಿದ್ದ ನಾಗರಾಳ ಪರಮಾನಂದ ಯೋಗಾಶ್ರಮದ ಜ್ಞಾನೇಶ್ವರ ಮಹಾಸ್ವಾಮಿಜಿ ಮಾತನಾಡುತ್ತಾ ಮಾಳಿವಾಣಿ ಹಾಗೂ ತಾಲೂಕಿನ ಮಾಳಿ ಸಮಾಜದ ಸದಸ್ಯರು ಸಮಾಜದ ಸಂಘಟನೆಯ ಜೊತೆಗೆ ಸಮಾಜದ ಮಕ್ಕಳ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಶ್ಲಾಘನೀಯ. ಈ ಪ್ರತಿಭಾ ಪುರಸ್ಕಾರದಲ್ಲಿ ರಾಜ್ಯದ ಅನೇಕ ಜಿಲ್ಲೆಯ ಮಕ್ಕಳು ಭಾಗವಹಿಸಿ ಪುರಸ್ಕಾರ ಸ್ವೀಕರಿಸುತ್ತಿದ್ದಾರೆ. ಇಂತಹ ಕಾರ್ಯ ಅನೇಕ ಮಕ್ಕಳಿಗೆ ಸ್ಪೂರ್ತಿ ತುಂಬಲಿದೆ ಎಂದು ಹೇಳಿದರು.
ಅನಂತರದಲ್ಲಿ ಅತಿಥಿಯಾದ ಐಗಳಿ ಪೋಲಿಸ ಠಾಣೆ ಪಿಎಸ್ ಆಯ್ ರಮೇಶ ಅವಜಿ ಹಾಗೂ ಎಮ್ ಬಿ ತೋಟಗೇರ ಹಾಗೂ ಅಥಣಿ ಸಮಾಜಕಲ್ಯಾಣ ಅಧಿಕಾರಿ ಬಿ ಎಸ್ ಯಾದವಾಡ ಮತ್ತು ಮಾಳಿ ಸಮಾಜ ಬೆಳಗಾವಿ ಜಿಲ್ಲಾಧ್ಯಕ್ಷ ಬಸವರಾಜ ಗುಮಟಿ ಅವರು ಮಾತನಾಡಿದರು.
ಈ ವೇಳೆ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರಿಕ್ಷೆಯಲ್ಲಿ ಶೇ.80 ಕಿಂತ ಅಧಿಕ ಅಂಕ ಪಡೆದ ಸುಮಾರು 130ಕ್ಕೂ ಅಧಿಕ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸಂಚಾರಿ ಪದಕ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಪುರಸ್ಕಾರ ಸ್ವೀಕರಿಸಿ ವಿದ್ಯಾರ್ಥಿಗಳು ಮಾತನಾಡಿ ನಮ್ಮ ಸಾಧನೆಯ ಹಿಂದೆ ತಂದೆ, ತಾಯಿ ಮತ್ತು ಗುರುಗಳ ಮಾರ್ಗದರ್ಶನವಿದೆ. ನಮ್ಮ ಪ್ರಯತ್ನದಂತೆ ಫಲ ಸಿಗುತ್ತದೆ, ನಮ್ಮ ಮನೆ ಮತ್ತು ಶೈಕ್ಷಣಿಕ ಪರಿಸರ ಶುದ್ದವಾಗಿದ್ದರೆ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಇಂತಹ ಪುರಸ್ಕಾರಗಳು ನಮಗೆ ಮತ್ತಷ್ಟು ಸ್ಪೂರ್ತಿ ನೀಡುತ್ತವೆ ಎಂದು ಹೇಳಿದರು.
ಸಮಾರಂಭದಲ್ಲಿ ಸುಭಾಸ ಮಾಳಿ, ಮಹಾಂತೇಶ ಮಾಳಿ, ಮಲ್ಲಿಕಾರ್ಜುನ ಬುಟಾಳಿ, ಅರುಣ ಭಾಸಿಂಗಿ, ರವಿ ಬಡಕಂಬಿ, ಶ್ರೀಶೈಲ ಹಳ್ಳದಮಳ, ರಮೇಶ ಕಾಗಲೆ, ನಾಗಪ್ಪಾ ಉಗಾರೆ, ಶಿವಲಿಂಗ ಬೆಳ್ಳಂಕಿ, ಲಕ್ಷ್ಮಣ ಬಡಕಂಬಿ, ರಮೇಶ ಮಾಳಿ, ರವಿ ಬಕಾರಿ, ರವಿ ಭಾಸಿಂಗಿ, ರೋಹಿತ ಕಾವೇರಿ, ರಾಮಲಿಂಗ ಬಡಕಂಬಿ, ಮಹಾಂತೇಶ ಭಾಸಿಂಗಿ, ಬ್ರಹ್ಮಾನಂದ ಮಾಳಿ, ಬಸವರಾಜ ತೇರದಾಳ, ಕೇದಾರಿ ಬಡಕಂಬಿ, ಮುರುಗೇಶ ಮೋಳೆ, ಮಹಾದೇವ ಚಮಕೇರಿ, ಶ್ರೀಶೈಲ ಬಡಕಂಬಿ, ಪ್ರವೀಣ ಮಾಳಿ, ಶ್ರೀಶೈಲ ಕಿವಡಿ, ಬಸವರಾಜ ಸೋನಕರ, ಚಿದಾನಂದ ಬಡಕಂಬಿ, ಆನಂದ ಲಗಳಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.