ಬಂಟ್ವಾಳ: ಮಲ್ಲಿಗೆ ಪ್ರಿಯ ಬಂಟ್ವಾಳದ ಶ್ರೀ ತಿರುಮಲ ವೆಂಕಟ್ರಮಣ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಇವರ ವತಿಯಿಂದ ವಿಶೇಷ ಹೂವಿನ ಪೂಜೆ ನಡೆಯಿತು.
ಈ ಸಂದರ್ಭದಲ್ಲಿ ರಾಜೇಶ್ ನಾಯ್ಕ್ ದಂಪತಿ, ಸಂಸದ ನಳಿನ್ ಕುಮಾರ್ ಕಟೀಲ್, ದೇವಳದ ಆಡಳಿತ ಮೊಕ್ತೇಸರರಾದ ಪುರುಷೋತ್ತಮ ಶೆಣೈ, ಗೋವಿಂದ ಪ್ರಭು, ಪ್ರವೀಣ್ ಕಿಣಿ, ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವದಾಸ್ ಶೆಟ್ಟಿ , ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ್, ಬಿಜೆಪಿ ಮುಖಂಡರಾದ ಉದಯಕುಮಾರ್ ರಾವ್,ಗಣೇಶ್ ರೈ ಮಾಣಿ, ಪುರಸಭಾ ಸದಸ್ಯರಾದ ಶಶಿಕಲಾ , ರೇಖಾ ಪೈ, ದೇವಕಿ ಮೊದಲಾದ ಪ್ರಮುಖ ರು ಉಪಸ್ಥಿತರಿದ್ದರು. ಶ್ರೀ ದೇವರನ್ನು ಮಲ್ಲಿಗೆ ಹೂವಿನಿಂದ ವಿಶೇಷವಾಗಿ ಆಲಂಕರಿಸಲಾಗಿತ್ತು ಹಾಗೆಯೇ ದೇವಳದ ಒಳಾಂಗಣದಲ್ಲಿಯು ಹೂವಿನಿಂದ ಅಲಂಕೃತಗೊಳಿಸಲಾಗಿತ್ತು.
