ಫರಂಗಿಪೇಟೆ : ಬಂಟ್ವಾಳ ತಾಲೂಕಿನ ಪುದು ಗ್ರಾಮದ ನಾಣ್ಯ ಶ್ರೀ ನಾಗ ರಕ್ತೇಶ್ವರಿ ಕ್ಷೇತ್ರ ಸುಮಾರು 1000 ವರ್ಷಗಳ ಇತಿಹಾಸ ವಿರುವ  ಅಪೂರ್ವ ವಾದ ಕ್ಷೇತ್ರ . ಪೂರ್ವದಲ್ಲಿ ನಾಥ ಪಂಥದ ಜೋಗಿಗಳು ಇಲ್ಲಿ ಧ್ಯಾನ ಮಾಡಿದ ಇತಿಹಾಸ ವಿದೆ . ಇಲ್ಲಿ ಬರಿದಾಗದ ಜಲ ನಿಧಿ  ಇದ್ದು  ನೀರು ಹರಿದು ಹೋಗುತ್ತಿದೆ .  ಸಾನಿದ್ಯದ ಪಕ್ಕದಲ್ಲಿ ನಿಧಿ  ಭೂಗತ ಗೊಂಡ ಕುರುಹುಗಳಿದ್ದು  ಅಶುದ್ಧ ಅಥವಾ  ಭೂಅಗೆತ ಮಾಡಿದಾಗ ಈಗಲೂ  ನಾಗ ಪ್ರತ್ಯಕ್ಷವಾಗುತ್ತದೆ  .

IMG_2289

    2006 ರಲ್ಲಿ ಕ್ಷೇತ್ರ ದ ಜೀರ್ಣೋದ್ದಾರ ಸಂದರ್ಭ  ಪ್ರಶ್ನೆಯಲ್ಲಿ ನಾಗ ಮಂಡಲ  ಸೇವೆ ಯನ್ನು ಬಯಸುತ್ತಿರುವುದಾಗಿ ಅಭಯ ದಂತೆ  16.01.2020. ಕ್ಕೆ ನಾಗಮಂಡಲೋತ್ಸವಕ್ಕೆ ದಿನ ನಿಗದಿ ಪಡಿಸಲಾಗಿದೆ ಅದಕ್ಕೆ ಪೂರ್ವ ಭಾವಿಯಾಗಿ ಗಣಹೋಮ , ನಾಗ ತಂಬಿಲ ಸೇವೆ ಯ ಬಳಿಕ ಸಂಚಲನಾ  ಸಮಿತಿ ರಚನೆ  ಮಾಡಲಾಯಿತು ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ ಯವರು ವಹಿಸಿಕೊಂಡಿದ್ದರು . ದೀಪ  ಬೆಳಗಿಸಿ ಚಾಲನೆ ನೀಡಿ ಮಾತನಾಡಿದ ಅವರು ಕ್ಷೇತ್ರ ಕ್ಕೆ ಮೂಲಬೂತ ಸೌಕರ್ಯ ವಾದ ರಸ್ತೆ ನಿರ್ಮಾಣ ವನ್ನು ನಿರ್ಮಿಸಿ ಕೊಡುವುದು ನನ್ನ ಆದ್ಯ  ಕರ್ತವ್ಯ ವಾಗಿದೆ ಎಂದರು
 ಈ ಸಂದರ್ಭದಲ್ಲಿ  ಗಣ್ಯರು ಗಳಾದ ದೇವಸ್ಯ ಪ್ರಕಾಶ್ಚಂದ್ರ ರೈ , ಜಗನ್ನಾಥ್ ಚೌಟ , ಸದಾನಂದ ಆಳ್ವ ಕಂಪ , ಭಾಸ್ಕರ ಚೌಟ ಕುಂಭ್ಡೇಲು , ಚಂದ್ರಶೇಖರ ಗಾಂಭೀರ ಸುಜೀರ್ ಗುತ್ತು , ಐತಪ್ಪ ಆಳ್ವ ಸುಜೀರ್ ಗುತ್ತು , ಪೂವಪ್ಪ ಕುಲಾಲ್ ನಾಣ್ಯ , ಚಂದ್ರಹಾಸ್ ಶೆಟ್ಟಿ ರಂಗೋಲಿ , ಕೊಡಮಣ್ಣು ಕಾಂತಪ್ಪ ಶೆಟ್ಟಿ , ವಿಠ್ಠಲ್ ಸಾಲ್ಯಾನ್ ಕುಂಭ್ಡೇಲು, ಪ್ರಕಾಶ್ ಕಿದೆ ಬೆಟ್ಟು , ಗಂಗಾಧರ ಕೋಟ್ಯಾನ್ , ರಾಮಚಂದ್ರ ಮಾರಿಪಳ್ಳ , ನಾಗಪ್ಪ ಶೆಟ್ಟಿ  ಮೇರಮಜಲು ಮತ್ತಿತರರು ಉಪಸ್ಥಿತರಿದ್ದರು  . ತಾರಾನಾಥ್ ಕೊಟ್ಟಾರಿ ಸ್ವಾಗತಿಸಿ ಪ್ರಸ್ತಾವನೆ ಗೈದರು , ಮನೋಜ್ ಆಚಾರ್ಯ   ವಂದಿಸಿದರು .

By suddi9

Leave a Reply

Your email address will not be published. Required fields are marked *