ಬಂಟ್ವಾಳ : ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2018-19ರ ಸಾಲಿನ ಅಂತರಾಷ್ಟ್ರೀಯ ಮಟ್ಟದ ಚಿಂತನ ಡ್ರಾಯಿಂಗ್ ಸ್ಪರ್ಧೆಯು ಗೋಳ್ತಮಜಲುವಿನಲ್ಲಿ ಇತ್ತಿಚೇಗೆ ನಡೆಯಿತು ಚಿಂತನ ಡ್ರಾಯಿಂಗ್ ಸ್ಪರ್ಧೆಯಲ್ಲಿ ಮುಫ್ರೀನಾ ಬಾನು ಜಿಲ್ಲಾ ಪ್ರಥಮ ರ್ಯಾಂಕ್ ಪಡೆಯುವ ಮೂಲಕ ಚಿನ್ನದ ಪದಕ ಮತ್ತು ಬೆಳ್ಳಿಯ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.
ಮುಫ್ರೀನಾ ಬಾನು ಅವರಿಗೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಮಂಗಳೂರಿನ ಸಕ್ರ್ಯೂಟ್ ಹೌಸ್ ನಲ್ಲಿ ಪದಕ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕಿ ಜಯಲತಾ ಬಿ. , ಹೆತ್ತವರಾದ ಮುಸ್ತಾಕ್ ಬೇಗ್ ನೆಲ್ಲಿಗುಡ್ಡೆ, ಶಾಹಿದಾ ಬಾನು , ಸಚಿವರ ಆಪ್ತ ಸಹಾಯಕ ಚಂದ್ರಶೇಖರ ಪಾತೂರು ಉಪಸ್ಥಿತರಿದ್ದರು.
