ಬಂಟ್ವಾಳ:ರಾಜ್ಯದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಬಳಿಕ ಸಕರ್ಾರಕ್ಕೆ ಅತ್ಯಧಿಕ ಮೊತ್ತದ ಆದಾಯ ತಂದು ಕೊಡುತ್ತಿರುವ ಆಬಕಾರಿ ಇಲಾಖೆಯ ದುಸ್ಥಿತಿ ಬಂಟ್ವಾಳ ತಾಲ್ಲೂಕಿನಲ್ಲಿ ಎರಡು ಪ್ರತ್ಯೇಕ ಬಾಡಿಗೆ ಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿಂದ ಎದ್ದು ಕಾಣುತ್ತಿದೆ.
ಇಲ್ಲಿನ ಬಿ.ಸಿ.ರೋಡ್ ಸಮೀಪದ ಕೈಕುಂಜೆ ಅಬಕಾರಿ ಉಪ ವಿಭಾಗ ಕಚೇರಿಯಲ್ಲಿ ಒಂದು ಜೀಪು ಮತ್ತು ಚಾಲಕ ಮಾತ್ರ ಇದ್ದರೆ, ಬಿ.ಸಿ.ರೋಡ್ ವಲಯ ಕಚೇರಿಯಲ್ಲಿ ಕೇವಲ ಚಾಲಕ ಮತ್ತು ಒಬ್ಬರು ಅಬಕಾರಿ ರಕ್ಷಕ ಸಿಬ್ಬಂದಿ ಮಾತ್ರ ಇದ್ದಾರೆ. ಇಲ್ಲಿನ ಇನ್ಸ್ಪೆಕ್ಟರ್ ಸುಬ್ರಹ್ಮಣ್ಯ ಪೈ ತರಬೇತಿಯಲ್ಲಿದ್ದರೆ, ಉಪವಿಭಾಗದಲ್ಲಿ ಡಿವೈಎಸ್ಪಿಯಾಗಿ ಮಂಗಳೂರಿನ ಉಪ ಆಯುಕ್ತರ ಕಚೇರಿಯಿಂದ ರತ್ನಾಕರ ರೈ ನಿಯೋಜನೆಗೊಂಡಿದ್ದಾರೆ.ಬಂಟ್ವಾಳ: ಒಟ್ಟು 51 ಅಧಿಕೃತ ‘ಮದ್ಯದಂಗಡಿ’

-ಚಿತ್ರ: ಎಂ.ಕೆ.ಶ್ರೀಯಾನ್, ರಾಯಿ
ಅಬಕಾರಿ ಇಲಾಖೆ ದುಸ್ಥಿತಿ, ಒಂದು ಜೀಪಿಗೆ ಇಬ್ಬರು ಚಾಲಕರು…!
ಇಲ್ಲಿನ ಉಪವಿಭಾಗದಲ್ಲಿ ಡಿವೈಎಸ್ಪಿ-1, ಇನ್ಸ್ಪೆಕ್ಟರ್-1, ಎಸೈ-1, ಮುಖ್ಯರಕ್ಷಕ-1, ರಕ್ಷಕರು-3, ಗುಮಾಸ್ತ-1 ಹುದ್ದೆ ಖಾಲಿ ಇದೆ.
ವಲಯ ಕಚೇರಿಯಲ್ಲಿ ಎಸೈ-2, ಮುಖ್ಯ ರಕ್ಷಕ-1, ರಕ್ಷಕರು-3, ಗುಮಾಸ್ತ-1 ಹುದ್ದೆ ಖಾಲಿ ಇದ್ದು, ಜೀಪು ಕೂಡಾ ಇಲ್ಲದಾಗಿದೆ.
ತಾಲ್ಲೂಕಿನಲ್ಲಿ ಈಗಾಗಲೇ ಒಟ್ಟು ಬಾರ್ ಮತ್ತು ರೆಸ್ಟೋರೆಂಟ್- 16, ಬಾರ್ ಸಹಿತ ವಸತಿಗೃಹ-6, ವೈನ್ಶಾಪ್-28, ಎಂಎಸ್ಐಲ್ ಸಕರ್ಾರಿ ಮಳಿಗೆ-1 ಇದೆ.
ಈ ಹಿಂದೆ ವ್ಯಾಪಕವಾಗಿದ್ದ ಕಳ್ಳಬಟ್ಟಿ ಮತ್ತು ಸೆಕೆಂಡ್ಸ್ ದಂಧೆ ಬಹುತೇಕ ಸ್ಥಗಿತಗೊಂಡಿದ್ದರೂ ಪ್ರತೀ ಹಳ್ಳಿ ಹಳ್ಳಿ ಗೂಡಂಗಡಿ ಮತ್ತು ಕೆಲವೊಂದು ಮನೆಗಳಲ್ಲಿ ಮದ್ಯ ಬಾಟಲು ಮಾರಾಟ ದಂಧೆ ಜೋರಾಗಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿದೆ. ಈ ಬಗ್ಗೆ ವಿವಿಧ ಮಹಿಳಾ ಸಂಘಟನೆಗಳು ಅಬಕಾರಿ ಇಲಾಖೆ ಮತ್ತು ಪೊಲೀಸರಿಗೆ ದೂರು ನೀಡುತ್ತಲೇ ಇದ್ದಾರೆ.
ಈ ದಂಧೆಕೋರರಿಂದ ಪೊಲೀಸರಿಗೆ ‘ಮಾಮೂಲು’ ಸಲ್ಲಿಕೆಯಾಗುತ್ತಿದೆ ಎಂಬ ಆರೋಪ ಒಂದೆಡೆಯಾದರೆ, ಇನ್ನೊಂದೆಡೆ
ಅಬಕಾರಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ನೆಪ ಇವರಿಗೆ ವರದಾನವಾಗಿ ಪರಿಣಮಿಸಿದೆ ಎಂಬ ಅಳಲು ನಾಗರಿಕರಿಂದ ವ್ಯಕ್ತವಾಗುತ್ತಿದೆ.
ಅಬಕಾರಿ ಕಾಯ್ದೆ ಪ್ರಕಾರ, ಮನೆಯೊಂದರಲ್ಲಿ 180 ಮಿ.ಲೀ.ನ 25 ಬಾಟಲು ರಮ್, ವಿಸ್ಕಿ, ಬ್ರಾಂಡಿ, 25 ಬಾಟಲು ವೈನ್, 28 ಬಾಟಲು ಬಿಯರ್ ಸಂಗ್ರಹಿಸಿಡಬಹುದು ಎಂಬ ಸಮರ್ಥನೆಯೂ ದೊರೆಯುತ್ತಿದೆ.
ಒಟ್ಟಿನಲ್ಲಿ ಸಕರ್ಾರಕ್ಕೆ ತಾಲ್ಲೂಕಿನಲ್ಲಿ ಗರಿಷ್ಟ ಮೊತ್ತದ ಆದಾಯ ತಂದು ಕೊಡುತ್ತಿರುವ ಅಬಕಾರಿ ಇಲಾಖೆಗೆ ಸಿಬ್ಬಂದಿ ಕೊರತೆ ಜೊತೆಗೆ ಸ್ವಂತ ಕಟ್ಟಡವೂ ಇಲ್ಲ ಎಂದರೆ ಸೋಜಿಗವೇ ಸರಿ ಎನ್ನುತ್ತಾರೆ ಇಲ್ಲಿನ ‘ಪಾನಪ್ರಿಯರು’. -ಮೋಹನ್ ಕೆ.ಶ್ರೀಯಾನ್