ಬಂಟ್ವಾಳ: ಜೋಡುಮಾರ್ಗ ನೇತ್ರಾವತಿ ಜೇಸಿ ವತಿಯಿಂದ ಸರಕಾರಿ ಪ್ರೌಢಶಾಲೆ, ಸಜೀಪ ಇಲ್ಲಿನ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ “ಅಧ್ಯಯನ ತಂತ್ರ ಮತ್ತು ಪರೀಕ್ಷಾ ಪೂರ್ವ ತಯಾರಿ” ಎಂಬ ವಿಷಯದ ಬಗ್ಗೆ ತರಬೇತಿ ಕಾರ್ಯಕ್ರಮ ನಡೆಯಿತು. ಜೋಡುಮಾರ್ಗ ಜೇಸಿಯ ಪೂರ್ವಾಧ್ಯಕ್ಷರು ಹಾಗು ರಾಷ್ಟ್ರೀಯ ತರಬೇತುದಾರರಾದ ಜಯಾನಂದ ಪೆರಾಜೆಯವರು ತರಬೇತಿಯನ್ನು ನಡೆಸಿಕೊಟ್ಟರು.
ಕಾರ್ಯಕ್ರಮದ ಉದ್ಘಾಟನೆ ಮತ್ತು ಅಧ್ಯಕ್ಷತೆಯನ್ನು ಜೇಸಿಐ ಜೋಡುಮಾರ್ಗ ನೇತ್ರಾವತಿಯ ಅಧ್ಯಕ್ಷರಾದ ಹರ್ಷರಾಜ್ ಸಿ ನೆರವೇರಿಸಿದರು. ಶಾಲಾ ಮುಖ್ಯೋಪಾಧ್ಯಾಯನಿಯಾದ ಶ್ರೀಮತಿ ಜಯಲಕ್ಷ್ಮಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜೇಸಿರೆಟ್ ಅಧ್ಯಕ್ಷೆ ಅಮಿತಾ ಹರ್ಷರಾಜ್ ರವರು ಮಾತನಾಡಿ ನಾವು ತಯಾರಿ ನಡೆಸಿ ಬರೆದ ಪರೀಕ್ಷೆಯ ಫಲಿತಾಂಶದ ನಿರೀಕ್ಷೆಯು ಹೇಗಿರಬೇಕೆಂದರೆ, ಹೊ¸ ತಿನಿಸಿನ ಸವಿರುಚಿಯ ಕಾತುರತೆಯಂತಿರಬೇಕು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಅಧ್ಯಾಪಕರಾದ ಶ್ರೀ ವೆಂಕಟರಮಣ ಸ್ವಾಗತಿಸಿದರು. ಶ್ರೀ ಗಣೇಶ್ ವಂದಿಸಿದರು.