ಕೋಲಾರ: ಜಿಲ್ಲೆಯ ಸರ್ಕಾರಿ ನೌಕರರ ಸಮಸ್ಯೆಗಳ ಬಗ್ಗೆ ಆಗಿಂದಾಗ್ಗೆ ಸಂಬಂಧಪಟ್ಟ ಸಂಘ ಸಂಸ್ಥೆಗಳೊಂದಿಗೆ ಚರ್ಚಿಸಿ ಪರಿಹಾರೋಪಯಗಳನ್ನು ಕಂಡುಹಿಡಿಯಲಾಗುವುದು ಈ ದೆಸೆಯಲ್ಲಿ ನೌಕರರ ಹಿತ ಕಾಪಾಡಲು ಸಿದ್ಧರಾಗಿದ್ದು, ನೌಕರರ ಸಹಕಾರ ಅಗತ್ಯ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಬಿ. ಅಶೋಕ್ ತಿಳಿಸಿದರು.ನೌಕರರ ಭವನದಲ್ಲಿಂದು ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಾಯರ ಸಂಘದ ವತಿಯಿಂದ ಏರ್ಪಡಿಸಿದ್ದ ಅಭಿನಂದನಾ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.ಪ್ರತಿ ಇಲಾಖೆಯಲ್ಲೂ ಇವರು ಸಮಸ್ಯೆಗಳ ಬಗ್ಗೆ ಅಯಾ ಇಲಾಖೆಯ ಅಧಿಕಾರಿಗಳು ಸಂಪರ್ಕ ಬೆಳೆಸಿ, ಸಮಸ್ಯೆಗಳು ಸುಳಿಯದಂತೆ ಪ್ರಾಮಾಣಿಕ ಪ್ರಯನ್ನ ಮಾಡುವುದಾಗಿ ತಿಳಿಸಿದರು. ಸರ್ಕಾರಿ ಸೇವೆಯಲ್ಲಿರುವ ಸರ್ಕಾರಿ ನೌಕರರು ನಿಜಕ್ಕೂ ಅದೃಷ್ಠವಂತರು. ತಮ್ಮ ಇತಿ ಮಿತಿಯಲ್ಲಿ ಸಾರ್ವಜನಿಕ ಸೇವೆ ಮಾಡಿ ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದರು.KB Ashok1

ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಮುರಳಿ ಮೋಹನ್ ಮಾತನಾಡಿ ಸಮಸ್ಯೆಗಳ ಪರಿಹಾರಕ್ಕೆ ಸಂಘಟನೆಯೇ ಮುಖ್ಯ ಆಗಿದ್ದ ಸೋಲುಗೆಲವನ್ನು ಮರೆತು ಸಂಘಟಿತರಾಗಲು ಎಲ್ಲರೂ ಒಂದಾಗಬೇಕು. ಆಗ ಮಾತ್ರ ಸಂಘಟನೆಯೇ ಶಕ್ತಿ ಎಂಬ ವಾಕ್ಯಕ್ಕೆ ಅರ್ಥ ಬರುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಾಯರ ಸಂಘದ ವಿಭಾಗೀಯ ಕಾರ್ಯದರ್ಶಿ ಆರ್. ಶ್ರೀನಿವಾಸನ್ ಮಾತನಾಡಿ ಸಂಘಟನೆ ಬೆಳೆಸುವ ಸೇವೆಯನ್ನೇ ಗುರಿಯನ್ನಾಗಿಸಿ ಕೆಲಸ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಾಯರ ಸಂಘದ ಅಧ್ಯಕ್ಷ ಜಿ. ಶ್ರೀನಿವಾಸ್ ಮಾತನಾಡಿ ಮುಖ್ಯೋಪಾದ್ಯಾಯರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಶಾಲೆ ಹಾಗೂ ಶೈಕ್ಷಣಿಕ ಪ್ರಗತಿಗೆ ಸದಾ ದುಡಿಯುತ್ತಿದ್ದಾರೆ. ಇಂತಹ ಮುಖ್ಯೋಪಾದ್ಯಾಯರ ಸಮಸ್ಯೆಗಳಿಗೆ ನೌಕರರ ಸಂಘವು ಸ್ಪಂಧಿಸಬೇಕು ಎಂದರು.
ಈ ಸಂದರ್ಭದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಪುರುಷೋತ್ತಮ್, ಜಿಲ್ಲಾ ಪಂಚಾಯಿತಿಯ ಆನಂದ್, ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಾಯರ ಸಂಘದ ಕಾರ್ಯದರ್ಶಿ ಬಿ. ಶ್ರೀನಿವಾಸ್, ಉಪಾಧ್ಯಕ್ಷ ಬಿ. ಶ್ರೀನಿವಾಸ್, ಕೋಶಾಧ್ಯಕ್ಷ ಬಹದ್ದೂರ್ ಸಾಬ್, ಮುಖಂಡರಾದ ರಾಮಚಂದ್ರಪ್ಪ, ಶ್ರೀನಿವಾಸಪುರ ಅಧ್ಯಕ್ಷ ಆಂಜಪ್ಪ, ಪ್ರಭಾವತಿ, ಭಾಗ್ಯಲಕ್ಷ್ಮಿ, ಉಮಾ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *