ಬಂಟ್ವಾಳ: ಸಾಂಕ್ರಾಮಿಕ ರೋಗಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಸ್ವಚ್ಛತೆಗೆ ಹೆಚ್ಷಿನ ಆದ್ಯತೆ ನೀಡುವಂತೆ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು ಹೇಳಿದರು.
ಅವರು ತಾ.ಪಂ.ನ.ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಮಾಸಿಕ ಸಭೆಯಲ್ಲಿ ಹೇಳಿದರು.WhatsApp Image 2019-08-05 at 12.30.46 PM

ತಾಲೂಕಿನಲ್ಲಿ ಶಂಕಿತ ಡೆಂಗ್ಯೂ ಗೆ ಒರ್ವ ಬಲಿಯಾದ ಬಗ್ಗೆ ಮಾಹಿತಿಯನ್ನು ವೈದ್ಯಾಧಿಕಾರಿ ಗಳ ಬಳಿ ಕೇಳಿದಾಗ ಅದು ಡೆಂಗ್ಯೂ ಜ್ವರ ಎಂಬ ಬಗ್ಗೆ ಇನ್ನೂ ಕೂಡಾ ಖಚಿತ ವಾದ ವರದಿ ಬಂದಿಲ್ಲ.
ಅವರ ರಕ್ತದ ಸರಿಯಾದ ವರದಿ ಬಂದ ಬಳಿಕ ವೇ ಹೇಳಬಹುದು ಎಂದು ತಿಳಿಸಿದರು.ಡೆಂಗ್ಯೂ ರೋಗದ ಬಗ್ಗೆ ಜನ ಸಾಮಾನ್ಯ ರಿಗೆ ಹಾಗೂ ಶಾಲಾ ಮಕ್ಕಳಿಗೆ ಹೆಚ್ಚಿನ ಮಾಹಿತಿ ನೀಡುವಂತೆ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ ತಿಳಿಸಿದ್ದಾರೆ.

ಅರಣ್ಯ ಇಲಾಖೆಯ ಹಾಗೂ ತೋಟಗಾರಿಕೆ ಇಲಾಖೆ ಯ ಸಸಿಗಳನ್ನು ಶೀಘ್ರವಾಗಿ ಕೃಷಿಕರಿಗೆ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು. ಇಲಾಖಾ ವರದಿಗಳು ತಿಂಗಳ 2 ನೇ ತಾರೀಖಿನಂದು ಬರಲೇ ಬೇಕು ಎಂದು ತಾ.ಪಂ.ಇ.ಒ.‌ರಾಜಣ್ಣ ಅಧಿಕಾರಿ ಗಳಿಗೆ ಸೂಚಿಸಿದರು. ಪ್ರತಿ ಮೀಟಿಂಗ್ ಗಳಲ್ಲಿ ವರದಿ ಸರಿಯಾದ ಸಮಯಕ್ಕೆ ಬರದೆ ತೊಂದರೆ ಯಾಗುತ್ತಿದೆ ಎಂದು ಅವರು ಹೇಳಿದರು.ವೇದಿಕೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಮೀ ಸಿ.ಬಂಗೇರ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *