ಶ್ರೀನಿವಾಸಪುರ: ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳು ಸಾರ್ವಜನಿಕರ ಸುರಕ್ಷಿತ ಜೀವನಕ್ಕಾಗಿ ಜೀವ ವಿಮೆ ಮಾಡಿಸುವಂತೆ ಪ್ರೇರೇಪಿಸಬೇಕು ಎಂದು ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ರವೀಂದ್ರಯ್ಯ ಕುಲಕರ್ಣಿ ಹೇಳಿದರು.
5svp2ep
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಏರ್ಪಡಿಸಿದ್ದ ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನರು ಮೋಸದ ಕಂಪನಿಗಳಲ್ಲಿ ಹಣ ಹೂಡಿ ಕಳೆದುಕೊಳ್ಳುತ್ತಿದ್ದಾರೆ. ಉತ್ತಮ ಭವಿಷ್ಯಕ್ಕಾಗಿ ಹೂಡಿದ ಹಣ ವಂಚಕರ ಪಾಲಾಗುತ್ತಿದೆ. ಜನರಿಗೆ ಈ ಬಗ್ಗೆ ತಿಳುವಳಿಕೆ ನೀಡಬೇಕು ಎಂದು ಹೇಳಿದರು.
ವ್ಯವಸ್ಥಾಪಕ ಸತೀಶ್‌ ಮಾತನಾಡಿ, ಅನಿರೀಕ್ಷಿತ ಭವಿಷ್ಯವನ್ನು ಎದುರಿಸಲು ಜೀವ ವಿಮೆ ಸಂಜೀವಿನಿಯಾಗಿದೆ. ಒಬ್ಬ ವ್ಯಕ್ತಿಯ ಅವಲಂಬಿತರರ ಬದುಕು ಹಸನಾಗಲು ಹಾಗೂ ಅನಿರೀಕ್ಷಿತ ಪರಿಸ್ಥಿತಿಯಿಂದ ಪಾರಾಗಲು ವಿಮೆ ಅಗತ್ಯವಾಗಿದೆ. ಈ ವಿಷಯನ್ನು ಪರಿಣಾಮಕಾರಿಯಾಗಿ ತಿಳಿಸಬೇಕು. ಹೆಚ್ಚು ಪಾಲಸಿಗಳನ್ನು ಮಾಡಿಸಬೇಕು ಎಂದು ಹೇಳಿದರು.
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

By suddi9

Leave a Reply

Your email address will not be published. Required fields are marked *