ಕೋಲಾರ: ಪಶು ಆಹಾರ ಬೆಲೆ ಏರಿಕೆ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಹಾಗೂ ಎಲ್.ಎಲ್.ಆರ್, ನೋ ಪೇಮೆಂಟ್ ಹೆಸರಿನಲ್ಲಿ ರೈತರ ಶೋಷಣೆಯನ್ನು ತಪ್ಪಿಸಬೇಕು, ಜೊತೆಗೆ ಪ್ರತಿ ಹಾಲಿನ ಬೆಲೆ 30 ರೂ ಕೊಡಬೇಕು. ಬೆಲೆ ಏರಿಕೆ ಆದೇಶವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ಹಿಂಡಿ ಬೂಸ, ಪೀಡ್ ಹಾಗೂ ಹಸುಗಳು, ಬಂಡಿಗಳ ಸಮೇತ ಮುತ್ತಿಗೆ ಹಾಕಿ ಅದ್ಯಕ್ಷರಾದ ಕೆ.ವೈ ನಂಜೇಗೌಡರಿಗೆ ಮನವಿ ನೀಡಿ ಅಗ್ರಹಿಸಲಾಯಿತು .Raitha sangha kmf feed dicrease horata news 0508-2019 (15)

ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಕುಟುಂಬಗಳನ್ನು ಹಾಳು ಮಾಡುವ ಮದ್ಯದ ಬೆಲೆ200 ರೂಪಾಯಿ ಒಂದು ಲೀಟರ್ ನೀರಿನ ಬೆಲೆ 24 ರೂ ಆದರೆ ಪೌಷ್ಠಿಕಾಂಶ ಆರೋಗ್ಯ ನೀಡುವ ಹಾಲಿನ ಬೆಲೆ ಕೇವಲ 22 ರೂಪಾಯಿ, ಒಂದು ಕಡೆ ಖಾಸಗಿ ಅಂಗಡಿಗಳ ಹಿಂಡಿ, ಬೂಸ ದಂದೆ ಮತ್ತೊಂದು ಕಡೆ ನಷ್ಟದಲ್ಲಿದ್ದರು ಹೈನೋದ್ಯಮವನ್ನೇ ನಂಬಿ ತೀವ್ರವಾದ ಬರಗಾಲ ಹಾಗೂ ಬೆಳೆ ನಷ್ಟದಿಂದ ಕಂಗಲಾಗಿ ಮಾಡಿದ ಸಾಲ ತೀರಿಸಲಾಗದೆ ಹಾಗೂ ತನ್ನ ಕುಟುಂಬದ ಜೀವನಕ್ಕಾಗಿ ಸ್ವಾಭಿಮಾನದ ಲಕ್ಷಾಂತರ ರೈತ ಕುಟುಂಬಗಳು ಹೈನೋದ್ಯಮದಲ್ಲಿ ತೊಡಗಿ ಕಷ್ಟಕರವಾಗಿದ್ದರೂ ತನ್ನ ಕುಟುಂಬದ ಆಧಾರ ಸ್ಥಂಭ ಮಾಡಿಕೊಂಡು ಜೀವನ ಮಾಡುತ್ತಿದ್ದ ಹೈನೋದ್ಯಮದ ಮೇಲೆ ಕೆ.ಎಮ್.ಎಪ್ ಆಡಳಿತ ಮಂಡಳಿ ಕಚ್ಚಾ ಪದಾರ್ಥಗಳ ಏರಿಕೆ ನೆಪದಲ್ಲಿ ಏಕಾ ಏಕಿ ಪಶು ಆಹಾರ ಬೆಲೆಯನ್ನು ಪ್ರತಿ ಟನ್‍ಗೆ 2000 ರೂಪಾಯಿ ಏರಿಕೆ ಮಾಡಿ ಅಮಾಯಕ ನೊಂದು ಬೆಂದಿರುವ ಬಡವರ ಮೇಲೆ ಬ್ರಹ್ಮಾಸ್ತ್ರವೆತ್ತುತ್ತಿರುವುದು ಲಕ್ಷಾಂತರ ಕುಟುಂಬಗಳ ರೈತರು ಆಡಳಿತದ ಮಂಡಳಿಯ ಹಾಗೂ ಡೈರಿಯನ್ನು ಉದ್ದಾರ ಮಾಡಿ ಹಾಲು ಉತ್ಪಾದಕರನ್ನು ಅಭಿವೃದ್ದಿ ಮಾಡುತ್ತೇನೆಂದು ಆಯ್ಕೆಯಾದ ಜನ ಪ್ರತಿನಿಧಿಗಳು ಮೌನವಾಗಿರುವುದಕ್ಕೆ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರುRaitha sangha kmf feed dicrease horata news 0508-2019 (4)

ಮಹಿಳಾ ಜಿಲ್ಲಾದ್ಯಕ್ಷೆ ಎ,ನಳಿನಿ ಮಾತನಾಡಿ ಅಧಿಕಾರಿಗಳು ಎ.ಸಿ ರೂಮಿನಲ್ಲಿ ಕುಳಿತು ಎಲುಬಿಲ್ಲದ ನಾಲಿಗೆಯಂತೆ ಮನಸ್ಸಿಗೆ ಬಂದ ರೀತಿ ಆದೇಶ ಮಾಡುವುದು ಸಾಮಾನ್ಯವಾಗಿದೆ. ಗ್ರಾಮೀಣ ಪ್ರದೇಶದ ಜನರ ನೋವು ಗೊತ್ತಿಲ್ಲದ ಜೊತೆಗೆ ಒಂದು ದಿನವಾದರೂ ಹಸುವನ್ನು ಮೇಯಿಸಿ ಸಗಣಿ ಎತ್ತಿ ಹಾಲು ಕರೆದು ಡೈರಿಗೆ ಹಾಕಿದರೆ ಅದರ ನೋವು ಗೊತ್ತಾಗುತ್ತದೆ. ಅದನ್ನು ಬಿಟ್ಟು ಸೂಟು ಬೂಟು ಹಾಕಿಕೊಂಡು ಸರ್ಕಾರದ ಸಂಬಳ ಪಡೆದು ನಾನು ರೈತನ ಮಗನೇ ಎಂದು ರೈತರ ಹೆಸರೇಳಿಕೊಂಡು ಈ ರೀತಿ ಒಂದು ಹಾಲು ಉತ್ಪಾದನೆ ಮಾಡಲು ತಗಲುವ ವೆಚ್ಚವನ್ನು ಪರಿಗಣಿಸದೇ ಈ ರೀತಿ ಆದೇಶ ಮಾಡುವ ಅಧಿಕಾರಿಗಳೇ ರೈತರನ್ನು ಶೋಷಣೆ ಮಾಡಬೇಡಿ, ಸಂಕಷ್ಟದಲ್ಲಿರುವ ಹೈನೋದ್ಯಮದ ರಕ್ಷಣೆಗೆ ನಿಲ್ಲಬೇಕಾದ ನೀವೇ ಈ ರೀತಿ ಏಕ ರೂಪದ ನಿರ್ದಾರ ತೆಗೆದುಕೊಂಡು ಲಕ್ಷಾಂತರ ಕುಟುಂಬಗಳ ಜೀವನದ ಜೊತೆ ಚೆಲ್ಲಾಟವಾಡುವುದನ್ನು ಬಿಟ್ಟು ಪಶು ಆಹಾರ ನೆಪದಲ್ಲಿ ಹಗಲು ದರೋಡೆ ಬೇಡ ಕೂಡಲೇ ಆದೇಶವನ್ನು ಹಿಂಪಡೆದು ನಷ್ಟದಲ್ಲಿದ್ದರೂ ಸ್ವಾಭಿಮಾನದ ಬದುಕಿಗಾಗಿ ಅದನ್ನೇ ನಂಬಿರುವ ಕುಟುಂಬಗಳನ್ನು ರಕ್ಷಿಸಿ ಲಂಗು ಲಗಾಮು ಇಲ್ಲದೆ ಅವರ ಮನ ಬಂದಂತೆ ಹಿಂಡಿ ಬೂಸ ಬೆಲೆಯನ್ನು ಏರಿಸುತ್ತಿರುವ ಖಾಸಗಿ ಅಂಗಡಿಗಳಿಗೆ ಬೆಲೆ ನಿಯಂತ್ರಣ ಕಾಯ್ದೆ ಯನ್ನು ಜಾರಿಗೆ ತರಬೇಕು ಹಾಗೂ ನೋ ಪೇಮೆಂಟ್, ಎಲ್.ಎಲ್.ಆರ್ ಹೆಸರಿನಲ್ಲಿ ರೈತರ ಶೋಷಣೆಯನ್ನು ತಪ್ಪಿಸಬೇಕು ಇಲ್ಲವಾದರೆ ಹಸುಗಳ ಸಮೇತ ಆಹೋರಾತ್ರಿ ಡೈರಿಯ ಮುಂದೆ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದರು.

Raitha sangha kmf feed dicrease horata news 0508-2019 (10)
ಮನವಿ ಸ್ವೀಕರಿಸಿ ಮಾತನಾಡಿದ ಕೋಚಿಮುಲ್ ಅದ್ಯಕ್ಷರು ಕೆ.ವೈ ನಂಜೇಗೌರವರು ಮಾತನಾಡಿ ಪಶು ಆಹಾರ ಏರಿಕೆ ಕಂಡು ನನಗೂ ಅಸಮಾಧಾನವಾಗಿದೆ. ಈ ಬಗ್ಗೆ ಅತೀ ಶೀಘ್ರದಲ್ಲಿ ಬೋರ್ಡ್ ಸಭೆ ಕರೆಯುವ ಜೊತೆಗೆ ಉಸ್ತುವಾರಿ ಸಚಿವರನ್ನೊಳಗೊಂಡಂತೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಈ ಆದೇಶವನ್ನು ಹಿಂಪಡೆದು ಜೊತೆಗೆ ಎಲ್.ಎಲ್.ಆರ್ ನೋ ಪೇಮೆಂಟ್ ಬಗ್ಗೆ ಸೂಕ್ತವಾದ ಮಾಹಿತಿ ತರಿಸಿಕೊಂಡು ಸಮಸ್ಯೆ ಬಗೆಹರಿಸುವ ಭರವಸೆಯನ್ನು ನೀಡಿದರು.

ಈ ಹೋರಾಟದಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್, ಬಂಗವಾದಿ ನಾಗರಾಜಗೌಡ, ರೋಜ, ಮಂಜುಳಾ, ಹಸಿರು ಸೇನೆ ಜಿಲ್ಲಾದ್ಯಕ್ಷ ಹುಲ್ಕೂರ್ ಹರೀಕುಮಾರ್, ಪುರುಷೋತ್ತಮ್ ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ವಿಜಯ್‍ಪಾಲ್, ಮೇಲುಗಾಣಿ ದೇವರಾಜ್, ಮೀಸೆ ವೆಂಕಟೇಶಪ್ಪ, ಕ್ಯಾಸಂಬಳ್ಳಿ ಪ್ರತಾಪ್, ವಡ್ಡಹಳ್ಳಿ ಮಂಜುನಾಥ್, ಉದಯ್‍ಕುಮಾರ್, ರಾಮಕೃಷ್ಣಪ್ಪ, ನವೀನ್, ಕೋಲಾರ ಮಾಲೂರು ತಾ.ಅದ್ಯಕ್ಷ ವೆಂಕಟೇಶ್, ಮು.ತಾ.ಅ.ಪಾರುಕ್‍ಪಾಷ, ರಂಜಿತ್, ರಾಮಸ್ವಾಮಿ, ಸುಪ್ರೀಂಚಲ, ಮುನಿಯಪ್ಪ, ಮುರಳಿ, ಸಾಗರ್, ಚಂದ್ರಪ್ಪ, ಪುತ್ತೇರಿ ರಾಜು, , ಬಾಲು, ಲಕ್ಷಮ್ಮ, ಶಾಂತಮ್ಮ, ರಾಮಕ್ಕ, ಹಾಗೂ ಹಾಲು ಉತ್ಪಾದಕರಿದ್ದರು.

By suddi9

Leave a Reply

Your email address will not be published. Required fields are marked *