ಬಂಟ್ವಾಳ: ಸೋಮವಾರ ರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿರುವ ಬಿರುಸಿನ ಮಳೆಗೆ ನೇತ್ರಾವತಿ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಮಂಗಳವಾರ ಸಂಜೆ ನದಿ ತೀರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು.
ಎಎಂಆರ್,ಸರಪಾಡಿ ಅಣೆಕಟ್ಟು ಪ್ರದೇಶಗಳ ಸಹಿತ ವಿವಿಧ ಬಂಟ್ವಾಳ ಸುತ್ತಮುತ್ತ ನೇತ್ರಾವತಿ ನದಿನೀರು ಹರಿಯುವ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ತೆಗೆದು ಕೊಳ್ಳಲಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರಲ್ಲೆ ಸೂಕ್ತ ಕ್ರಮಕ್ಕೆ ಸಲಹೆ, ಸೂಚಿನೆಯನ್ನು ನೀಡಿದರು..ಈ ಸಂದರ್ಭದಲ್ಲಿ ಬಂಟ್ವಾಳ ಪುರಸಭಾ ಸದಸ್ಯ ಎ.ಗೋವಿಂದ ಪ್ರಭು,ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ , ಪ್ರಮುಖರಾದ ಸುದರ್ಶನ್ ಬಜ, ಗಣೇಶ್ ರೈ ಮಾಣಿ, ಪ್ರದೀಪ್ ಅಜ್ಜಿಬೆಟ್ಟು,ಕಾರ್ತಿಕ್ ಬಳ್ಳಾಲ್ ,ಮಹೇಶ್ ಶೆಟ್ಟಿ ,ಪವನ್ ಕುಮಾರ್ ಶೆಟ್ಟಿ ಮುತ್ತೂರು ಮೊದಲಾದವರಿದ್ದರು. 