ಬಂಟ್ವಾಳ, :  ತಾಲೂಕಿನಾದ್ಯಂತ ಗುರುವಾರ ಬೆಳಿಗ್ಗೆಯಂದ    ಸಾಧಾರಣ ಮಳೆಯಾಗಿದೆ. ಆದರೆ, ಬುಧವಾರ ರಾತ್ರಿ ಗಾಳಿಮಳೆಯಿಂದಾಗಿ ತಾಲೂಕಿನ ವಿವಿಧ ಭಾಗಗಳಲ್ಲಿ ಕೃತಕ ನೆರೆ, ಮನೆಗಳಿಗೆ ಹಾನಿ, ಗುಡ್ಡ ಜರಿದು ತೊಂದರೆ, ರಸ್ತೆಯಲ್ಲಿ ನೀರು, ಕೆಸರು ತುಂಬಿ ಸಮಸ್ಯೆಗಳಾಗಿದ್ದು, ಬಂಟ್ವಾಳ ತಾಲೂಕಿನಲ್ಲಿ ಗುರುವಾರದಂದು ಒಟ್ಟು ೫೩ ಹಾನಿ ಪ್ರಕರಣಗಳು ವರದಿಯಾಗಿವೆ.
ಇವುಗಳಲ್ಲಿ ೬ ಮನೆಗಳಿಗೆ ಸಂಪೂರ್ಣ ಹಾನಿ, ೩೦ ಮನೆಗಳು ಭಾಗಶಃ ಹಾನಿ, ೫ ತೋಟಗಾರಿಕಾ ಹಾನಿ ಹಾಗೂ ೧೨ ಇತರ ಹಾನಿಗಳಾಗಿರುವ ಬಗ್ಗೆ ವರದಿಯಾಗಿವೆ ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ತಿಳಿಸಿದ್ದಾರೆ.

IMG-20190808-WA0133

ಮಳೆ ಹಾನಿ:
ಕುಡಂಬೆಟ್ಟು ಗ್ರಾಮದ ಶಾರದಾ ಹಾಗೂ ಬಾಬು ಮನೆಗಳಿಗೆ ಭಾಗಶಃ ಹಾನಿ, ಬಸ್ತಿಕೋಡಿಯ ಲಕ್ಷ್ಮಣ ಗಟ್ಟಿ ಎಂಬವರ ತೋಟಕ್ಕೆ ಹಾನಿ, ಕಾವಳಪಡೂಡು ಗ್ರಾಮದ ಜೆಫ್ರಿರೋಡ್ರಿಗಸ್ ಅಡಿಕೆ ಮರಗಳಿಗೆ ಹಾನಿ, ಕೊಯಿಲ ಗ್ರಾಮದ ಹರಿಣಾಕ್ಷಿ ಎಂಬವರ ನಿರ್ಮಾಣ ಹಂತದಲ್ಲಿರುವ ಮನೆಗೆ ಹಾನಿ, ಕೊಯಿಲ ಗ್ರಾಮದ ಪ್ರೇಮ ಎಂಬವರ ಮನೆಗೆ ಭಾಗಶಃ ಹಾನಿ, ಮಣಿನಾಲ್ಕೂರು ಗ್ರಾಮದ ಕೃಷ್ಣಪ್ಪ ನಾಯ್ಕ್ ಮನೆಯ ಗುಡ್ಡ ಜರಿದು ಹಾನಿ, ರಾಯಿ ಗ್ರಾಮದ ರಹಿಮತ್ ಹಾಗೂ ಕೆದಿಲ ಗ್ರಾಮದ ವಾಸು ಎಂಬವರ ಮನೆಗಳಿಗೆ ಭಾಗಶಃ ಹಾನಿ, ಕುಂಟ್ರಕಳ ನಿವಾಸಿ ಜಾನಕಿ ಎಂಬವರ ಕೃಷಿಗೆ ಹಾನಿ, ಕೈರಂಗಳ ಗ್ರಾಮದ ಕಾಲುದಾರಿ ಕುಸಿದು ಸಂಕರ್ಪ ಕಡಿತ, ಬಡಗಕಜೆಕಾರು ಗ್ರಾಮದ ಬಾಲಕೃಷ್ಣ ಎಂಬವರ ೭೦ ಅಡಿಕೆ ಮರ, ೫ ತೆಂಗಿನ ಮರಗಳಿಗೆ ಹಾನಿಯಾಗಿ ನಷ್ಟ ಸಂಭವಿಸಿದೆ.

19-35-39-24-768x512
ಕೆದಿಲ ಗ್ರಾಮದ ಚಂದಪ್ಪ ಮಡಿವಾಳ ರವರ ಮನೆಗೆ ತೆಂಗಿನ ಮರ ಬಿದ್ದು ಹಾನಿ, ಇರಾ ಗ್ರಾಮದ ಪಂಜಿಕಲ್ಲುವಿನ ನೆಫಿಯಾ ಎಂಬವರ ಮನೆಯ ಶೆಡ್‌ಗೆ ಹಾನಿ, ಸಜಿಪನಡು ಗ್ರಾಮದ ಯೂಸುಫ್ ಎಂಬವರ ಮನೆ, ಲಕ್ಷ್ಮೀ ಎಂಬವರ ಮನೆಗೆ ತೀವ್ರ ಹಾನಿ, ವಿಟ್ಲ ಕಸ್ಬಾ ಗ್ರಾಮದ ವಿಮಲ ಅವರ ಮನೆಗೆ, ಭಾಸ್ಕರ ಎಂಬವರ ಕಚ್ಛಾ ಮನೆಗೆ ಹಾನಿ, ಚೆನೈತ್ತೋಡಿ ಗ್ರಾಮದ ಉಮಾವತಿ ಯವರ ಮನೆಗೆ, ವಿಟ್ಲ ಕಸ್ಬಾಗ್ರಾಮದ ಕಮಲ ರವರ ಮನೆಗೆ ಕೆದಿಲ ಗ್ರಾಮದ ಲಲಿತು ಹಾಗೂ ಕುಸುಮ ರವರ ಕಚ್ಛಾಮನೆ ಭಾಗಶಃ ಹಾನಿ, ವಿಟ್ಲ ಕಸ್ಬಾ ಗ್ರಾಮದ ಗಣೇಶ ಎಂಬವರ ಮನೆಗೆ ಮರಬಿದ್ದು ಹಾಣಿ, ಪಾಣೆಮಂಗಳೂರು ಗ್ರಾಮದ ಸುಂದರ ಪೂಜಾರಿಯವರ ಮನೆಗೆ ಕಚ್ಛಾ ಮನೆ ತೀವ್ರಹಾನಿ, ವಿಟ್ಲ ಕಸ್ಬಾ ಗ್ರಾಮದ ಗಿರಿಜ ರವರ ಮನೆಗೆ ಮರ ಬಿದ್ದು ಹಾನಿ, ಇಲ್ಲಿನ ಶಾರದಾ ಭಜನಾಮಂದಿರದ ಒಂದು ಬದಿಯ ಗೋಡೆಗೆ ಹಾನಿಯಾಗಿದೆ.

19-35-32-27-768x512
ಅದೇ ರಿತಿ ಅಳಿಕೆ ಗ್ರಾಮದ ಅಬುಬಕರ್ ಎಂಬವರ ಮನೆಗೆ ಭಾಗರ್ಶ ಹಾಣಿ, ಸಜಿಪನಡು ಗ್ರಾಮದ ಕೃಷ್ಣಪ್ಪ ಸಫಲ್ಯರ ಮನೆಗೆ ಮರಬಿದ್ದು ತೀವ್ರಹಾನಿ, ಸಜಿಪಮುನ್ನೂರು ಗ್ರಾಮದ ಶೇಖಬ್ಬ ರವರ ಮನೆಗೆ ಕಚ್ಛಾ ಮನೆಗೆ ಹಾನಿ, ಕೆದಿಲ ಗ್ರಾಮದ ರಾಮಮೂಲ್ಯ,, ಇಬ್ರಾಹಿಂ ರವರ ಮನೆಯ ಕೊಟ್ಟಿಗೆಗಳಿಗೆ ಹಾನಿಯಾಗಿದ್ದರೆ, ಇದೇ ಗ್ರಾಮದ ಬಾವು ಬ್ಯಾರಿಯವರ ಮನೆಯ ಆವರಣ ಗೋಡೆ ಕುಸಿದು ಬಸ್‌ಸ್ಟ್ಯಾಂಡ್ ಗೆ ಹಾನಿ, ಸಜಿಪನಡು ಗ್ರಾಮದ ಅವ್ವಾ ಜುಮಾ ಮಸೀದಿಯ ಒಂದು ಕೊಠಡಿಯ ಛಾವಣಿ ಹಾರಿ ಹೋಗಿರುವುದು, ಕೇಪು ಗ್ರಾಮದ ಖಂಡಿಗ ನಾರಾಯಣ ನಾಯ್ಕರ ಪಕ್ಕಾ ಮನೆಗೆ ಭಾಗಶಃ ಹಾನಿ, ಸಾಲೆತ್ತೂರು ಗ್ರಾಮದ ವಾರಿಜ, ಕೇಪು ಗ್ರಾಮದ  ರತ್ನ, ಇಡ್ಕಿದು ಗ್ರಾಮದ ಲಕ್ಷ್ಮೀ, ಪುದು ಗ್ರಾಮದ  ಮಮ್ತಾಝ್, ಇಡ್ಕಿದು ಗ್ರಾಮದ ಸೀತಾ ರವರ ಮನೆಗಳಿಗೆ ಭಾಗಶಃ ಹಾನಿಸಜಿಪನಡುಗ್ರಾಮದ ವೆಂಕಪ್ಪ ಬಂಗೇರ ರವರ ಅಡಿಕೆ ತೋಡದಲ್ಲಿ ೪೦ ಅಡಿಕೆ ಮರಗಳು ನೆಲಕ್ಕುರುಳಿವೆ, ಕಾವಳ ಮೂಡುರು ಗ್ರಾಮದ ಜಯಲಕ್ಷ್ಮೀ, ಕರ್ಪೆ ಗ್ರಾಮದ ತಮ್ಮಯ್ಯ ಪೂಜಾರಿ ರವರ ದನದ ಕೊಟ್ಟಿಗೆಗೆ ಹಾಣಿಯಾಗಿವೆ, ಸಂಗಬೆಟ್ಟು ಗ್ರಾಮದ ಗುರುವಪ್ಪ ಮೂಲ್ಯ ಹಾಗೂ ಇಡ್ಕಿದು ಗ್ರಾಮದ ಚಂದ್ರಯ್ಯ ಆಚಾರಿಯವರ ಕಚ್ಛಾ ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂದು ತಾಲೂಕು ತಹಶೀಲ್ದಾರ್ ಪ್ರಕಟನೆ ತಿಳಿಸಿದೆ.

3ಶಾಸಕರಭೇಟಿ ;  ಬಂಟ್ವಾಳ ಶಾಸಕ ರಾಜೇಶ್  ನಾಯ್ಕ್ ಅವರು ಬಂಟ್ವಾಳ ಪೇಟೆಯ ನೆರೆಪೀಡಿತ ಪ್ರದೇಶಗಳಿಗೆ  ಭೇಟಿ  ನೀಡಿದರು.ಬಡ್ಡಕಟ್ಟೆ ಮೀನು ಮಾರ್ಕೆಟ್,ಬಸ್ ತಂಗುದಾಣಕ್ಕೆ ನೀರು ನುಗ್ಗಿರುವ ಪ್ರದೇಶ, ಶ್ರೀ ತಿರುಮಲ ವೆಂಕಟರಮಣ ದೇವಳದ ಮುಂಭಾಗದಲ್ಲಿ ಹರಿಯುವ ನೇತ್ರಾವತಿಯ ನೀರಿನ ಮಟ್ಟವನ್ನು ವೀಕ್ಷಿಸಿದ ಶಾಸಕರು ಅಧಿಕಾರಿಗಳಿಗೆ ಕರೆ ಮಾಡಿ  ಎಲ್ಲಾ ರೀತಿಯಲ್ಲು ಕಟ್ಟೆಚ್ಚರ ವಹಿಸುವಂತೆ ಸೂಚಿಸಿದರು.ಶಾಸಕರೊಂದಿಗೆ ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ,ಪುರಸಭಾ ಸದಸ್ಯ ಗೋವಿಂದ ಪ್ರಭು,ಸರಪಾಡಿ ಪಂ.ಸದಸ್ಯ ಧನಂಜಯ ಶೆಟ್ಟಿ,ಪುರುಷೋತ್ತಮ ಶೆಟ್ಟಿ ವಾಮದಪದವು, ಗಣೇಶ್ ರೈ ಮಾಣಿ  ಪ್ರದೀಪ್ ಅಜ್ಜಿಬೆಟ್ಟು,ಪವನ್ ಕುಮಾರ್ ಶೆಟ್ಟಿ ಮುತ್ತೂರು ಮೊದಲಾದವರಿದ್ದರು.

 

By suddi9

Leave a Reply

Your email address will not be published. Required fields are marked *