ಬಂಟ್ವಾಳ: ತಾಲೂಕಿನಾದ್ಯಂತ ಕಳೆದ ಆರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಶುಕ್ರವಾರ ನೇತ್ರಾವತಿ ನದಿಯು ಅಪಾಯದ ಮಟ್ಟವನ್ನು ಮೀರಿ ಅಂದರೆ ಸಂಜೆಯ ಹೊತ್ತಿಗೆ 10.4 ಮೀ.ನಲ್ಲಿ ಹರಿಯುತ್ತಿದ್ದು, ಎಲ್ಲಿ  ನೋಡಿದರಲ್ಲಿ ನೀರು ತುಂಬಿರುವ ದೃಶ್ಯ ಕಂಡು ಬಂದಿದೆ.    ನೆರೆಯಿಂದಾಗಿ ತಾಲೂಕಿನಲ್ಲಿ ಒಟ್ಟು 58 ಮನೆಗಳು,ಅಜಿಲಮೊಗರು,ಬರಿಮಾರು ಮಸೀದಿಯು ಜಲಾವೃತಗೊಂಡಿದೆ.

IMG-20190809-WA0139            ನಾವೂರು,ಅಜಿಲಮೊಗರು, ಕಡೇಶ್ವಾಲ್ಯ,  ಬಂಟ್ವಾಳ ಸಮೀಪದ ಜಕ್ರಿಬೆಟ್ಟು,ಬಡ್ಡಕಟ್ಟೆ,ವಿ.ಪಿ.ರಸ್ತೆ, ಕಂಚಿಕಾರಪೇಟೆ,ಬಸ್ತಿಪಡ್ಪು,ಭಂಡಾರಿಬೆಟ್ಟು,ನಂದರಬೆಟ್ಟು,ತಲಪಾಡಿ, ಮೊದಲಾದೆಡೆ ನೀರಿನಿಂದ ಮನೆಗಳು ಜಲಾವೃತವಾಗಿದೆ. ಹಾಗೆಯೆ ಬರಿಮಾರು-  ಬುಡೋಳಿ ಸಂಪರ್ಕ ರಸ್ತೆಯು ಮುಳುಗಡೆಯಾಗಿದೆ.  ಬ್ರಹ್ಮರಕೊಟ್ಲು ಪ್ರದೇಶದಲ್ಲಿ ಕೃಷಿ ಭೂಮಿಗೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಮನೆಗಳಲ್ಲದೆ,ತೋಟ,ಕೃಷಿ ಭೂಮಿಯು ಜಲಾವೃತಗೊಂಡಿದೆ.

IMG-20190809-WA0128ಮುಳುಗಡೆ ಪ್ರದೇಶದ ಸುಮಾರು 300 ಕ್ಕೂ ಹೆಚ್ಚು ಮಂದಿ ಸಂತ್ರಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಹಶೀಲ್ದಾರ್ ರಶ್ಮಿ ಅವರು ತಿಳಿಸಿದ್ದಾರೆ.    ಬಂಟ್ವಾಳಪ್ರವಾಸಿಮಂದಿರ,ಪಾಣೆಮಂಗಳೂರು ಪ್ರೌಢಶಾಲೆಯಲ್ಲಿ ಗಂಜಿ ಕೇಂದ್ರವನ್ನು ತೆರೆಯಲಾಗಿದೆ.ಕೆಲವರು ಗಂಜಿ ಕೇಂದ್ರದಲ್ಲಿ ಉಳಿದುಕೊಂಡರೆ,ಮತ್ತೆ ಕೆಲ ಸಂತ್ರಸ್ಥರು ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದಾರೆ. ನೇತ್ರಾವತಿಯಲ್ಲಿ ಇನ್ನಷ್ಟು ನೀರು ಏರಿಕೆಯಾದರೆ 41ಮನೆಗಳು ಜಲಾವೃತವಾಗುವ ಭೀತಿಯಲ್ಲಿದ್ದು,ಈ ಮನೆಯ ಕುಟುಂಬಸ್ಥರು ಕೂಡ  ಈಗಾಗಲೇ   ಮನೆ ಖಾಲಿ ಮಾಡಿದ್ದಾರೆ.   ಶುಕ್ರವಾರ ದಿನವಿಡಿ ಗಾಳಿ,ಮಳೆಯಿಂದಾಗಿ  ಜನಜೀವನವು ಅಸ್ತವ್ಯಸ್ತಗೊಂಡಿತು.

IMG-20190809-WA0125                             ಬಂಟ್ವಾಳ ಬಡ್ಡಕಟ್ಟೆ ಮೀನು ಮಾರ್ಕೆಟ್,ಬಸ್ ತಂಗುದಾಣ ಪ್ರದೇಶ,ಆಲಡ್ಕ,ಜಕ್ರಿಬೆಟ್ಟು,ಬಸ್ತಿಪಡ್ಪು ಬಳಿ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರ ಮನೆಯ ಅಂಗಳಕ್ಕೆ ನೀರು ನುಗ್ಗಿದ್ದರಿಂದ ಈ ರಸ್ತೆಯಲ್ಲಿ ವಾಹನ  ಸಂಚಾರವು ಸ್ಥಗಿತಗೊಂಡಿತು.ಎಲ್ಲಾ ವಾಹನಗಳು ಗಾಣದಪಡ್ಪ ಆಗಿ ನೆರೆ ವಿಮೋಚನಾ ರಸ್ತೆಯ ಮೂಲಕಬಂಟ್ವಾಳಕ್ಕೆಪ್ರವೇಶಿಸುತ್ತಿದೆ.              ಶಾಸಕರಿಂದ ರೆಸ್ಕ್ಯೂ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಬಂಟ್ವಾಳದಲ್ಲಿಯೇ ಮೊಕ್ಕಾಂ ಇದ್ದು,ಪರಿಸ್ಥಿತಿಯನ್ನು ಅವಲೋಕಿಸುವುದರ ಜೊತೆಗೆ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಮುಳುಗಡೆ ಪ್ರದೇಶದ ಸಂತ್ರಸ್ಥರನ್ನು ರೆಸ್ಕ್ಯೂ ಮಾಡುವಲ್ಲಿ ಮುತುವರ್ಜಿವಹಿಸಿದರು.

17-02-48-IMG_5610-768x512 (1) ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ನಿವಾಸಿಗಳಾದ ಜಯಪೂಜಾರಿ,ಬಾಲಕೃಷ್ಣ ಪೂಜಾರಿ, ಲಕ್ಷಣ ಪೂಜಾರಿ, ಪೂವಪ್ಪ ಪೂಜಾರಿ ಎಂಬವರ ಮನೆಗಳಿಗೆ ನಾಡದೋಣಿಯ ಮೂಲಕ ತೆರಳಿದ  ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ  ಅವರು ಅಲ್ಲಿನ ಸಂತ್ರಸ್ಥರನ್ನು ಭೇಟಿ ಯಾಗಿ ಇವರನ್ನು ದೋಣಿಯ ಮೂಲಕ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ವ್ಯವಸ್ಥೆ ಮಾಡಿದರು.ಇಲ್ಲಿ  ರಸ್ತೆ ಸಂಪರ್ಕ ಸಂಪೂರ್ಣ ಕಡಿತವಾಗಿದ್ದು ,ದ್ವೀಪದಂತಿರುವ ಪ್ರದೇಶಗಳಿಗೆ ನಾಡದೋಣಿಯ ಮೂಲಕ ಮಾತ್ರ ಸಂಪರ್ಕ ಸಾಧ್ಯವಾಗಿತ್ತು. ಜಲಾವೃತಗೊಂಡ ಅಜಿಲಮೊಗರು ಮಸೀದಿ ಗೆ ಬೇಟಿ ನೀಡಿ ಅಲ್ಲಿನ ಪ್ರಮುಖರಿಂದ ಮಾಹಿತಿ ಪಡೆದರು.

17-02-40-IMG_5615-768x512
ಈ ಸಂದರ್ಭದಲ್ಲಿ ಪ್ರಮುಖರಾದ ದೇವದಾಸ ಶೆಟ್ಟಿ, ಗೋವಿಂದ ಪ್ರಭು, ಧನಂಜಯ ಶೆಟ್ಟಿ, ಪೂವಪ್ಪ ಪೂಜಾರಿ ಕಡಮಜೆ, ಪುರುಷೋತ್ತಮ ಪೂಜಾರಿ ಮಜಲು, ವಸಂತ ಪೂಜಾರಿ ದೆಚ್ಚಾರು, ನಾರಾಯಣ ಪೂಜಾರಿ ದೆಚ್ಚಾರು,ಆನಂದ ಶೆಟ್ಟಿ ಬಾಚಕೆರೆ, ಅಭಿಷೇಕ್ ಪೂಜಾರಿ, ಸುದರ್ಶನ್ ಬಜೆ, ಶಶಿಕಾಂತ್ ಶೆಟ್ಟಿ, ರಮಾನಾಥ ರಾಯಿ, ಪುರುಷೋತ್ತಮ ಶೆಟ್ಟಿ ಬಾರೇಕಿನಾಡಿ, ಮನೋಜ್ ಕೊಟ್ಯಾನ್,ಪವನ್ ಕುಮಾರ್ ಶೆಟ್ಟಿ,ಮುತ್ತೂರು ಪ್ರದೀಪ್ ಅಜ್ಜಿಬೆಟ್ಟು, ಮತ್ತಿತರರು ಶಾಸಕರೊಂದಿಗಿದ್ದರು.  ಇದೇ ವೇಳೆ ನಾವೂರ ಬೀದಿ ಪರಿಸರದಲ್ಲಿ ಪವರ್ ಕಟ್ ನಿಂದಾಗಿ ಕುಡಿಯಲ ನೀರಿಲ್ಲದಿರುವುದನ್ನು  ಸ್ಥಳೀಯರು ಶಾಸಕರ ಗಮನಕ್ಕೆ ತಂದಿದ್ದು,ಇದಕ್ಕೆ ಸ್ಪಂದಿಸಿದ ಶಾಸಕ ರಾಜೇಶ್ ನಾಯ್ಕ್ ತಹಶೀಲ್ದಾರ್ ಅವರಿಗೆ ಕರೆ ಮಾಡಿ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಿದರು.                       23 ಕಡೆ ಹಾನಿ : ಬಂಟ್ವಾಳ ತಾಲೂಕಿನಲ್ಲಿ ಒಟ್ಟು ೨೩ ಕಡೆಗಳಲ್ಲಿ ಶುಕ್ರವಾರ ಸುರಿದ ಗಾಳಿಮಳೆಗೆ ಹಾನಿಯಾಗಿದೆ. ಇವುಗಳ ಪೈಕಿ ೧ ಕೃಷಿ, ೩ ತೋಟ, ೧೯ ಮನೆಗಳು ಸೇರಿವೆ.

17-02-14-IMG_5602-768x512 ವಿವರ ಹೀಗಿದೆ. ಕುರ್ನಾಡು ಗ್ರಾಮದ ಸುಬ್ಬಗುಳಿ ಎಂಬಲ್ಲಿ ಮಸೀದಿ ಪಕ್ಕದ ಮದರಸ ಕಟ್ಟಡದ ಶೀಟುಗಳಿಗೆ ಹಾನಿಯಾಗಿವೆ. ಇಡ್ಕಿದು ಉರಿಮಜಲಿನ ವೀಣಾ ಪ್ರಕಾಶ್, ಕೆದಿಲ ರೇವತಿ ಅವರ ಮನೆ, ಕುಳ ಕಾರ್‍ಯಾಡಿಯ ಅಬ್ದುಲ್ಲ ಮನೆಗೆ ಹಾನಿಯಾಗಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ. ಮೇರಮಜಲು ಗ್ರಾಮದ ಹಬರ್ಟ್ ಡಿಸೋಜ ಅಡಿಕೆ ತೋಟ, ಅನಂತಾಡಿ ತಿಮ್ಮಪ್ಪ ಗೌಡರ ಹಟ್ಟಿ, ಕೆದಿಲ ವಿಶ್ವನಾಥ ಶೆಟ್ಟರ ತೋಟಕ್ಕೆ ಹಾನಿಯಾಗಿದೆ. ಸಜೀಪನಡು ಗ್ರಾಮದ ಅಬುಬಕ್ಕರ್, ಲಕ್ಷ್ಮೀ, ರಜಾಕ್, ಯುಸುಫ್, ಹಾಜಿರಮ್ಮ ಅವರ ಮನೆಗಳಿಗೆ ಹಾನಿಯಾದರೆ, ಬರಿಮಾರು ಗ್ರಾಮದ ಪುಷ್ಪಾ ಮನೆಗೆ ಹಾನಿಯಾಗಿದೆ. ಮೂಡುಪಡುಕೋಡಿ ಜೀನತ್, ಪಿಲಾತಬೆಟ್ಟುವಿನ ಲಈಲಾ, ಶೋಭಾ, ಪುಷ್ಪಾ, ರೋಹಿಣಿ, ಬಿಕಸಬಾ ಗ್ರಾಮದ ಲಾರೆನ್ಸ್, ಗಿಲ್ಬರ್ಟ್ ಮಿನೇಜಸ್ ಮನೆ, ಸೇಸಪ್ಪ ಬತ್ತದ ಕೃಷಿ, ಕೊಳ್ನಾಡು ಅಬ್ಬಾಸ್ ತೋಟ ಮತ್ತು ವಿಟ್ಲ ಕಸಬಾದ ಅಬ್ದುಲ್ಲ ಮನೆಗೆ ಹಾನಿಯಾಗಿದೆ. ಸಹಾಯಕ ಕಮಿಷನರ್ ರವಿಚಂದ್ರ ನಾಯಕ್,ತಹಶೀಲ್ದಾರ್ ರಶ್ಮಿ ಎಸ್.ಆರ್,ಮತ್ತವರ ಸಿಬಂದಿಗಳೊಂದಿಗೆ ನೆರೆ ಪೀಡಿತ ಪ್ರದೇಶ ಹಾಗೂ ಹಾನಿಗೊಳಗಾದ ಸ್ಥಳಕ್ಕು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು,ತಹಶೀಲ್ದಾರ್ ರಶ್ಮಿ ಅವರ ತುರ್ತು ಸ್ಪಂದನೆ, ಕಾರ್ಯ ವೈಖರಿ ವ್ಯಾಪಕ ಶ್ಲಾಘನೆಗೆ ಒಳಗಾಗಿದೆ.                    ಮ ಸ್ಥಳಾಂತರಕ್ಕೆ ಡಿಸಿ ಸೂಚನೆ:
ನೇತ್ರಾವತಿ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ನದಿ ನೀರು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನದಿ ತೀರದಲ್ಲಿ ವಾಸಿಸುವವರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೂಚಿಸಿದ್ದಾರೆ.
ಪುರಸಭೆಯಿಂದ ಟಾಂ ಟಾಂ..                          ಬಂಟ್ವಾಳ ನಗರ ಪ್ರದೇಶ ನೆರೆ ನೀರಿನಿಂದ ಅವರಿಸಿರುವುದರಿಂದ ಎಚ್ಚರಿಕೆಯಿಂದ ಇರುವಂತೆ ,ಅಪಾಯದಂಚಿನಲ್ಲಿರುವವರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಪುರಸಭೆ ಮೈಕ್ ಮೂಲಕ ಟಾಂ…ಟಾಂ ಮಾಡಿತು. ತುಂಬೆ ವೆಂಟೆಡ್ ಡ್ಯಾಂ ನಲ್ಲಿ 8.5 ಮೀ.ನಲ್ಲಿಿ ಹರಿಯುತ್ತಿದ್ದು, ಇಲ್ಲಿನ ಎಲ್ಲಾ  ಗೇಟನ್ನು  ತೆರೆಯಲಾ  ಗಿದೆ.   ಶಂಭೂರು ಎಎಂಆರ್ ನ ಎಲ್ಲಾ 26   ಗೇಟ್ ತೆರೆಯಲಾಗಿದೆ.

By suddi9

Leave a Reply

Your email address will not be published. Required fields are marked *