ಕೋಲಾರ: ಟೋಮೋಟೋ ಮಾರುಕಟ್ಟೆಗೆ ಜಾಗ ನೀಡಲು ನಿರ್ಲಕ್ಷೆ ಮಾಡುತ್ತಿರುವ ಜಿಲ್ಲಾಡಳಿತದ ವಿರುದ್ದ ಹಾಗೂ ರೇಷ್ಮೇ ಬೆಳೆಗಾರರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಸ್ವಾತಂತ್ರ್ಯ ದಿನಾಚರಣೆಯ ದಿನಾಂಕ 14-08-2019ರ ಬುಧವಾರ ಮದ್ಯ ರಾತ್ರಿ 12 ಗಂಟೆಯಿಂದ ದ್ವಜಾರೋಹಣ ಮಾಡಲು ಬರುವ ಜನಪ್ರತಿನಿದಿಗಳ ಗಮನ ಸೆಳೆಯಲು ತರಕಾರಿ, ರೇಷ್ಮೇ ಸಮೇತ ಪಲ್ಲವಿ ವೃತ್ತದಲ್ಲಿ ಅಹೋರಾತ್ರಿ ಹೋರಾಟ ಮಾಡಲು ತೋಟಗಾರಿಕೆ ಇಲಾಖೆಯಲ್ಲಿ ಕರೆದಿದ್ದ ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಯಿತು.Raitha sangha kolar hahoratri darani meeting news 09-08-2019 (2)

ಸಭೆಯಲ್ಲಿ ಮಾತನಾಡಿದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಸ್ವಾತಂತ್ರ್ಯ ಬಂದು 10 ದಶಕರಗಳು ಕಳೆದರೂ ಇಡೀ ದೇಶಕ್ಕೆ ಅನ್ನ ಹಾಕುವ ಅನ್ನದಾತನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡು ಕೋಳ್ಳಲು ಸರ್ಕಾರಗಳು ಸಂಪೂರ್ಣವಾಗಿ ವಿಪಲವಾಗಿವೆ ಅಂದು ಬ್ರೀಟಿಷರ ದಬ್ಬಾಳಿಕೆ ಮಾಡಿ ದೇಶವನ್ನು ದೋಚಿಕೊಂಡರು. ಇಂದು ನಮ್ಮಾನ್ನಾಳುವ ಅ ವಿದ್ಯಾವಂತ ಸರ್ಕಾರಗಳು ರೈತರ ಹೆಸರಿನಲ್ಲಿ ದೇಶವನ್ನು ಲೂಟಿ ಮಾಡುತ್ತಿದ್ದಾರೆ. ಒಬ್ಬ ಕಂಪನಿ ಮಾಲೀಕ ತಾನು ಉತ್ಪಾದನೆ ಮಾಡಿದ ವಸ್ತುವಿಗೆ ತಾನೇ ಮಾರುಕಟ್ಟೆಯಲ್ಲಿ ಬೆಲೆ ನಿಗದಿ ಮಾಡುತ್ತಾನೆ. ಆದರೆ ಬಿಸಿಲು ಗಾಳಿ, ಮಳೆ ಎನ್ನದೆ ರಾತ್ರಿ ಹಗಲು ಕಷ್ಟಪಟ್ಟು ಬೆಳೆದ ಬೆಳೆಯ ಬೆಲೆ ನಿಗದಿ ಮಾಡುವ ತಾಕತ್ತು ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಬೆಲೆ ನಿಗದಿ ಮಾಡಲು ಮಾರುಕಟ್ಟೆಯಲ್ಲಿ ದಳ್ಳಾಳಿಗಳನ್ನು ಅವಲಂಬಿಸಬೇಕಾಗಿದೆ.

ಮತ್ತೊಂದೆಡೆ ಅಭಿವೃದ್ದಿ ಹೆಸರಿನಲ್ಲಿ ರೈತರ ಕೃಷಿ ಜಮೀನನ್ನು ವಶಪಡಿಸಿಕೊಂಡು ಸಂಪೂರ್ಣವಾಗಿ ಕೃಷಿಯನ್ನು ಕಾರ್ಪೋರೇಟ್ ಕಂಪನಿಗಳಿಗೆ ನೀಡಿ ದೇಶದ ಆಹಾರ ಭದ್ರತೆಗೆ ದಕ್ಕೆ ತಂದು ತುತ್ತು ಅನ್ನಕ್ಕಾಗಿ ಹೊರದೇಶದ ಬಳಿ ಕೈಚಾಚಬೇಕಾದ ಪರಿಸ್ಥಿತಿ ತರುತ್ತಿದ್ದಾರೆಂದು ಸರ್ಕಾರಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾ ಕಾರ್ಯದ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ ಸತತವಾಗಿ 6 ವರ್ಷಗಳಿಂದ ಏಷ್ಯಾದಲ್ಲೇ 2 ನೇ ಸ್ಥಾನದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಯ ಸ್ಥಳ ವಿಸ್ತರಣೆ ಮಾಡಲು ಹೋರಾಟಗಳು ನಡೆಯುತ್ತಿದ್ದರೂ ಅದನ್ನು ನಿರ್ಲಕ್ಷೆಯಿಂದ ನೋಡಿ ಪ್ರತಿ ವರ್ಷ ಟೋಮೋಟೋ ಬೆಳೆಗಾರರನ್ನು ಬೇಜವಬ್ದಾರಿ ತೋರಿ ಕಷ್ಟ ಪಟ್ಟು, ಬರಗಾಲದಲ್ಲೂ ನಕಲಿ ಬೀಜಗಳು, ಔಷಧಿಗಳು, ಹಾಗೂ ನೀರಿನ ಸಮಸ್ಯೆಯಿದ್ದರೂ ಬೆಳೆದ ಬೆಳೆ ಮಾರುಕಟ್ಟೆಗೆ ತಂದರೆ ಒಂದು ಕಡೆ ಜಾಗದ ಕೊರತೆ ಮತ್ತೊಂದುಕಡೆ ದಲ್ಲಾಳಿಗಳ ಹಾವಳಿಯಿಂದ ಉತ್ತಮ ಬೆಲೆ ಪಡೆಯಲು ರೈತರು ಹರಸಾಹಸ ಪಡುತ್ತಿರುವುದು ರಾಜಕೀಯ ಮತ್ತು ಜಿಲ್ಲಾಡಳಿತದ ಕಣ್ಣುಮುಂದೆಯಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.

ನೆಪ ಮಾತ್ರಕ್ಕೆ ಮಂಗಸಂದ್ರ, ಚೆಲುವನಹಳ್ಳಿ, ಬಳಿ 40 ಎಕರೆ ಜಮೀನು ಮಂಜೂರು ಮಾಡುತ್ತೇವೆಂದು ಜನರನ್ನು ಯಾಮಾರಿಸುವ ಜೊತೆಗೆ ರೇಷ್ಮೇ ಉದ್ಯಮವನ್ನೇ ನಂಬಿ ಸತತವಾಗಿ ಬೆಲೆ ಕುಸಿತದಿಂದ ಬೀದಿಗೆ ಬಿದ್ದಿರುವ ರೇಷ್ಮೇ ಹಾಗೂ ಟೋಮೊಟೋ ಬೆಳೆಗಾರರನ್ನು ನಿರ್ಲಕ್ಷೆ ಮಾಡುತ್ತಿರುವ ಸರ್ಕಾರ ಮತ್ತು ಜಿಲ್ಲಾಡಳಿತದ ರೈತ ವೀರೋದಿ ದೋರಣೆಯನ್ನು ಖಂಡಿಸಿ ಸ್ವಾತಂತ್ರ್ಯ ಬಂದ ದಿನದಂದು ಮದ್ಯ ರಾತ್ರಿ 12 ಗಂಟೆಯಿಂದ ಬೆಳಿಗ್ಗೆ ದ್ವಜಾರೋಹಣ ಮಾಡಲು ಬರುವ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತದ ಗಮನ ಸೆಳೆಯಲು ತರಕಾರಿ, ರೇಷ್ಮೇ ಸಮೇತ ಪಲ್ಲವಿ ವೃತ್ತದಲ್ಲಿ ಅಹೋರಾತ್ರಿ ದರಣಿ ಹಮ್ಮಿಕೊಳ್ಳುವ ಮೂಲಕ ನ್ಯಾಯ ಪಡೆದುಕೊಳ್ಳುವ ಸಲಹೆಯನ್ನು ಸಭೆಯಲ್ಲಿ ನೀಡಿದರು.

ಈ ಸಭೆಯಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್, ಉದಯ್‍ಕುಮಾರ್, ಮಾ.ತಾ ಅದ್ಯಕ್ಷರು ವೆಂಕಟೇಶ್, ಪುರುಷೋತ್ತಮ್, ಈಕಂಬಳ್ಳಿ ಮಂಜುನಾಥ್, ಮಂಗಸಂದ್ರ ನಾಗೇಶ್, ವೆಂಕಟೇಶ್, ತಿಮ್ಮಣ್ಣ, ರಂಜಿತ್, ಸಾಗರ್, ಸುಪ್ರೀಂಚಲ, ಶಿವ, ನಾರಾಯಣ್, ಶ್ರೀನಿವಾಸರೆಡ್ಡಿ, ಚಂದ್ರಪ್ಪ, ಮುಂತಾದವರಿದ್ದರು.

By suddi9

Leave a Reply

Your email address will not be published. Required fields are marked *