ಕೋಲಾರ : ಕೋಲಾರ ನಗರಕ್ಕೆ ಕೂಗಳತೆಯ ದೂರದಲ್ಲಿರುವ ಶತಶೃಂಗ ಪರ್ವತದಲ್ಲಿ ತೇರಹಳ್ಳಿ ಗ್ರಾಮದ ಬಳಿ ಬೃಹದಾಕಾರದ ತ್ರೀವರ್ಣ ಧ್ವಜವನ್ನು ನೋಡಲು ನಗರದ ಮತ್ತು ಹಳ್ಳಿಗಳಿಂದ ತಂಡೋಪತಂಡವಾಗಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಬೆಟ್ಟವನ್ನೇರಿ ಬರುತ್ತಿರುವ ದೃಶ್ಯ ಒಂದೆಡೆಯಾದರೆ ಕಾರುಗಳು, ಬೈಕ್‍ಗಳಲ್ಲಿ ಜನ ತ್ರಿವರ್ಣ ಧ್ವಜದ ವೀಕ್ಷಣೆಗೆ ತೇರಹಳ್ಳಿಗೆ ಬರುತ್ತಿರುವ ದೃಶ್ಯ ಕಂಡು ಬಂದಿತು.Therahalli Flag
ಕೋಲಾರ ನಗರದ ಸಮೀಪದ ತೇರಹಳ್ಳಿ ಬೆಟ್ಟದಲ್ಲಿ ಶ್ರೀ ನೇತಾಜಿ ಕ್ರೀಡಾ ಯುವಕರ ಸಂಘದ ವತಿಯಿಂದ 73ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ 60×40 ಅಡಿಗಳ ಬೃಹತ್ ತ್ರಿವರ್ಣಧ್ವಜವನ್ನು ಹಾರಿಸಲಾಯಿತು.
ಮುಳಬಾಗಿಲು ಸೈಯದ್ ಗಫೂರ್ ಉಸ್ಮಾನ್ ಮೆಮೋರಿಯಲ್ ಟ್ರಸ್ಟ್‍ನ ಅಧ್ಯಕ್ಷ ಸೈಯದ್ ಶೇಕ್ ಲಾಲ್ ರವರು ಧ್ವಜವನ್ನು ನಿರ್ಮಿಸಲು ಬಟ್ಟೆ ಸಹಕಾರ ನೀಡಿ ರಾಷ್ಟ್ರೀಯ ಪ್ರೇಮ ತೋರಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಕೋಲಾರ ಜಿಲ್ಲಾ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ ರಾಷ್ಟ್ರೀಯ ಭಾವೈಕ್ಯತೆ ಹಾಗೂ ದೇಶ ಪ್ರೇಮ ಮೂಡಿಸುಂತಹ ಇಂತಹ ಪ್ರಯತ್ನಗಳು ಯುವಕರು ಮಾಡಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಶ್ರೀ ನೇತಾಜಿ ಕ್ರೀಡಾ ಯುವಕರ ಸಂಘದ ಪದಾಧಿಕಾರಿಗಳಾದ ಚಂದನ ಚಂದ್ರಶೇಖರ್, ಮಾಮಿ ಪ್ರಕಾಶ್, ಚಕ್ರಪಾಣಿ, ವಿಶ್ವ, ಸುಧಾಕರ್, ಸಿಂತಾಲ್, ರಾಜು, ಭುವನೇಶ್ವರ್, ಬಾಸ್ಕರ್, ಸುರೇಶ್ ಮತ್ತು ಚಿಟ್ಟಿ, ರಂಗಣ್ಣ, ತೇರಹಳ್ಳಿ ಗ್ರಾಮಸ್ಥರು ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *