ಬಂಟ್ವಾಳ : ಭಜನೆಯ ಮೂಲಕ ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯ. ಇಂತಹ ಭಜನಾ ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯಬೇಕು ಎಂದು ಶ್ರೀ ಲಕ್ಷ್ಮೀ ನಾರಾಯಣ ಬಳ್ಳಕುರಾಯರು ಹೇಳಿದರು.
ಅವರು ಆ. 16ರಂದು ನಡೆದ ಮಂಚಿ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಅಖಂಡ ಭಜನಾ ಸಪ್ತಾಹದ ಪ್ರಾರಂಭೋತ್ಸವದಲ್ಲಿ ದೀಪೆÇಜ್ವಲನ ಮಾಡಿ ಶುಭ ಹಾರೈಸಿ ಮಾತನಾಡಿದರು.

ಈ ಕಾರ್ಯಕ್ರಮವು ಅಖಂಡ ಭಜನಾ ಸಪ್ತಾಹ ಸಮಿತಿ ಮಂಚಿ ಮತ್ತು ಗೋಪಾಲಕೃಷ್ಣ ಭಜನಾ ಮಂಡಳಿ ಮಂಚಿ ಇವರ ಸಂಯುಕ್ತ ಆಶ್ರಯದಲ್ಲಿ ಆ. 23ರ ಸೂರ್ಯೋದಯದರವರೆಗೆ ನಿರಂತವಾಗಿ ನಡೆಯಲಿದೆ.
ಈ ಸಂದರ್ಭದಲ್ಲಿ ವೆಂಕಪ್ಪ ಶೆಟ್ಟಿ, ಸೂರ್ಯನಾರಾಯಣ ಭಟ್, ಸೀತಾರಾಮ ಶೆಟ್ಟಿ, ಭಾಸ್ಕರ ಕುಲಾಲ್, ಸೀತಾರಾಮ ಬಂಗೇರ, ವಿಶ್ವನಾಥ ಬಂಗೇರ, ಲಕ್ಷ್ಮಣ ಮಂಚಿ, ಶೇಖರ ಡಿ., ಹರ್ಷಿತ್ ಶೆಟ್ಟಿ ಮಂಚಿ, ರಾಮಕೃಷ್ಣ ನಾಯಕ್ ಕೋಕಳ, ಗೋಪಾಲ ಶೆಟ್ಟಿಗಾರ್, ಬಾಲಕೃಷ್ಣ ಶೆಟ್ಟಿ ಸಿ.ಎಚ್, ಗೀತಾ ಬಂಗೇರ, ವಾರಿಜ ಶೆಟ್ಟಿ, ಸೋಮಶೇಖರ ನಾಯಕ್ ಉಪಸ್ಥಿತರಿದ್ದರು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೈಯ್ಯೂರು ನಾರಾಯಣ ಭಟ್ ಸ್ವಾಗತಿಸಿದರು. ಸೀತಾರಾಮ ಬಂಗೇರ ವಂದಿಸಿದರು.
