ಜ್ಯೋತಿಗುಡ್ಡೆ : ಪ್ರಕೃತಿ ಒಲಿದರೆ ಏನಾಗುತ್ತದೆ ಮುನಿದರೆ ಏನಾಗುತ್ತದೆ ಎನ್ನುವುದನ್ನು ಕಥೆಯಾಗಿ ಕೇಳಿದ್ದೆವು ನಾವು. ಆದರೆ ಇಂದು ಅದು ನಮ್ಮೆದುರಿಗೆ ಜ್ವಲಂತವಾಗಿ ನೋಡಲು ಸಿಗುತ್ತಿದೆ. ಸರಾಗವಾಗಿ ಹಾದು ಹೊಗಬೇಕಾದ ಜಾಗದಲ್ಲಿ ಫ್ಲಾಟ್‍ಗಳನ್ನು ಕಟ್ಟಿದ್ದೇವೆ. ಪ್ರಕೃತಿ ಆರಾಧನೆ ಸಂಸ್ಕøತಿಯ ಮೂಲ ನಂಬಿಕೆಯನ್ನು ಮರೆತು ಒಂದು ಮರವಿರುವ ಕಟ್ಟೆಯ ಜಾಗವನ್ನು ಬನ ಎಂದು ಕರೆಯತೊಡಗಿದ್ದೇವೆ. ಕಲ್ಲು ಮರ ಪ್ರಾಣಿ ಪಕ್ಷಿಗಳಲ್ಲಿ ಭಗವತ್ ಸ್ವರೂಪ ಕಾಣುತ್ತಿದ್ದ ನಾವು ಹಣದ ಹಿಂದೆ ಬಿದ್ದು ನಿರ್ನಾಮಗೊಳಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಸಸ್ಯವನ್ನು ಆರಾಧನೆಯ ಭಾಗವಾಗಿಸಿ ಸಸ್ಯ ನಾರಾಯಣ ಎನ್ನುವ ವಿಶೇಷ ಹೆಸರಿನಡಿ ಕಾರ್ಯಕ್ರಮ ನಡೆಸುತ್ತಿರುವುದು ನಿಜಕ್ಕೂ ಶ್ಲಾಘನಾರ್ಹ ಎಂದು ರಾಷ್ಟ್ರೀಯ ಪರಿಸರಸಂರಕ್ಷಣಾ ಒಕ್ಕೂಟದ ಶ್ರೀಯುತ ಶಶಿಧರ್ ಶೆಟ್ಟಿ ಇವರು ಸಸಿಗಳನ್ನು ವಿತರಿಸಿಅಭಿಪ್ರಾಯ ಪಟ್ಟರು.

KES_6634

ಶ್ರೀ ಕ್ಷೇತ್ರ ಜ್ಯೋತಿಗುಡ್ಡೆಯಲ್ಲಿ ಮಳೆನೀರು ಸಂರಕ್ಷಣೆ, ಮಳೆಕೊಯ್ಲು ಮಾಡುವ ಜೊತೆಗೆ ಸಸ್ಯನಾರಾಯಣದಂತಹ ಅನನ್ಯ ಕಾರ್ಯಕ್ರಮ ನಡೆಸುತ್ತೀರಿ. ಇವು ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿಯೂ
ನಡೆಯಬೇಕಾದ ಅನಿವಾರ್ಯ ಕಾಲಘಟದಲ್ಲಿ ನಾವಿದ್ದೇವೆ. ಈ ಮಾದರಿಯನ್ನು ಮತ್ತೊಂದಷ್ಟು ಕಡೆ ನಡೆಸುವ ಉತ್ಸಾಹವನ್ನು ಐಸಿರಿ ಹೆಲ್ತ್ ಇಂಡಿಯಾ ಮಿಶನ್ನಿನ ನಿರ್ದೇಶಕರಾದ ಶ್ರೀ ದರ್ಶನ್ ಜೈನ್ ವ್ಯಕ್ತಪಡಿಸಿದರು.

KES_6625ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಹಿರಿಯರಾದ ಶಿವಮ್ಮ ಜ್ಯೋತಿಗುಡ್ಡೆ, ಪದ್ಮಾವತಿ ದೇಮುಂಡೆ, ಅಮುನಿ ದೇಮುಂಡೆ, ಬೇಬಿ ದೇಮುಂಡೆ, ಪೂವಮ್ಮ ಕಂಜೆತ್ತೂರು, ದೇಜಮ್ಮ ಕಂಜೆತ್ತೂರು ಇವರನ್ನು ಸನ್ಮಾನಿಸಲಾಯಿತು. ಶ್ರಾವಣ ಸಂಕ್ರಮಣದ ಪ್ರಯುಕ್ತ ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸಸ್ಯ ನಾರಾಯಣ ಕಾರ್ಯಕ್ರಮದಲ್ಲಿ ಇವರು ಭಾಗವಹಿಸಿ ಮಾತಾಡಿದರು.

KES_6644ವೇದಿಕೆಯಲ್ಲಿ ವಲಯ ಅರಣ್ಯಾಧಿಕಾರಿಯಾದ ಬಿ ಸುರೇಶ್, ಶ್ರೀ ದುರ್ಗಾಪರಮೇಶ್ವರೀ ಸೇವಾ ಟ್ರಸ್ಟ್‍ನ ಅಧ್ಯಕ್ಷರಾದ ಶ್ರೀಯುತ ನಾರಾಯಣ ನಾಯ್ಕ್ ಮತ್ತು ತಾರಾನಾಥ ಕೊಟ್ಟಾರಿಯವರು ಉಪಸ್ಥಿತರಿದ್ದರು.

KES_6638ದಾಕ್ಷಾಯಣಿ ಜ್ಯೋತಿಗುಡ್ಡೆ ಪ್ರಾರ್ಥನೆ ಟ್ರಸ್ಟಿಗಳಾದ ಉಮೇಶ್ ರೆಂಜೋಡಿಯವರು ಸ್ವಾಗತ, ತಾರಾನಾಥ ಕೊಟ್ಟಾರಿಯವರ ಪ್ರಾಸ್ತಾವಿಕ ನುಡಿ, ಮಲ್ಲಿಕಾ ಜ್ಯೋತಿಗುಡ್ಡೆಯವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಉದಯ ಕುಮಾರ್ ಜ್ಯೋತಿಗುಡ್ಡೆ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *