ಬಂಟ್ವಾಳ : ಸಣ್ಣ ಮತ್ತು ದೊಡ್ಡ ಸರಕು ಟೆಂಪೋ ಚಾಲಕರ ಮತ್ತು ಮಾಲಕರ ಸಂಘದ ವಾರ್ಷಿಕ ಮಹಾಸಭೆಯು ಬಿ.ಸಿ.ರೋಡ್ ನ ಶ್ರೀ ರಕ್ತೇ ಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ನ್ಯಾಯವಾದಿ ರಮಾನಾಥ ಕಾರಂದೂರು ರವರ ಅಧ್ಯಕ್ಷತೆಯಲ್ಲಿ ಜರಗಿತು. ಮುಖ್ಯ ಅಥಿತಿಗಳಾಗಿ ಲೋಕೇಶ್ ಸುವರ್ಣ ಉಪಸ್ಥಿತರಿದ್ದರು.

ಸಂಘದ ಕಾರ್ಯದರ್ಶಿ ಹರೀಶ್ ರವರು ಲೆಕ್ಕ ಪತ್ರವನ್ನು ಮಂಡಿಸಿದರು. ಇದೇ ವೇಳೆ ೨೦೧೯-೨೦ನೇ ಸಾಲಿನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ನ್ಯಾಯವಾದಿ ರಮಾನಾಥ ಕಾರಂದೂರು, ಉಪಾಧ್ಯಕ್ಷರಾಗಿ ನಾರಾಯಣ ಪೂಜಾರಿ, ಕಾರ್ಯದರ್ಶಿ ಹರೀಶ್, ಜತೆ ಕಾರ್ಯದರ್ಶಿ ಸುರೇಶ್ ಗೌಡ, ಕೋಶಾಧಿಕಾರಿ ಲತೀಫ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಾಜೇಶ್, ವಸಂತ, ನಝೀರ್, ಅಬ್ಬಾಸ್, ನಾರಾಯಣದಾಸ್, ಶೀನ, ಜಗ್ಗ, ಇಮ್ತಿಯಾಝ್ ವರದರಾಜ್, ಪದ್ಮನಾಭ, ಹರೀಶ್ ನಾಯಕ್, ನಾಗೇಶ್, ರ ವೀಂದ್ರ, ಅಶೋಕ, ಲೂಯಿಸ್ ಮೊಂತೆರೋ, ಹರೀಶ್, ರೋಬರ್ಟ್ ಡಿಸೋಜ, ಎನ್.ಕೆ.ಅಹ್ಮದ್ ಬಾವಾ, ಜಗ ದೀಶ್, ರಾಜೇಶ್, ಉಮೇಶ್ ಮತ್ತು ಹಕೀಂ ರವರನ್ನು ಆಯ್ಕೆಗೊಳಿಸಲಾಯಿತು.
ಇತ್ತೀಚೆಗೆ ಮಳೆಯಿಂದ ಹಾನಿಯಾಗಿರುವ ಬೆಳ್ತಂಗಡಿ ತಾಲೂಕಿನ ಒಂದು ಗ್ರಾಮಕ್ಕೆ ೫ಕ್ವಿಂಟಾಲ್ ಅಕ್ಕಿಯನ್ನು ಅದರ ಪರಿಹಾರ ಕೇಂದ್ರಕ್ಕೆ ನೀಡುವುದೆಂದು ನಿರ್ಧರಿಸಲಾಯಿತು. .