ಬಂಟ್ವಾಳ :   ತಾಲೂಕಿನ ವಿವಿಧ ಗ್ರಾಮಗಳ ಸುಮಾರು ೫೦೦ಕ್ಕೂ ಹೆಚ್ಚಿನ ನೆರೆ ಸಂತ್ರಸ್ತರಿಗೆ  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರು ಘೋಷಿಸಿದ ತಲಾ 10 ಸಾ.ರೂ.ವಿನಂತೆ ಒಟ್ಟು ೫೦ ಲಕ್ಷ ರೂ. ಪರಿಹಾರದ ಚೆಕ್ ಅನ್ನು ಸೋಮವಾರ ವಿತರಿಸಲಾಯಿತು.ಬಿ.ಸಿ.ರೋಡಿನ ರೋಟರಿಕ್ಲಬ್ ಸಭಾಭವನದಲ್ಲಿ  ನಡೆದ    ಬಂಟ್ವಾಳ ತಾಲೂಕಿನ ಬಿ.ಮೂಡ, ಪಾಣೆಮಂಗಳೂರು, ಬಿ.ಕಸಬ, ಸಜಿಪಮೂಡ ಮತ್ತು ಸಜಿಪಮುನ್ನೂರು ಗ್ರಾಮಗಳ ನೆರೆ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಶಾಸಕ ರಾಜೇಶ್ ನಾಯ್ಕ್ ನೆರೆ ಸಂತ್ರಸ್ತರಿಗೆ ಚೆಕ್ ವಿತರಿಸಿ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೆರೆ ಪೀಡಿತ ಜಿಲ್ಲೆಗಳಿಗೆ ಸಂಚರಿಸಿ ಸಮೀಕ್ಷೆ ನಡೆಸಿ ಪರಿಹಾರದ ಮೊತ್ತವನ್ನು ವಿತರಿಸುವ ಕಾರ್ಯ ಮಾಡಿದ್ದಾರೆ. ಇಷ್ಟು ತ್ವರಿತವಾಗಿ ಸಂತ್ರಸ್ತರಿಗೆ ಪರಿಹಾರ ನೀಡಿರುವುದು ಇದೇ ಮೊದಲು. ಇದಕ್ಕಾಗಿ ಮುಖ್ಯಮಂತ್ರಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

IMG-20190819-WA0041
ಮುಖ್ಯಮಂತ್ರಿ ಅವರು ತಮ್ಮ ಮನವಿಗೆ ಸ್ಪಂದಿಸಿ ಈ ಮೊದಲಿದ್ದ ಪರಿಹಾರದ ಮೊತ್ತವನ್ನು ೫ ಸಾವಿರದಿಂದ ೧೦ಸಾವಿರ ರೂ.ಗೆ ಹಾಗೂ ತೀವ್ರ ಹಾನಿಯ ೯೫ ಸಾವಿರ ರೂ.ದಿಂದ ೫ಲಕ್ಷ ರೂ.ವರೆಗೂ ಹೆಚ್ಚಿಸಿ ಪರಿಹಾರ ಕಾರ್ಯಕ್ಕೆ ಮುಂದಾಗಿದೆ. ಇಲ್ಲಿಯೂ ಕೂಡಾ ೧೦ ಸಾವಿರ ರೂ. ಪರಿಹಾರದ ಚೆಕ್ ಅನ್ನು ನೀಡುತ್ತಿದ್ದೇವೆ ಎಂದರು.               ಇದಕ್ಕು ಮೊದಲುಮಣಿನಾಲ್ಕೂರು, ನಾವೂರು ಗ್ರಾಮದ ೫೭ ಮಂದಿ, ಅಮ್ಟಾಡಿ ಗ್ರಾಮದ ೨೦ ಮಂದಿ ಹಾಗೂ ಬಂಟ್ವಾಳ ತಾಲೂಕಿನ ಬಿ.ಮೂಡ, ಪಾಣೆಮಂಗಳೂರು, ಬಿ.ಕಸಬ, ಸಜಿಪಮೂಡ ಮತ್ತು ಸಜಿಪಮುನ್ನೂರು ಗ್ರಾಮಗಳ ೪೪೩ ಸಂತ್ರಸ್ತರಿಗೆ ಹಾಗೂ ಕಡೇಶ್ವಾಲ್ಯ ಗ್ರಾಮದ ಸಂತ್ರಸ್ಥರಿಗೆ ಶಾಸಕರು ಚೆಕ್ ವಿತರಿಸಿದರು.

IMG-20190819-WA0086
ಈ ಸಂದರ್ಭದಲ್ಲಿ ತಹಶೀಲ್ದಾರ್ ರಶ್ಮಿ ಎಸ್.ಆರ್., ಪುರಸಭಾ ಸದಸ್ಯರಾದ ಗೋವಿಂದ ಪ್ರಭು, ಮುನೀಶ್ ಅಲಿ, ಸಿದ್ದೀಕ್ ಗುಡ್ಡೆಯಂಗಡಿ, ಮುಹಮ್ಮದ್ ನಂದರಬೆಟ್ಟು, ಸಿಬ್ಬಂದಿಗಳಾದ  ನವೀನ, ಶಿವಾನಂದ,ಸದಾಶಿವ ಕೈಕಂಬ ಹಾಜರಿದ್ದರು. ಉಪತಹಶೀಲ್ದಾರ್ ರಾಮ ಕಾಟಿಪಳ್ಳ ಸ್ವಾಗತಿಸಿ, ವಂದಿಸಿದರು. ಬಾಕ್ಸ್.. ಇದೇಮೊದಲು….ಈ ಹಿಂದೆ ನೆರೆ ಅಥವಾ ಯಾವುದೇ ವಿಚಾರದಲ್ಲಿ ಫಲಾನುಭವಿ ಅರ್ಜಿಸಲ್ಲಿಸಿ ತಿಂಗಳವರೆಗೂ ಕಚೇರಿ ಅಲೆದರೂ,ಅಧಿಕಾರಿಗಳ ಕೈ,ಕಾಲು ಹಿಡಿದರೂ ಅತೀ ಶೀಘ್ರವಾಗಿ ಪರಿಹಾರ ಸಿಕ್ಕಿರುವ ಉದಾಹರಣೆಯೇ ತಾಲೂಕಿನಲ್ಲಿ ಇಲ್ಲ, ಆದರೆ ಇದೇ ಮೊದಲ ಬಾರಿಗೆ ಪ್ರವಾಹ ಬಂದ 12 ದಿನದಲ್ಲೇ ಮುಖ್ಯಮಂತ್ರಿ ಬಿಎಸ್ ವೈ ಅವರು ಪ್ರಕಟಿಸಿದ 10 ಸಾವಿರ ರೂ. ವಿನ ಚೆಕ್ ಸಂತ್ರಸ್ಥರ ಕೈ ಸೇರಿದೆ.ಪ್ರವಾಹದ ಸಂದರ್ಭ ದ.ಕ.ಜಿಲ್ಲೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರು ನೆರೆ ಸಂತ್ರಸ್ಥರಿಗೆ 10 ಸಾ.ರೂ.ಪರಿಹಾರ ಘೋಷಿಸಿ ಮಾನವೀಯ ಸ್ಪಂದನೆ ನೀಡಿದ್ದರು . ಅದರಂತೆ ನಡೆದಿರುವ ಚೆಕ್ ನ ವಿತರಣೆಯುವಿತರಿಸಲಾಗಿದೆ.್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಅವರು ಅಷ್ಟೇ ವೇಗವಾಗಿ ಕಾಲಿಗೆ ಚಕ್ರಕಟ್ಟಿಕೊಂಡು ಎಲ್ಲಾ ನೆರೆಪೀಡಿತ ಪ್ರದೇಶಗಳಿಗೆ ಎರಡೆರಡುಬಾರಿ ಭೇಟಿ ನೀಡಿ,ಸಂತ್ರಸ್ಥರಿಂದ ಅರ್ಜಿಸಲ್ಲಿಸುವ ಕಾರ್ಯನಡೆಸಿ,ಮುಖ್ಯಮಂತ್ರಿಯವರು  ಘೋಷಿಸಿದ ಪರಿಹಾರಧನವನ್ನು ಬಿಡುಗಡೆಗೊಳಿಸಿ ಸಂತ್ರಸ್ಥರಿಗೆ ತಲುಪಿಸುವಲ್ಲಿ ಮಾನವೀಯತೆ ಮೆರೆದಿದ್ದಾರೆ.ಅಷ್ಟೇ ಅಲ್ಲದೆ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್.ಅವರನ್ನೊಳಗೊಂಡ ಕಂದಾಯ ಇಲಾಖೆಯ  ಅಧಿಕಾರಿಗಳು,ಸಿಬಂದಿಗಳು ಕೂಡ ಈ ನಿಟ್ಟಿನಲ್ಲಿ ತ್ವರಿತವಾಗಿ ಸ್ಪಂದಿಸಿರುವುದು ವ್ಯಾಪಕ ಶ್ಲಾಘನೆಗೊಳಗಾಗಿದೆ. ತಾರತಮ್ಯವಿಲ್ಲದೆ ಪರಿಹಾರ; ವಿಶೇಷವೆಂದರೆ ಈ ಬಾರಿ ಪರಿಹಾರಧನ ವಿತರಿಸುವಲ್ಲು ಯಾವದೇ ತಾರತಮ್ಯವಿಲ್ಲದೆ ನಡೆದುಕೊಳ್ಳಲಾಗಿದೆ.ಶಾಸಕ ರಾಜೇಶ್ ನಾಯ್ಕ್ ಅವರ ಸೂಚನೆಯಂತೆ ಎಲ್ಲಾ ಸಂತ್ರಸ್ಥರಿಗೂ ತಾರತಮ್ಯವಿಲ್ಲದೆ ಪರಿಹಾರಧನ ವಿತರಿಸಲಾಗಿದೆ.

By suddi9

Leave a Reply

Your email address will not be published. Required fields are marked *